ಸ್ವೆಟರ್ ಹಗರಣ ಆರೋಪ; ದ.ಸಂ.ಸ ಅಧ್ಯಕ್ಷನ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸುತ್ತೇನೆಂದ ಜಗ್ಗೇಶ್

ಸ್ವೆಟರ್ ಹಗರಣ ಆರೋಪ; ದ.ಸಂ.ಸ ಅಧ್ಯಕ್ಷನ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸುತ್ತೇನೆಂದ ಜಗ್ಗೇಶ್

ಬೆಂಗಳೂರು: ಶಾಲಾ ಮಕ್ಕಳಿಗೆ ಸ್ವೆಟರ್ ವಿತರಿಸುವ ಯೋಜನೆಯ ಟೆಂಡರ್​ನ್ನು ನಟ ಕೋಮಲ್ ಪಡೆದುಕೊಂಡಿದ್ದರು. ಕಳೆದ ವರ್ಷ ಕೊರೊನಾ ಕಾರಣದಿಂದ ತರಗತಿಗಳು ನಡೆದಿಲ್ಲ.. ಆದರೂ ಮಕ್ಕಳಿಗೆ ಸ್ವೆಟರ್ ವಿತರನೆ ಮಾಡಿದ್ದೇವೆ ಅಂತ ಟೆಂಡರ್ ಪಡೆದವರಿಗೆ ಹಣ ಬಿಡುಗಡೆ ಮಾಡಲಾಗಿದೆ. ಹಣ ಬಿಡುಗಡೆ ಮಾಡುವಂತೆ ಪಾಲಿಕೆ ಅಧಧಿಕಾರಿಗಳ ಮೇಲೆ ಸಚಿವ ಆರ್. ಅಶೋಕ್ ಹಾಗೂ ನಟ ಜಗ್ಗೇಶ್ ಒತ್ತಡ ಹಾಕಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ಸಿ.ಎಸ್.ರಘು ಗಂಬೀರ ಆರೋಪ ಹೊರಿಸಿದ್ದಾರೆ.

ಇದನ್ನೂ ಓದಿ: ‘ಶಾಲಾ ಮಕ್ಕಳ ಸ್ವೇಟರ್​​​ ಹೆಸರಲ್ಲಿ ₹1.7 ಕೋಟಿ ಹಣ ಗುಳುಂ’ ನಟ ಕೋಮಲ್ ವಿರುದ್ಧ ಗಂಭೀರ ಆರೋಪ

ಈ ಹಿನ್ನೆಲೆ ಪ್ರತಿಕ್ರಿಯೆ ನೀಡಿರುವ ನಟ ಕೋಮಲ್ ಆರೋಪವನ್ನ ಅಲ್ಲಗಳೆದಿದ್ದಾರೆ. ಇದೀಗ ಆರೋಪದಲ್ಲಿ ತನ್ನ ಹೆಸರನ್ನು ಸಂಬಂಧವಿಲ್ಲದೇ ಎಳೆದು ತರಲಾಗಿದೆ ಎಂದಿರುವ ಜಗ್ಗೇಶ್ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ ರಘು ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡೋದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಸ್ವೇಟರ್​ ಹಗರಣ ಆರೋಪ; ‘ನನಗೂ..ಅದಕ್ಕೂ ಸಂಬಂಧವಿಲ್ಲ’ ನ್ಯೂಸ್​ಫಸ್ಟ್​ಗೆ ಕೋಮಲ್​ ಸ್ಪಷ್ಟನೆ

ಈ ಕುರಿತು ಟ್ವೀಟ್ ಮಾಡಿರುವ ನಟ ಜಗ್ಗೇಶ್.. ಸಂಬಂಧವಿಲ್ಲದೇ ನನ್ನ ಹೆಸರು ಹಾಗೂ ಆರ್. ಅಶೋಕ್ ಅವರ ಹೆಸರು ತೆಗೆದು ದಲಿತ ಸಂಘರ್ಷ ಸಮಿತಿಯ ರಘು ಎಂಬವವರು ಅಪಮಾನಿಸಿದ್ದಾರೆ. ಇದು ನನಗೆ ಬಹಳ ನೋವುಂಟು ಮಾಡಿದೆ. ಹಾಗಾಗಿ ಸಂಬಂಧವಿಲ್ಲದೇ ನನ್ನ ಬಗ್ಗೆ ಸುಳ್ಳು ಆಪಾದನೆ ಮಾಡಿರುವ ಮಾನ್ಯ ರಘುರವರ ಮೇಲೆ ಮಾನನಷ್ಟ ಆಪಾದನೆ ದಾಖಲಿಸುತ್ತಿರುವೆ. ದಯಮಾಡಿ ಯಾರೇ ಆಗಲಿ ಸತ್ಯ ಅರಿತು ನುಡಿಯುವ ಗುಣ ಬೆಳೆಸಿಕೊಳ್ಳಿ ಎಂದಿದ್ದಾರೆ.

 

Source: newsfirstlive.com Source link