ನಮ್ಮನ್ನು ತಾಯ್ನಾಡಿಗೆ ಕರೆತಂದಿದ್ದಕ್ಕೆ ಥ್ಯಾಂಕ್ಸ್; ಮೋದಿಗೆ ಹಾಡಿನ ಮೂಲಕ ಧನ್ಯವಾದ ಸಲ್ಲಿಸಿದ ಸಿಖ್ಖರು

ನಮ್ಮನ್ನು ತಾಯ್ನಾಡಿಗೆ ಕರೆತಂದಿದ್ದಕ್ಕೆ ಥ್ಯಾಂಕ್ಸ್; ಮೋದಿಗೆ ಹಾಡಿನ ಮೂಲಕ ಧನ್ಯವಾದ ಸಲ್ಲಿಸಿದ ಸಿಖ್ಖರು

ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ವಿದೇಶಗಳು ಅಫ್ಘಾನಿಸ್ತಾನದಲ್ಲಿ ನೆಲೆಸಿರುವ, ಕೆಲಸ ಮಾಡುತ್ತಿರುವ ತಮ್ಮ ದೇಶದ ಪ್ರಜೆಗಳನ್ನು ವಾಪಸ್ ಕರೆಸಿಕೊಳ್ಳುತ್ತಿವೆ. ಭಾರತ ಸರ್ಕಾರ ಕೂಡ ಹಲವು ವಿಮಾನಗಳನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸಿ ನೂರಾರು ದೇಶದ ಪ್ರಜೆಗಳನ್ನು ವಾಪಸ್ ಕರೆಸಿಕೊಂಡಿದೆ.

ಇದನ್ನೂ ಓದಿ: ಮುಂದುವರಿದ ಆಪರೇಷನ್​​​ ದೇವಿ ಶಕ್ತಿ; ಕಾಬೂಲ್‌ನಿಂದ ಮತ್ತೆ 78 ಭಾರತೀಯರ ಸ್ಥಳಾಂತರ

ಈ ಮಧ್ಯೆ ಅಫ್ಘಾನಿಸ್ತಾನದಲ್ಲಿ ನೆಲೆಸಿದ್ದ ಅಥವಾ ಕೆಲಸ ಮಾಡುತ್ತಿದ್ದ ಸಿಖ್ ಸಮುದಾಯದ ನೂರಾರು ಜನರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕರೆತಂದಿದೆ. ಇದರಿಂದ ಸಂತಸಗೊಂಡ ಸಿಖ್ ಸಮುದಾಯದವರು ತಮ್ಮನ್ನು ಸುರಕ್ಷಿತವಾಗಿ ತಾಯ್ನೆಲಕ್ಕೆ ಕರೆಸಿಕೊಂಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ. ತಮ್ಮದೇ ಭಾಷೆಯಲ್ಲಿ ಹಾಡುವ ಮೂಲಕ ಮೋದಿಯವರ ಬ್ಯಾನರ್ ಮುಂದೆ ನಿಂತು ಹತ್ತಾರು ಮಂದಿ ಮೋದಿಯವರಿಗೆ ಧನ್ಯವಾದಗಳು ಎಂದು ಹಾಡಿದ್ದಾರೆ.

ಇದನ್ನೂ ಓದಿ: ನಿನ್ನೆ ಕಾಬೂಲ್​ನಿಂದ ಬಂದ 16 ಜನರಲ್ಲಿ ಕೊರೊನಾ ಸೋಂಕು ಪತ್ತೆ; ಕೇಂದ್ರ ಸಚಿವರಿಗೂ ಆತಂಕ

Source: newsfirstlive.com Source link