ಅಫ್ಘಾನಿಸ್ತಾನದ ಪರಿಸ್ಥಿತಿಯಿಂದ ಲಾಭ ಪಡೆಯಲು ಚೀನಾ ಪ್ಲಾನ್.. ತಾಲಿಬಾನ್ ಭೇಟಿಯಾದ ರಾಯಭಾರಿ

ಅಫ್ಘಾನಿಸ್ತಾನದ ಪರಿಸ್ಥಿತಿಯಿಂದ ಲಾಭ ಪಡೆಯಲು ಚೀನಾ ಪ್ಲಾನ್.. ತಾಲಿಬಾನ್ ಭೇಟಿಯಾದ ರಾಯಭಾರಿ

ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡು ಸರ್ಕಾರ ರಚಿಸಲು ಮುಂದಾದ ಬೆನ್ನಲ್ಲೇ ಚೀನಾ ತಾಲಿಬಾನ್ ಆಡಳಿತದ ಅಫ್ಘಾನಿಸ್ತಾನಕ್ಕೆ ಚೀನಾ ಹಣಕಾಸಿನ ನೆರವು ನೀಡೋದಾಗಿ ಹೇಳಿತ್ತು. ಈ ಬೆನ್ನಲ್ಲೇ ಇದೀಗ ಚೀನಾ ರಾಯಭಾರಿಗಳು ಇಂದು ತಾಲಿಬಾನ್ ಸಂಘಟನೆಯ ಸದಸ್ಯರನ್ನ ಭೇಟಿಯಾಗಿದ್ದಾರೆ.

ತಾಲಿಬಾನ್​ನ ವಕ್ತಾರರು ಹೇಳಿರುವ ಪ್ರಕಾರ ಕತಾರ್​ನಲ್ಲಿರುವ ತಾಲಿಬಾನ್​ನ ರಾಜಕೀಯ ಕಚೇರಿಯ ಮುಖಂಡ ಅಬ್ದುಲ್ ಸಲಮ್ ಹನಾಫಿಯವರು ಚೀನ ರಾಯಭಾರಿ ವಾಂಗ್ ಯು ಅವರನ್ನ ಭೇಟಿಯಾಗಿ ರಾಯಭಾರ ಕಚೇರಿಗೆ ಭದ್ರತೆ ನೀಡುವ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪಂಜ್​​ಶಿರ್ ಪ್ರಾಂತ್ಯ ವಶಕ್ಕೆ ಪಡೆಯಲು ಕುತಂತ್ರ -ಮಹಿಳೆ, ಮಕ್ಕಳನ್ನೇ ಗುರಾಣಿಯಾಗಿ ಬಳಸಿಕೊಳ್ತಿರೋ ತಾಲಿಬಾನ್

ಇನ್ನು ಮತ್ತೊಂದು ಪ್ರಮುಖ ವಿಚಾರವೆಂದರೆ ಕಾಬೂಲ್​ನ್ನು ಅಪ್ಘಾನಿಸ್ತಾನ ತನ್ನ ಕೈಸೆರೆ ಮಾಡಿಕೊಳ್ಳುತ್ತಿದ್ದಂತೆಯೇ ಇತರೆ ದೇಶಗಳು ಅಲ್ಲಿನ ರಾಯಭಾರಿ ಕಚೇರಿಗಳನ್ನ ಖಾಲಿಮಾಡಿವೆ. ಆದ್ರೆ ರಷ್ಯಾ ಮತ್ತು ಚೀನಾದ ರಾಯಭಾರಿ ಕಚೇರಿಗಳೂ ಈಗಲೂ ಕಾಬೂಲ್​ನಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ಇನ್ನು ಇತ್ತೀಚೆಗೆ ಚೀನಾ ತಾಲಿಬಾನ್​ನ್ನು ಅಫ್ಘಾನಿಸ್ತಾನದ ನ್ಯಾಯಯುತ ಆಡಳಿತವನ್ನಾಗಿ ಗುರುತಿಸುತ್ತೇವೆ ಎಂದು ಹೇಳಿಕೆ ನೀಡಿದ್ದನ್ನೂ ಇಲ್ಲಿ ಗಮನಿಸಬಹುದು.

ಇದನ್ನೂ ಓದಿ: ಅಫ್ಘಾನ್​​ನಲ್ಲಿ ಉಗ್ರರ ವಿರುದ್ಧ ರೋಷಾಗ್ನಿ; ಬೆಳಗ್ಗೆ 300, ಸಂಜೆ ಮತ್ತೆ 50 ತಾಲಿಬಾನಿಗಳ ಹತ್ಯೆ

ನಿನ್ನೆಯಷ್ಟೇ ಚೀನಾ ಅಫ್ಘಾನಿಸ್ತಾನದ ಸದ್ಯದ ಪರಿಸ್ಥಿತಿಗೆ ಅಮೆರಿಕಾವನ್ನು ದೂಷಿಸಿತ್ತು. ಜೊತೆಗೆ ಅಫ್ಘಾನಿಸ್ತಾನಕ್ಕೆ ಹಣಕಾಸಿನ ನೆರವು ನೀಡೋದಾಗಿ ಹೇಳಿತ್ತು.

Source: newsfirstlive.com Source link