ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಸೇವಿಸ್ತಿದ್ದ ಡ್ರಗ್ ಯಾವುದು ಗೊತ್ತಾ..? FSL ವರದಿಯಿಂದ ಹೊರಬಿತ್ತು ಸತ್ಯ

ಸಂಜನಾ ಗಲ್ರಾನಿ, ರಾಗಿಣಿ ದ್ವಿವೇದಿ ಸೇವಿಸ್ತಿದ್ದ ಡ್ರಗ್ ಯಾವುದು ಗೊತ್ತಾ..? FSL ವರದಿಯಿಂದ ಹೊರಬಿತ್ತು ಸತ್ಯ

ಬೆಂಗಳೂರು: ಸ್ಯಾಂಡಲ್ ವುಡ್ ನಟ-ನಟಿಯರಿಂದ ಡ್ರಗ್ ಡೀಲ್ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳು ಕೋರ್ಟ್​ಗೆ ಕೊಟ್ಟ ಮಾಹಿತಿ ನ್ಯೂಸ್ ಫಸ್ಟ್ ಗೆ ಲಭ್ಯವಾಗಿದೆ.

ಡ್ರಗ್​ ಕೇಸ್​ನಲ್ಲಿ ಅರೆಸ್ಟ್ ಆಗಿದ್ದವರೆಲ್ಲರೂ ಡ್ರಗ್ ಸೇವನೆ ಮಾಡಿದ್ದು ಸಾಬೀತಾಗಿದ್ದು ನಟಿಯರಾದ ಸಂಜನಾ, ರಾಗಿಣಿ ಯಾವ ಡ್ರಗ್ ಸೇವಿಸಿದ್ರು ಅನ್ನೋದು ವರದಿಯಲ್ಲಿ ಉಲ್ಲೇಖವಾಗಿದೆ.

blank
ಎಂಡಿಎಂಎ

9 ತಿಂಗಳ ನಂತರ FSL ಅಧಿಕಾರಿಗಳು ಕೊಟ್ಟ ವರದಿಯಲ್ಲಿ ಡ್ರಗ್ ಪಾಸಿಟಿವ್ ಆಗಿದ್ದು ಹೇರ್ ಪಾಲಿಕಲ್ ಟೆಸ್ಟ್ ವರದಿಯಲ್ಲಿ FSL ಅಧಿಕಾರಿಗಳು ಉಲ್ಲೇಖಿಸಿರುವುದೇನು ಅನ್ನೋದು ಇಲ್ಲಿದೆ.

blank
ಮೆಟಾಂಫೆಟಮೈನ್

ಆರೋಪಿಗಳು ಸೇವಿಸಿದ ಡ್ರಗ್ ಯಾವುದು..? ಕೋರ್ಟ್​ಗೆ ಕೊಟ್ಟ ಮಾಹಿತಿ ಇಲ್ಲಿದೆ

  1. ಆರೋಪಿ ನಂಬರ್ 2 ರಾಗಿಣಿ ದ್ವಿವೇದಿ ಸೇವಿಸಿದ್ದು, ಕೊಕೇನ್, ಕೋಕೋ ಎಥೆನಾಲ್ ಡ್ರಗ್
  2. ಆರೋಪಿ ನಂಬರ್ 14 ಸಂಜನಾ ಗಲ್ರಾಣಿ ಸೇವಿಸಿದ್ದು ಕೊಕೇನ್ ಹಾಗೂ ಎಂಡಿಎಂಎ
  3. ಆರೋಪಿ ನಂಬರ್ 3 ವೀರೇನ್ ಖನ್ನಾ ಕೊಕೇನ್, ಎಂಡಿಎಂಎ, ಮೆಟಾಂಪೇಟಮೈನ್
  4. ಆರೋಪಿ ನಂಬರ್ 4 ಪ್ರಶಾಂತ್ ರಂಕಾ ಸೇವಿಸಿದ್ದು ಕೊಕೇನ್ ಡ್ರಗ್
  5. ಆರೋಪಿ ನಂಬರ್ 5 ವೈಭವ್ ಜೈನ್ ಸೇವಿಸಿದ್ದು ಎಂಡಿಎಂಎ, ಮೆಟಾಂಪೇಟಮೈನ್
  6. ಆರೋಪಿ ನಂಬರ್ 7 ಲೂಮ್ ಪೆಪ್ಪರ್ ಸಾಂಬಾ ಸೇವಿಸಿದ್ದು ಮೆಟಾಂಪೇಟಮೈನ್, ಕೊಕೇನ್
  7. ಆರೋಪಿ ನಂಬರ್ 11 ರಾಹುಲ್ ತೋನ್ಸೆ ಸೇವಿಸಿದ್ದು ಎಂಡಿಎಂಎ, ಕೊಕೇನ್
  8. ಆರೋಪಿ ನಂಬರ್ 13 ನಿಯಾಜ್ ಅಹಮದ್ ಸೇವಿಸಿದ್ದು ಕೊಕೇನ್, ಎಂಡಿಎಂಎ, ಮೆಟಾಂಪೇಟಮೈನ್
  9. ಆರೋಪಿ ನಂಬರ್ 17 ಬೆನಾಲ್ಡ್ ಉಡೇನಾ ಸೇವಿಸಿದ್ದು ಮೆಟಾಂಪೇಟಮೈನ್, ಎಂಡಿಎಂಎ
  10. ಆರೋಪಿ ನಂಬರ್ 18 ಶ್ರೀನಿವಾಸ್ ಸೇವಿಸಿದ್ದು ಮೆಟಾಂಪೇಟಮೈನ್ ಹಾಗೂ ಕೊಕೊನಿನೋಲ್
blank
ಕೋಕೊ ಡಿ ಎಥನಾಲ್

ಸೋಮವಾರ ಸಿಸಿಬಿ ಅಧಿಕಾರಿಗಳು ಈ ಎಫ್​ಎಸ್​ಎಲ್​ ವರದಿಯನ್ನು ಚಾರ್ಜ್​ಶೀಟ್​​ನ ಜೊತೆಗೆ ಸಲ್ಲಿಸಲಿದ್ದಾರೆ. ಸಿಸಿಬಿ ವರದಿ ಆಧರಿಸಿ ಎನ್​ಡಿಪಿಎಸ್​ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಲಿದೆ.

blank
ಕೊಕೇನ್

Source: newsfirstlive.com Source link