ವಿಸ್ಮಯಕಾರಿ ಮೂಡುಗಲ್ಲು ಗುಹಾಂತರ ಕೇಶವನಾಥ ದೇವಾಲಯಕ್ಕೆ ಭೇಟಿ ಕೊಟ್ಟ ರಕ್ಷಿತ್​, ರಿಷಬ್​ ಶೆಟ್ಟಿ

ವಿಸ್ಮಯಕಾರಿ ಮೂಡುಗಲ್ಲು ಗುಹಾಂತರ ಕೇಶವನಾಥ ದೇವಾಲಯಕ್ಕೆ ಭೇಟಿ ಕೊಟ್ಟ ರಕ್ಷಿತ್​, ರಿಷಬ್​ ಶೆಟ್ಟಿ

ಸ್ಯಾಂಡಲ್​​​ವುಡ್​ನ ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ, ನಟ, ನಿರ್ದೇಶಕ ರಿಷಬ್​ ಶೆಟ್ಟಿ ಆಗಾಗ ತಮ್ಮ ಹುಟ್ಟೂರು ಉಡುಪಿ ಜಿಲ್ಲೆಗೆ ಭೇಟಿ ನೀಡುತ್ತಾರೆ. ಇನ್ನು ಈ ಬಾರಿ ರಕ್ಷಿತ್​ ಮತ್ತು ರಿಷಬ್​ ಇಬ್ಬರು ಉಡುಪಿಯ ಜಿಲ್ಲೆಯ ಕುಂದಾಪುರ ತಾಲೂಕಿನ ಪ್ರಸಿದ್ಧ ಗುಹಾಂತರ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

blank

ಹೌದು, ರಿಷಬ್​ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಮುಂದಿನ ಸಿನಿಮಾ ‘ಕಾಂತಾರ’ ಚಿತ್ರದ ಶೂಟಿಂಗ್​ ಲೊಕೇಶನ್​ ನೋಡುವ ಸಲುವಾಗಿ ರಿಷಬ್​ ಶೆಟ್ಟಿ ಮೂಡುಗಲ್ಲು ಶ್ರೀ ಕೇಶವನಾಥೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಇನ್ನು ‘ಕಾಂತಾರ’ ಸಿನಮಾ ಕಂಬಳ ಮತ್ತು ಭೂತಾರಾಧನೆ ಕಥೆ ಆಧಾರದ ಮೇಲೆ ಮೂಡಿಬರುತ್ತಿದೆ. ಈ ವೇಳೆ ನಟ ರಕ್ಷಿತ್​ ಶೆಟ್ಟಿ ಕೂಡ ರಿಷಬ್​ಗೆ ಸಾಥ್​ ನೀಡಿ ತಮ್ಮ ಕುಟುಂಬ ಸಮೇತ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

blank

ಸದ್ಯ ‘ಕಾಂತಾರ’ ಸಿನಿಮಾವನ್ನು ಹೊಂಬಾಳೆ ಫಿಲಂಸ್ ನಿರ್ಮಾಣ ಮಾಡುತ್ತಿದ್ದು, ರಿಷಬ್​ ಶೆಟ್ಟಿ ಕಲ್ಪನೆಯಲ್ಲಿ ಚಿತ್ರ ಮೂಡಿ ಬರುತ್ತಿದೆ. ಇದರ ಜೊತೆ ಶಿವಣ್ಣ ಅಭಿನಯದ 126 ನೇ ಚಿತ್ರಕ್ಕೂ ರಿಷಬ್​ ಶೆಟ್ಟಿ ಆಕ್ಷನ್​ ಕಟ್​ ಹೇಳುತ್ತಿದ್ದಾರೆ. ಇನ್ನು ಸಿಂಪಲ್​ ಸ್ಟಾರ್​ ರಕ್ಷಿತ್​ ಶೆಟ್ಟಿ ಆಭಿನಯದ ‘ಚಾರ್ಲಿ777’ ಚಿತ್ರ ರಿಲೀಸ್​ಗೆ ಸಜ್ಜಾಗಿದೆ. ಸದ್ಯ ರಕ್ಷಿತ್​ ಶೆಟ್ಟಿ ‘ಸಪ್ತ ಸಾಗರದಚೆ ಎಲ್ಲೋ’ ಸಿನಿಮಾದ ಸೆಕೆಂಡ್ ಆಫ್​ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ.

blank

Source: newsfirstlive.com Source link