ಸುದೀಪ್ ಬರ್ತ್​​ಡೇ K3 ರಿಲೀಸ್ ಅನೌನ್ಸ್​​ಮೆಂಟ್ -RRR ಬರೋ ದಿನ ಕೋಟಿಗೊಬ್ಬ ರಿಲೀಸ್ ಆಗುತ್ತಾ?

ಸುದೀಪ್ ಬರ್ತ್​​ಡೇ K3 ರಿಲೀಸ್ ಅನೌನ್ಸ್​​ಮೆಂಟ್ -RRR ಬರೋ ದಿನ ಕೋಟಿಗೊಬ್ಬ ರಿಲೀಸ್ ಆಗುತ್ತಾ?

ಕಳೆದ ನಾಲ್ಕು ವರ್ಷಗಳಿಂದ ಕಿಚ್ಚ ಸುದೀಪ್ ಅವರ ಅಭಿಮಾನಿ ಕುತೂಹಲದ ಕೋಟೆಯಲ್ಲಿ ಬೆಚ್ಚನೆ ಇರೋ ಸಿನಿಮಾ ಕೋಟಿಗೊಬ್ಬ-3. ಜನರ ಮನ ಮುಟ್ಟಕ್ಕೆ ಏನ್ ಬೇಕೋ ಎಲ್ಲಾ ಕುತೂಹಲದ ಕಂಟೆಂಟ್​​ಗಳನ್ನ ಹೊರ ಬಿಟ್ಟು ಸದ್ದು ಮಾಡ್ತಿರೋ ಮೂರನೇ ಕೋಟಿಗೊಬ್ಬ ಯಾವಾಗ ರಿಲೀಸ್ ಅನ್ನೋದೆ ನಿರ್ಮಾಪಕರಿಗೂ ಗೊತ್ತಿರದ ಸಸ್ಪೆನ್ಸ್​​. ಈಗ ಸಸ್ಪೆನ್ಸ್​​ಗೆ ಮತ್ತೊಂದು ಸಸ್ಪೆನ್ಸ್ ಆ್ಯಡ್ ಆಗಿದೆ. ಥ್ರಿಬಲ್ ಆರ್ ಸಿನಿಮಾದ ಮುಂದೆ ಕೋಟಿಗೊಬ್ಬ ಅನ್ನೋ ಮಾತುಗಳು ಕೇಳಿ ಬರುತ್ತಿದೆ.

blank

ಬಾಕ್ಸಾಫೀಸ್ ವಾರ್ ಆಗಾಗ ಸಿನಿಮಾ ಸಿನಿಮಾಗಳಲ್ಲಿ ಆಗುತ್ತಿರುತ್ತವೆ. ಅದರಲ್ಲೂ ದೊಡ್ಡ ದೊಡ್ಡ ಪರಭಾಷ ಸಿನಿಮಾಗಳ ಮುಂದೆ ನಮ್ಮ ನಾಡಿನ ಸಿನಿಮಾಗಳು ಎದುರು ನಿಂತು ಭರ್ಜರಿ ಪ್ರದರ್ಶನವನ್ನ ನೋಡೋದೇ ಒಂದು ರೋಚಕ ಪಂದ್ಯವಿದಂಗೆ. ಬಾಹುಬಲಿ ಭಾಗ ಒಂದು ಬಂದಾಗ ಕನ್ನಡದ ರಂಗಿತರಂಗ ಸೆಡ್ಡು ಹೊಡೆದು ಗೆದ್ದಿತ್ತು. ಬಾಹುಬಲಿ 2 ಬಂದಾಗ ಅಪ್ಪು ಅವರ ರಾಜಕುಮಾರ ಸಿನಿಮಾ ಗೆದ್ದು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎಂದು ಸಾರಿತ್ತು. ಈಗ ಅಂತದ್ದೆ ಸಂದರ್ಭ ಎದುರಾಗೋ ಸಂಭವ ಕಾಣುತ್ತಿದೆ.

‘ರೌದ್ರ ರಣ ರುಧಿರ’ ಎದುರು ಕೋಟಿಗೊಬ್ಬ ಬರುತ್ತಾ..?
ಅಕ್ಟೋಬರ್ 14ನೇ ತಾರೀಕ್​ ಮೇಲೆ K-3 ಚಿತ್ರದ ಕಣ್ಣು..!
2018 ಮಾರ್ಚ್ 2ನೇ ತಾರೀಖ್​​ನಿಂದ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಕುತೂಹಲದ ಕೋಟೆಯಲ್ಲಿ ಬೆಚ್ಚನೆ ಇರೋ ಸಿನಿಮಾ ಕೋಟಿಗೊಬ್ಬ 3.. ಜನರ ಮನ ಮುಟ್ಟಕ್ಕೆ ಏನ್ ಬೇಕೋ ಎಲ್ಲಾ ಕುತೂಹಲದ ಕಂಟೆಂಟ್​​ಗಳನ್ನ ಹೊರ ಬಿಟ್ಟು ಸದ್ದು ಮಾಡ್ತಿರೋ ಮೂರನೇ ಕೋಟಿಗೊಬ್ಬ ಯಾವಾಗ ರಿಲೀಸ್ ಅನ್ನೋದೆ ನಿರ್ಮಾಪಕರಿಗೂ ಗೊತ್ತಿರದ ಸಸ್ಪೆನ್ಸ್​​… ಈಗ ಸಸ್ಪೆನ್ಸ್​​ಗೆ ಮತ್ತೊಂದು ಸಸ್ಪೆನ್ಸ್ ಆ್ಯಡ್ ಆಗಿದೆ.. ಥ್ರಿಬಲ್ ಆರ್ ಸಿನಿಮಾದ ಮುಂದೆ ಕೋಟಿಗೊಬ್ಬ ಅನ್ನೋ ಮಾತುಗಳು ಕೇಳಿ ಬರುತ್ತಿದೆ..?

blank

ಅಕ್ಟೋಬರ್ 14 2021ರ ಡೇಟ್ ಮೇಲೆ ಕೋಟಿಗೊಬ್ಬ 3 ತಂಡ ಗುರಿ ಇಟ್ಟಿದೆ. ಈ ಹಿಂದೆ ಕೋಟಿಗೊಬ್ಬ 3 ತಂಡ ರಿಲೀಸ್ ಮಾಡಲು ಅಂದುಕೊಂಡಿದ್ದ ಡೇಟ್​​ ಸಿನಿಮಾವನ್ನ ರಿಲೀಸ್ ಮಾಡಲು ಆಗಿಲ್ಲ. ಒಂದನೇ ಲಾಕ್ ಡೌನ್, ಎರಡನೇ ಲಾಕ್ ಡೌನ್​ಗಳನೆಲ್ಲ ನೋಡಿರೋ ಸೂರಪ್ಪ ಬಾಬು ನಿರ್ಮಾಣದ ಕೆ-3 ಸಿನಿಮಾ ಈಗ 100 ಪರಸೆಂಟ್ ಸೀಟು ಬರ್ತಿಯ ಅವಕಾಶಕ್ಕೆ ಎದುರು ನೋಡ್ತಿದೆ. ಒಂದುವೇಳೆ ಸರ್ಕಾರ 100 ಪರಸೆಂಟು ಸೀಟು ಬರ್ತಿಗೆ ಥಿಯೇಟರ್​ಗಳಿಗೆ ಅವಕಾಶ ಕೊಟ್ರೇ ಕೋಟಿಗೊಬ್ಬ 3 ಅಕ್ಟೋಬರ್ 14ನೇ ತಾರೀಖ್ ಪ್ರೇಕ್ಷಕರ ಮುಂದೆ ಬರೋ ಯೋಚನೆ ಮಾಡಿದೆಯಂತೆ. ಕಿಚ್ಚ ಸುದೀಪ್ ಅವರ ಬರ್ತ್​ಡೇ ದಿನ ಅಂದ್ರೆ ಸೆಪ್ಟೆಂಬರ್ 2ನೇ ತಾರೀಖ್ ಕೋಟಿಗೊಬ್ಬ 3 ರಿಲೀಸ್ ಡೇಟ್ ಕನ್ಫರ್ಮ್ ಆಗೋ ಸಾಧ್ಯತೆ ಇದೆ.

blank

ಆದ್ರೆ ಇಲ್ಲೊಂದು ಟ್ವಿಸ್ಟ್ ಇದೆ, ಅಕ್ಟೋಬರ್ 13ನೇ ತಾರೀಖ್ ರಾಜಮೌಳಿ ನಿರ್ದೇಶನದ ಬಹುಭಾಷೆಯ ಪ್ಯಾನ್ ಇಂಡಿಯ ಸಿನ್ಮಾ ರೌದ್ರ ರಣ ರುಧಿರ ಚಿತ್ರ ಬರೋ ದಿನಾಂಕ ಎಂದು ನಿಗಧಿಯಾಗಿದೆ. ಒಂದು ಮಾಹಿತಿಯ ಪ್ರಕಾರ ಈ ಅಕ್ಟೋಬರ್ 13ನೇ ತಾರೀಖ್ ಥ್ರಿಬಲ್ ಆರ್ ಬರೋದು ಡೌಟ್ ಅನ್ನೋ ಮಾತುಗಳು ಕೇಳಿಬರುತ್ತಿವೆ. ಆದ್ರೆ ಒಂದು ವೇಳೆ ರಾಜಮೌಳಿ ಸಿನಿಮಾ ಹೇಳಿದ ಡೇಟ್​​ಗೆ ಬಂದ್ರೆ ಕೋಟಿಗೊಬ್ಬ ವಾರ್ಸಸ್ ಥ್ರಿಬಲ್ ಆರ್ ಎಂದಾಗೋದು ಗ್ಯಾರಂಟಿ. ಒಟ್ಟಿನಲ್ಲಿ ಸಿನಿಮಾ ಮಂದಿಗೆ ಕೋವಿಡ್ ಕಟ್ಟುಪಡಿನಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳೊದೆ ಸಮಸ್ಯೆಯಾಗಿದೆ.

Source: newsfirstlive.com Source link