ಬಿಜೆಪಿ ತೆಕ್ಕೆಗೆ ಮೈಸೂರು ಮೇಯರ್ ಪಟ್ಟ.. ಕಮಲದ ಕಾರ್ಯತಂತ್ರ ಯಶಸ್ವಿಯಾಗಿದ್ದು ಹೇಗೆ..?

ಬಿಜೆಪಿ ತೆಕ್ಕೆಗೆ ಮೈಸೂರು ಮೇಯರ್ ಪಟ್ಟ.. ಕಮಲದ ಕಾರ್ಯತಂತ್ರ ಯಶಸ್ವಿಯಾಗಿದ್ದು ಹೇಗೆ..?

ಮೈಸೂರು: ಮಹಾನಗರ ಪಾಲಿಗೆ ಮೇಯರ್ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಪಡೆದು ಅಧಿಕಾರ ಪಡೆದುಕೊಂಡಿದೆ. ಕಾಂಗ್ರೆಸ್​​, ಬಿಜೆಪಿ ಹಾಗೂ ಜೆಡಿಎಸ್​ ಪಕ್ಷಗಳ ನಡುವೆ ನಡೆದ ಪೈಪೋಟಿಯಲ್ಲಿ ಮೇಯರ್​ ಪಟ್ಟ ದಕ್ಕಿಸಿಕೊಳ್ಳುವಲ್ಲಿ ಬಿಜೆಪಿ ಕಾರ್ಯತಂತ್ರ ಫಲ ನೀಡಿದೆ.

ಮೇಲ್ನೋಟಕ್ಕೆ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ಮೇಯರ್ ಪಟ್ಟಕ್ಕಾಗಿ ನಡೆದ ಹಗ್ಗಜಗ್ಗಾಟದಲ್ಲಿ ಬಿಜೆಪಿ ಅಧಿಕಾರವನ್ನು ಪಡೆದುಕೊಂಡಿದ್ದು, ಜಾಣ ನಡೆಯೊಂದಿಗೆ ಜೆಡಿಎಸ್​, ಬಿಜೆಪಿಗೆ ಬಾಹ್ಯ ಬೆಂಬಲ‌ ನೀಡಿದ್ದಾರೆ. ಜೆಡಿಎಸ್​ ಬಾಹ್ಯ ಬೆಂಬಲ ಪಡೆಯುವಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನಡೆಸಿದ ಕಾರ್ಯತಂತ್ರ ಯಶಸ್ವಿಯಾಗಿದೆ ಎನ್ನಲಾಗಿದೆ.

blank

ಪಾಲಿಕೆ ಮೇಯರ್ ಚುನಾವಣೆಗೆ ಇಂದು ಬೆಳಗ್ಗೆ ಮೂರು ಪಕ್ಷದ ಅಭ್ಯರ್ಥಿಗಳು ಇಂದು ಬೆಳಗ್ಗೆ ನಾಮಪತ್ರ ಸಲ್ಲಿಕೆ ಮಾಡಿದ್ದರು. ಕಾಂಗ್ರೆಸ್​ ಅಭ್ಯರ್ಥಿಯಾಗಿ ವಾರ್ಡ್​​ 32ರ ಸದಸ್ಯೆ ಹೆಚ್.ಎಂ. ಶಾಂತಕುಮಾರಿ, ಜೆಡಿಎಸ್​​​ನಿಂದ ವಾರ್ಡ್​ 37ರ ಅಶ್ವಿನಿ ಆರ್ ಅನಂತು‌ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ 59ನೇ ವಾರ್ಡ್ ನ ಸುನಂದಾ ಪಾಲನೇತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು. ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದ ಕಾರಣ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು.

ಕಳೆದ ಬಾರಿ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆದುಕೊಂಡಿದ್ದ ಕಾಂಗ್ರೆಸ್​, ಜೆಡಿಎಸ್​ಗಳ ಮೈತ್ರಿ ಈ ಮುರಿದು ಬಿದ್ದಿದೆ. ಕಾಂಗ್ರೆಸ್​ ತನಗೆ ಅಧ್ಯಕ್ಷ ಸ್ಥಾನ ನೀಡಲೇಬೇಕು ಎಂದು ಪಟ್ಟು ಹಿಡಿತ ಕಾರಣಕ್ಕೆ ಜೆಡಿಎಸ್​​ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದುಕೊಂಡಿತ್ತು. ಆ ಮೂಲಕ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿ ಜಾಣ ನಡೆ ಪ್ರದರ್ಶನ ಮಾಡಿದೆ. ಒಟ್ಟು 72 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ 25 ಮತ, ಕಾಂಗ್ರೆಸ್​​ನ ​ ಹೆಚ್.ಎಂ. ಶಾಂತಕುಮಾರಿ 20, ಜೆಡಿಎಸ್​​ ಪಕ್ಷದ ಅಶ್ವಿನಿ ಆರ್ ಅನಂತು‌ ಮತ 21 , ಇತರೆ 6 ಮತ ಪಡೆದುಕೊಂಡಿದ್ದಾರೆ.

Source: newsfirstlive.com Source link