ನಿನ್ನೆ ಕಾಬೂಲ್​ನಿಂದ ಬಂದ 16 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಕೇಂದ್ರ ಸಚಿವರಿಗೂ ಆತಂಕ

ನಿನ್ನೆ ಕಾಬೂಲ್​ನಿಂದ ಬಂದ 16 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಕೇಂದ್ರ ಸಚಿವರಿಗೂ ಆತಂಕ

ಒಂದು ಕಡೆದ ಭಯೋತ್ಪಾದಕರ ಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನದಲ್ಲಿ, ಇನ್ನೊಂದು ಕಡೆ ಕೊರೊನಾ ಸೇರಿದಂತೆ ಹಲವು ಸಾಂಕ್ರಾಮಿಕಗಳು ತಾಂಡವವಾಡುತ್ತಿವೆ. ಅದ್ರಲ್ಲೂ ಕೊರೊನಾ ಸೋಂಕು ಹೆಚ್ಚಾಗಿ ಹರಡುತ್ತಿದೆ. ಇದಕ್ಕೆ ಉದಾಹರಣೆ ಅನ್ನೋ ಹಾಗೆ ನಿನ್ನೆ ತಾನೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದು 78 ಜನರಲ್ಲಿ 16 ಜನರಿಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ. ಹೀಗಾಗಿ ಎಲ್ಲ 78 ಜನರನ್ನೂ ಸದ್ಯಕ್ಕೆ ಕ್ವಾರಂಟೀನ್ ಮಾಡಲಾಗಿದೆ.

ಸಚಿವ ಹರ್​ದೀಪ್​ ಸಿಂಗ್ ಪುರಿಗೂ ಆತಂಕ

ಇನ್ನು ನಿನ್ನೆ ಅಫ್ಘಾನಿಸ್ತಾನದಂದಿ ಮೂರು ಗುರು ಗ್ರಂಥ್ ಸಾಹೀಬ್​​ ಅನ್ನು ಕೂಡ ಮೂವರು ಸಿಖ್ ಗ್ರಂತಿಗಳು ಅಫ್ಘಾನಿಸ್ತಾನದಿಂದ ತಂದಿದ್ದರು. ಅದನ್ನು ಕೇಂದ್ರ ಸಚಿವರಾದ ಹರ್​ದೀಪ್ ಸಿಂಗ್ ಪುರಿ ಅವರು ಸ್ವತಃ ಹೋಗಿ ಸ್ವಾಗತಿಸಿದ್ದರು. ತಮ್ಮ ತಲೆ ಮೇಲೆ ಪವಿತ್ರ ಗ್ರಂಥವನ್ನು ಹೊತ್ತು ತಂದಿದ್ದರು. ಆದ್ರೆ ಸದ್ಯ ಬಂದ ಮಾಹಿತಿ ಪ್ರಕಾರ ಆ ಮೂರೂ ಗ್ರಂಥಿಗಳಿಗೂ ಕೊರೊನಾ ಪಾಸಿಟಿವ್ ಅಂತಾ ತಿಳಿದು ಬಂದಿದೆ. ಹೀಗಾಗಿ, ಕೇಂದ್ರ ಸಚಿವರಿಗೂ ಕೊರೊನಾ ಆತಂಕ ಎದುರಾಗಿದೆ.

 

 

Source: newsfirstlive.com Source link