ಬಿಎಸ್​ವೈ ಸಂಬಂಧಿ ಈಗ ಮೈಸೂರು ಮೇಯರ್; ಬೇರುಗಳು ವಿಸ್ತಾರಗೊಳ್ಳುತ್ತಿವೆ ಎಂದ ಮಾಜಿ ಸಿಎಂ

ಬಿಎಸ್​ವೈ ಸಂಬಂಧಿ ಈಗ ಮೈಸೂರು ಮೇಯರ್; ಬೇರುಗಳು ವಿಸ್ತಾರಗೊಳ್ಳುತ್ತಿವೆ ಎಂದ ಮಾಜಿ ಸಿಎಂ

ಬೆಂಗಳೂರು: ಮೈಸೂರು ಪಾಲಿಕೆ ಮೇಯರ್ ಪಟ್ಟ ಬಿಜೆಪಿಗೆ ಒಲಿದುಬಂದಿದೆ. ಬಿಜೆಪಿ ಸದಸ್ಯೆ ಸುನಂದಾ ಪಾಲನೇತ್ರ ಅವರಿಗೆ ಮೇಯರ್ ಪಟ್ಟ ಲಭಿಸಿದೆ. ಇವರು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪನವರ ಸಂಬಂಧಿಯೂ ಹೌದು. ಒಟ್ಟು 72 ಮತಗಳಲ್ಲಿ ಸುನಂದಾ ಪಾಲನೇತ್ರ 25 ಮತ, ಕಾಂಗ್ರೆಸ್​ನ ಹೆಚ್​.ಎಂ. ಶಾಂತಕುಮಾರಿ 20. ಜೆಡಿಎಸ್​ ಪಕ್ಷದ ಅಶ್ವಿನಿ ಆರ್. ಅನಂತು 21 ಮತಗಳು ಹಾಗೂ ಇತರೆ 6 ಮತ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಮೈಸೂರು ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ

ಈ ಹಿನ್ನೆಲೆ ಟ್ವೀಟ್ ಮೂಲಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ಮೊದಲ ಬಾರಿಗೆ ಬಿಜೆಪಿ ಪಡೆದುಕೊಂಡಿದ್ದು, ಇದು ಪಕ್ಷದ ಬೇರುಗಳು ವಿಸ್ತಾರಗೊಳ್ಳುತ್ತಿರುವ ಪ್ರಬಲ ಸಂಕೇತವಾಗಿದೆ. ಮೈಸೂರಿನ ಮೇಯರ್ ಆಗಿ ಆಯ್ಕೆಯಾಗಿರುವ ಪಕ್ಷಸ ಅಭ್ಯರ್ಥಿ ಸುನಂದಾ ಪಾಲನೇತ್ರ ಅವರಿಗೆ ಹಾರ್ದಿಕ ಅಭಿನಂದನೆಗಳು ಎಂದಿದ್ದಾರೆ.

 

Source: newsfirstlive.com Source link