ಅಫ್ಘಾನಿಸ್ತಾನದ ನೂತನ ಸರ್ಕಾರಕ್ಕೆ ಧಾರ್ಮಿಕ ವಿದ್ವಾಂಸರ ನಾಯಕತ್ವ; ತಾಲಿಬಾನ್​​

ಅಫ್ಘಾನಿಸ್ತಾನದ ನೂತನ ಸರ್ಕಾರಕ್ಕೆ ಧಾರ್ಮಿಕ ವಿದ್ವಾಂಸರ ನಾಯಕತ್ವ; ತಾಲಿಬಾನ್​​

ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಎರಡು ವಾರಗಳ ಹಿಂದೆಯಷ್ಟೇ ಸಂಪೂರ್ಣ ವಶಪಡಿಸಿಕೊಂಡರು. ಇದರ ಪರಿಣಾಮ ಇಡೀ ಅಫ್ಘಾನ್​ ಸೇನೆ ಮತ್ತು ಅಧ್ಯಕ್ಷ ಅಶ್ರಫ್​​ ಘಣಿ ತಾಲಿಬಾನಿಗಳಿಗೆ ಅಧಿಕೃತವಾಗಿ ಶರಣಾದರು. ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್​ ವಶಕ್ಕೆ ಪಡೆದ ನಂತರವಂತೂ ಅಶ್ರಫ್​​ ನೇತೃತ್ವದ ಸರ್ಕಾರ ಪತನಗೊಂಡು ಅರಾಜಕತೆ ಉಂಟಾಗಿದೆ. ಈ ಮಧ್ಯೆಯೇ ಮುಂದಿನ ಅಫ್ಘಾನ ಸರ್ಕಾರದ ನಾಯಕತ್ವದ ಧಾರ್ಮಿಕ ವಿದ್ವಾಂಸರು ವಹಿಸಲಿದ್ದಾರೆ ಎಂದು ತಾಲಿಬಾನ್​​​ ತಿಳಿಸಿದೆ.

ಧಾರ್ಮಿಕ ವಿದ್ವಾಂಸರೇ ಅಫ್ಘಾನಿಸ್ತಾನದ ಮುಂದಿನ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ತಾಲಿಬಾನ್​​ ಹೇಳಿರುವುದಾಗಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ರಾಜಧಾನಿ ಕಾಬೂಲ್​​​ನಲ್ಲಿ ಜನರನ್ನುದ್ದೇಶಿಸಿ ಮಾತಾಡಿರುವ ತಾಲಿಬಾನ್​​​ ಮುಖಂಡರು, ನಮ್ಮ 20 ವರ್ಷಗಳ ಹೋರಾಟ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು. ಹೀಗಾಗಿ ಮುಂದಿನ ಅಫ್ಘಾನ್​ ಸರ್ಕಾರದ ನಾಯಕತ್ವ ಧಾರ್ಮಿಕ ವಿದ್ವಾಂಸರು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.

ಇನ್ನು, ಹತ್ತು ಮಂದಿ ಧಾರ್ಮಿಕ ವಿದ್ವಾಂಸರನ್ನು ಕರೆದು ಮುಂದಿನ ರಾಜಕೀಯ ವ್ಯವಸ್ಥೆ ರೂಪಿಸಿ ಎಂದು ತಾಲಿಬಾನ್​​​ ಮುಖಂಡರು ಮನವಿ ಮಾಡಿದ್ದಾರೆ. ಅಲ್ಲದೇ ಮುಂದಿನ ಸರ್ಕಾರಕ್ಕೆ ನೀವೇ ನಾಯಕತ್ವ ತೆಗೆದುಕೊಂಡು ಜನರ ಸಹಾಕರ ಪಡೆದು ಸರ್ಕಾರ ರಚಿಸಿ ಎಂದು ವಿನಂತಿಸಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಶಹೀನ್​​ ಬಾಗ್​​ಗೆ ಆಹಾರ ಪೂರೈಸಿ ಅಂದು CAA ವಿರುದ್ಧ ಹೋರಾಟ, ಇಂದು CAA ವಿಸ್ತರಿಸಿ ಅಂತ ಒತ್ತಾಯ

ದೇಶದ ಎಲ್ಲರನ್ನು ಒಳಗೊಂಡು ಸರ್ಕಾರ ರಚನೆ ಮಾಡಲಿದ್ದೇವೆ. ಎಲ್ಲರ ಹಕ್ಕುಗಳನ್ನು ಸಂರಕ್ಷಿಸಲಾಗುವುದು. ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ ಕೆಲಸ ಮಾಡಲಾಗುವುದು ಎಂದು ತಾಲಿಬಾನ್​​ ಅಫ್ಘಾನ್​​​​​​ ಪ್ರಮುಖ ಮುಖಂಡರೊಂದಿಗೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

Source: newsfirstlive.com Source link