JDS ಇತಿಹಾಸದಲ್ಲೇ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ -ಜಮೀರ್ ಮತ್ತೆ ವಾಗ್ದಾಳಿ

JDS ಇತಿಹಾಸದಲ್ಲೇ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ -ಜಮೀರ್ ಮತ್ತೆ ವಾಗ್ದಾಳಿ

ಮೈಸೂರು: ಮಹಾನಗರ ಪಾಲಿಕೆ ಮೇಯರ್ ಪಟ್ಟ ಬಿಜೆಪಿ ತೆಕ್ಕೆಗೆ ಹೋದ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದು ಜೆಡಿಎಸ್ ಮತ್ತೆ ವಚನ ಭ್ರಷ್ಟವಾಗಿದೆ ಎಂದು ಆರೋಪಿಸಿದ್ದಾರೆ.

ಮಾಜಿ ಮೇಯರ್ ಅಯೂಬ್ ಖಾನ್ ಜೊತೆ ಈ ಬಗ್ಗೆ ಮಾತನಾಡಿದ್ದೇನೆ, ಅವರು ಮೇಯರ್ ಚುನಾವಣೆಯ ಎಲ್ಲಾ ಮಾಹಿತಿ ನೀಡಿದ್ದಾರೆ. ಜೆಡಿಎಸ್ ಆಶೀರ್ವಾದದಿಂದ ಬಿಜೆಪಿ ತೆಕ್ಕೆಗೆ ಮೇಯರ್ ಸ್ಥಾನ ಹೋಗಿದೆ, ಜೆಡಿಎಸ್ ಮತ್ತೆ ವಚನ ಭ್ರಷ್ಟವಾಗಿದೆ. ಮಾತಿನ ಪ್ರಕಾರ ನಮಗೆ ಜೆಡಿಎಸ್ ಮೇಯರ್ ಸ್ಥಾನ ಬಿಟ್ಟು ಕೊಡಬೇಕಾಗಿತ್ತು.. ಆದರೆ ಜೆಡಿಎಸ್ ನವರು ಪರೋಕ್ಷವಾಗಿ ಬಿಜೆಪಿಗೆ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ: ಮೈಸೂರು ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿಗೆ ಒಲಿದ ಮೇಯರ್ ಪಟ್ಟ

ಬಿಜೆಪಿ ಹಾಗೂ ಜೆಡಿಎಸ್ ನಡುವೆ ಅಂಡರ್ ಸ್ಟ್ಯಾಂಡಿಂಗ್ ಆಗಿದ್ದರಿಂದಲೇ ಬಿಜೆಪಿ ತೆಕ್ಕೆಗೆ ಮೇಯರ್ ಸ್ಥಾನ ಹೋಗಿದೆ. ನೂರಕ್ಕೆ ನೂರು ಜೆಡಿಎಸ್ ಹಾಗೂ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ. ಜೆಡಿಎಸ್ ಇತಿಹಾಸದಲ್ಲಿ ಎಂದೂ ಮಾತಿಗೆ ತಕ್ಕಂತೆ ನಡೆದುಕೊಂಡಿಲ್ಲ. ಹಿಂದೆ ಟ್ವೆಂಟಿ ಟ್ವೆಂಟಿ ಗೌರ್ಮೆಂಟ್ ಇದ್ದಾಗ ಯಡಿಯೂರಪ್ಪಗೆ ಅಧಿಕಾರ ಕೊಡದೇ ಕುಮಾರಸ್ವಾಮಿ ಮೋಸ ಮಾಡಿದರು. ಕುಮಾರಸ್ವಾಮಿ 20 ತಿಂಗಳು ಅಧಿಕಾರ ಅನುಭವಿಸಿ ಕಡೆಗೆ ಯಡಿಯೂರಪ್ಪಗೆ ಅಧಿಕಾರ ಕೊಡದೇ ಮೋಸ ಮಾಡಿದರು.

ಇದನ್ನೂ ಓದಿ: ಬಿಎಸ್​ವೈ ಸಂಬಂಧಿ ಈಗ ಮೈಸೂರು ಮೇಯರ್; ಬೇರುಗಳು ವಿಸ್ತಾರಗೊಳ್ಳುತ್ತಿವೆ ಎಂದ ಮಾಜಿ ಸಿಎಂ

ಜೆಡಿಎಸ್ ಪಕ್ಷ ಇರೋದು ಕೇವಲ ಲಾಭಕ್ಕಾಗಿ ಮಾತ್ರ, ಜೆಡಿಎಸ್​ಗೆ ಯಾವ ಸೆಕ್ಯುಲರಿಸಂ ಇಲ್ಲ ಏನೂ ಇಲ್ಲ, ಕೇವಲ ಲಾಭ ಮಾತ್ರ ನೋಡ್ತಾರೆ. ಮೈಸೂರು ಮೇಯರ್ ಚುನಾವಣೆಯಲ್ಲಿ ನಮಗೆ ಹಿನ್ನಡೆ ಆಗಿಲ್ಲ, ಜೆಡಿಎಸ್​ಗೆ ಹಿನ್ನಡೆ ಆಗಿದೆ. ಮುಂದೆ ಜೆಡಿಎಸ್​ಗೆ ಜನರು ಪಾಠ ಕಲಿಸ್ತಾರೆ. ಸೆಕ್ಯುಲರ್ ಪಕ್ಷ ಅಂತ ವೋಟ್ ಕೊಟ್ಟಿದ್ರು, ಆದರೆ ಅವರು ಸೆಕ್ಯುಲರ್ ಅಲ್ಲ ಅಂತ ಬಯಲಾಗಿದೆ, ಇದನ್ನೆಲ್ಲ ಜನ ನೋಡ್ತಿದ್ದಾರೆ, ಜೆಡಿಎಸ್​ಗೆ ಜನ ಪಾಠ ಕಲಿಸ್ತಾರೆ ಎಂದು ಜಮೀರ್ ಕಿಡಿಕಾರಿದ್ದಾರೆ.

Source: newsfirstlive.com Source link