ತುಮಕೂರಿಗೆ ತೆರಳಿ ಅಭಿಮಾನಿಗಳನ್ನು ಭೇಟಿಯಾದ ನಟ ಕಿರಣ್​ ರಾಜ್​

ತುಮಕೂರಿಗೆ ತೆರಳಿ ಅಭಿಮಾನಿಗಳನ್ನು ಭೇಟಿಯಾದ ನಟ ಕಿರಣ್​ ರಾಜ್​

ಕನ್ನಡತಿ ಧಾರಾವಾಹಿ ಅಂದಾಕ್ಷಣ ನಮಗೆ ಮೊದಲು ನೆನಪಾಗೋದು ರಂಜಿನಿ ರಾಘವನ್​ ಹಾಗೂ ನಟ ಕಿರಣ್​ರಾಜ್​. ಇವರಿಬ್ಬರ ಜೋಡಿ ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಹರ್ಷ ಭುವಿಯನ್ನು ಕೇರ್​ ಮಾಡುವ ರೀತಿ ಹಾಗೂ ಭುವಿ ಹರ್ಷನಿಗೆ ಕನ್ನಡ ಕಲಿಸುವ ರೀತಿ ನೋಡುಗರಿಗೆ ತುಂಬಾನೇ ಇಷ್ಟವಾಗತ್ತೆ.

ಅದರಲ್ಲೂ ಮುಖ್ಯಾವಾಗಿ ಕಿರಣ್​ರಾಜ್​ ಅವರಿಗೆ ಅಭಿಮಾನಿಗಳ ಬಗಳ ತುಂಬಾನೆ ಜಾಸ್ತಿಯಿದೆ. ಅವರ ನ್ಯಾಚುರಲ್​​ ಆ್ಯಕ್ಟಿಂಗ್​ ಸ್ಕಿಲ್ಸ್​, ಅವರ ಡೈಲಾಗ್ಸ್​, ಮುಖ್ಯವಾಗಿ ಅವರ ಸ್ಟೈಲ್​ ನೋಡಿ ಎಷ್ಟೋ ಹೆಣ್ಣು ಮಕ್ಕಳು ಫಿದಾ ಆಗಿ, ಮದುವೆಯಾದ್ರೆ ಕಿರಣ್​ ರಾಜ್​ ಅಂತಾ ಹುಡುಗನನ್ನೇ ಮದುವೆಯಾಗ್ಬೇಕು ಅಂತಿದ್ದಾರೆ. ಜೊತೆಗೆ ನಮ್ಮ ಗಂಡ್​ಹೈಕ್ಳು ಕೂಡಾ ಕಿರಣ್​ರಾಜ್​ ಆ್ಯಟಿಟ್ಯೂಡ್​ ನೋಡಿ ಅವರನ್ನ ಫಾಲೋ ಮಾಡ್ತಿದ್ದಾರೆ.

blank

ಇಷ್ಟೆಲ್ಲಾ ಕಿರಣ್​ ರಾಜ್​ ​ಬಗ್ಗೆ ಹೇಳೊಕೆ ಒಂದು ಮುಖ್ಯ ಕಾರಣ ಇದೆ. ಅದೂ ಏನಪ್ಪಾ ಅಂದ್ರೆ ಕಿರಣ್​ ತಮ್ಮ ಅಭಿಮಾನಿಗಳನ್ನಾ ಭೇಟಿ ಮಾಡೋಕೆ ನಿನ್ನೆ ತುಮಕೂರಿಗೆ ಭೇಟಿ ನೀಡಿದ್ರು.. ಅಲ್ಲಿಯ ಫ್ಯಾನ್ಸ್​ ನೋಡಿ ಅಬ್ಬಬ್ಬಾ ಅನಿಸಿತು. ಕಿರಣ್​ ಜೊತೆ ಸೆಲ್ಫಿ ತೆಗೆದುಕೊಳ್ಳೋಕೆ, ಮಾತನಾಡಿಸೋಕೆ ಸಾಕಷ್ಟು ಫ್ಯಾನ್ಸ್​ ನೆರೆದಿದ್ರು.

blank

ಕಿರಣ್​ ಬಳಿ ಫ್ಯಾನ್ಸ್ ಮೀಟ್​ ಆದ ಕ್ಷಣದ ಬಗ್ಗೆ ಕೇಳಿದಾಗ.. ನನಗೆ ಫ್ಯಾನ್ಸ್​ ಮೀಟ್​ ಮಾಡೋದು ಅಂದ್ರೆ ತುಂಬಾನೆ ಇಷ್ಟ.. ಅವರ ಪ್ರೀತಿ ಅಶೀರ್ವಾದ ಇದ್ರೆ ನಾವೂ ಬೆಳೆಯೋಕೆ ಸಾಧ್ಯ. ನಾನು ನನ್ನ ಅಭಿಮಾನಿಗಳಿಗೆ ಯಾವತ್ತೂ ಚಿರಋಣಿಯಾಗಿರ್ತೀನಿ ಅಂತಾ ಕಿರಣ್ ​ ಹೇಳಿದ್ರು.

ಧಾರಾವಾಹಿಯಲ್ಲಿ ಮಾತ್ರವಲ್ಲದೆ, ಸದ್ಯ ಕಿರಣ್​ ಬಿಗ್​ಬಾಸ್​ ಮನೆಯಲ್ಲಿಯೂ ಸಖತ್​ ಸದ್ದು ಮಾಡ್ತಾಯಿದ್ದಾರೆ.. ಕಿರಣ್​ ಮುಂದಿನ ಭವಿಷ್ಯ ಕೂಡಾ ಹೀಗೇ ಇರಲಿ ಎಂಬುವುದು ನಮ್ಮ ಆಶಯ.

Source: newsfirstlive.com Source link