‘ಪುಷ್ಪ’ನ ಅಂಗಳದಲ್ಲಿ ಡಾಲಿ ಫೈಟ್ ಸೋರಿಕೆ -‘ಜಾಲಿ ರೆಡ್ಡಿ’ ಲುಕ್​​ಗೆ ಡಾಲಿ ಫ್ಯಾನ್ಸ್ ಫುಲ್ ಫಿದಾ

‘ಪುಷ್ಪ’ನ ಅಂಗಳದಲ್ಲಿ ಡಾಲಿ ಫೈಟ್ ಸೋರಿಕೆ -‘ಜಾಲಿ ರೆಡ್ಡಿ’ ಲುಕ್​​ಗೆ ಡಾಲಿ ಫ್ಯಾನ್ಸ್ ಫುಲ್ ಫಿದಾ

ಡಾಲಿ ಧನಂಜಯ್ ಅವರ ಬರ್ತ್​​ಡೇ ಪ್ರಯುಕ್ತ ಸಾಲು ಸಾಲು ಗಿಫ್ಟ್​​​​ಗಳು ಹೊರ ಬಂದ್ವು. ಒಂದಕ್ಕಿಂತ ಒಂದು ಚೆಂದ ಚಮತ್ಕಾರ ಮಾಡುತ್ತಿವೆ. ಡಾಲಿ ಬರ್ತ್​ಡೇಗೆ ಹೊರ ಬಂದ ಗಿಫ್ಟ್​ಗಳಲ್ಲಿ ಪುಷ್ಪ ಸಿನಿಮಾದ ಗಿಫ್ಟ್ ಸಖತ್ ಸೌಂಡ್ ಮಾಡ್ತಿದೆ. ಜೊತೆಗೆ ‘ಪುಷ್ಪ’ನ ಅಂಗಳದಿಂದ ಡಾಲಿ ನಟನೆ ಫೈಟ್ ಸೀನ್ ಒಂದು ಲೀಕ್ ಆಗಿದೆ.

ನೋಡಿ ಎರಡೂವರೆ ಗಂಟೆಯ ಸಿನಿಮಾ ಎಷ್ಟೆಲ್ಲ ಕುತೂಹಲ ಕೆರಳಿಸುತ್ತದೆ ಅಂತ. ಅದಕ್ಕೆ ತಿಳಿದು ಉಳಿದದವರು ಹೇಳೋದು ಸಿನಿಮಾ ಅನ್ನೋದೆ ಒಂದು ಮಾಯೆ ಅಂತ. ಧನಂಜಯ ಟಗರು ಸಿನಿಮಾದ ನಂತರ ಡಾಲಿ ಧನಂಜಯ್ ಆಗಿ ಪ್ರೇಕ್ಷಕರ ಮನದ ಮನೆಯಲ್ಲಿ ಜಾಗ ಪಡೆದುಬಿಟ್ಟರು. ಕನ್ನಡದ ಜೊತೆಗೆ ಅಕ್​ಪಕ್ಕದ್ ಇಂಡಿಸ್ಟ್ರಿಯಲ್ಲೂ ತನ್ನ ನಟನೆಯ ಗತ್ತು ಗಮತ್ತನ್ನ ಚೆಲ್ಲುತ್ತಿದ್ದಾರೆ.

blank

ರೈಟ್ ನವ್ ಡಾಲಿ ಧನಂಜಯ ಮಲಯಾಳಂ , ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.. ಡಾಲಿ ನಟನೆಯ ಬಹುನಿರೀಕ್ಷಿತ ತೆಲುಗು ಸಿನಿಮಾ ಪುಷ್ಪ.. ಈ ಚಿತ್ರದ ಪಾತ್ರದ ಬಗ್ಗೆ ಚಿತ್ರಪ್ರೇಮಿಗಳೇ ತಂಡದ ಜೊತೆಗೆ ನಟ ಡಾಲಿ ಧನಂಜಯ್ ಹೇಳಿದ ಮಾತು ಇಂತಿದೆ.

ಕನ್ನಡದ ಡಾಲಿ ಈಗ ಟಾಲಿವುಡ್​​​ನಲ್ಲಿ ಜಾಲಿ. ಪುಷ್ಪ ಸಿನಿಮಾ ಹೊರ ಬಂದ ನಂತರ ಪ್ರೇಕ್ಷಕರು ಡಾಲಿ ಧನಂಜಯ ಅವರನ್ನ ಜಾಲಿ ರೆಡ್ಡಿ ಅನ್ನಲು ಶುರು ಹಚ್ಚಿಕೊಂಡ್ರು ಅಚ್ಚರಿ ಪಡಬೇಕಿಲ್ಲ. ಧನಂಜಯ್ ಅವರ ಬರ್ತ್​ಡೇ ಪ್ರಯುಕ್ತ ಸುಕುಮಾರ್ ಸಾರಥ್ಯದ ಪುಷ್ಪ ಫಿಲ್ಮ್ ಟೀಮ್ ಹೊಸ ಪೋಸ್ಟರ್ ಒಂದನ್ನ ಹೊರ ಬಿಟ್ಟಿದೆ. ಪುಷ್ಪದಲ್ಲಿ ಡಾಲಿಯ ಲುಕ್ಕು ನೋಡುಗರಿಗೆ ಕುತೂಹಲದ ಕಿಕ್ಕನ ಕೊಡ್ತಿದೆ.

blank

ಪುಷ್ಪನ ಅಂಗಳದಿಂದ ಹೊಸ ಲುಕ್ ಏನೋ ಹೊರ ಬಂತು ನಿಜ. ಆದ್ರೆ ಲುಕ್​ನ ಜೊತೆ ಒಂದು ಫೈಟಿಂಗ್ ಸೀನ್ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಡಾಲಿ ಅಲ್ಲು ಅರ್ಜುನ್ ಜೊತೆ ಕಾದಾಡುತ್ತಿರೋ ದೃಶ್ಯವದು.. ಈ ದೃಶ್ಯ ನೋಡ್ತಿದ್ರೆ ಡಾಲಿ ಧನಂಜಯ್ ಪುಷ್ಪದಲ್ಲಿ ಪವರ್ ಫುಲ್ ಪಾತ್ರವನ್ನೇ ಮಾಡಿದ್ದಾರೆ ಎಂದು ಅಂದಾಜಿಸ ಬಹುದು.

ಸಿನಿಮಾ ಮಂದಿ ಅದೆಷ್ಟು ಮುತ್ತುವರ್ಜಿ ವಹಿಸಿ ಕುತೂಹಲವನ್ನ ಕಾಪಾಡಿಕೊಂಡ್ರು ಅಲ್ಲೊಂದು- ಇಲ್ಲೊಂದು ಕದ್ದು ಹಂಚಿ ಹರಡೋ ವಿಚಾರ ಆಗ್ತಾನೇ ಇರ್ತಾವೆ.

Source: newsfirstlive.com Source link