ಜಮೀರ್​​ ಅಹ್ಮದ್ ಖಾನ್​ಗೆ ಕೊಲೆ ಬೆದರಿಕೆ.. ಜೆಡಿಎಸ್​ ಕಾರ್ಯಕರ್ತನ ವಿರುದ್ಧ FIR

ಜಮೀರ್​​ ಅಹ್ಮದ್ ಖಾನ್​ಗೆ ಕೊಲೆ ಬೆದರಿಕೆ.. ಜೆಡಿಎಸ್​ ಕಾರ್ಯಕರ್ತನ ವಿರುದ್ಧ FIR

ಬೆಂಗಳೂರು: ಶಾಸಕ ಜಮೀರ್ ಅಹ್ಮದ್ ಖಾನ್​ಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ಜೆಡಿಎಸ್​ ಕಾರ್ಯಕರ್ತನ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.

ಇದನ್ನೂ ಓದಿ: ಗುರುವಿನ ಆರೋಗ್ಯ ವಿಚಾರಿಸಿದ ಶಿಷ್ಯ ಜಮೀರ್ ಅಹಮ್ಮದ್

ಜೆಡಿಎಸ್ ಕಾರ್ಯಕರ್ತ ನರಸಿಂಹ ಮೂರ್ತಿ ವಿರುದ್ಧ ದೂರು ದಾಖಲಾಗಿದೆ. ಹೆಚ್​​ಡಿಕೆ ಗಜಪಡೆ ಎಂಬ ಫೇಸ್​ಬುಕ್ ಅಕೌಂಟ್​ನಲ್ಲಿ ನರಸಿಂಹ ಮೂರ್ತಿ ಎಂಬಾತ ಜಮೀರ್​​ಗೆ ಕೊಲೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಭದ್ರತೆ ಇದ್ದರೂ ಹಲ್ಲೆ ಮಾಡಿ ಹತ್ಯೆ ಮಾಡ್ತೀವಿ ಎಂದು ವಿಡಿಯೋ ಮುಖಾಂತರ ಬೆದರಿಕೆ ಹಾಕಿದ್ದರು.. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿ ವಿಡಿಯೋ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ನವೀನ್ ಗೌಡ ಎಂಬಾತ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ED ದಾಳಿ ಬಳಿಕ ಮುನಿಸು ಮರೆತು ಮತ್ತೆ ಅಪ್ಪಿಕೊಂಡ್ರಾ ಡಿಕೆಎಸ್​, ಜಮೀರ್​?

Source: newsfirstlive.com Source link