RCB ಸೇರಿದ ಹಸರಂಗ-ಚಮೀರಾ; ಫ್ಯಾನ್ಸ್​​ಗೆ ಕೊಟ್ಟ ಸಂದೇಶವೇನು ಗೊತ್ತಾ?

RCB ಸೇರಿದ ಹಸರಂಗ-ಚಮೀರಾ; ಫ್ಯಾನ್ಸ್​​ಗೆ ಕೊಟ್ಟ ಸಂದೇಶವೇನು ಗೊತ್ತಾ?

ಐಪಿಎಲ್​ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಹಲವು ತಂಡಗಳ ಆಟಗಾರು ಅರಬ್ಬರ ನಾಡಿಗೆ ಬಂದು ಇಳಿದಿದ್ದರೆ, ಇನ್ನು ವಿಮಾನ ಏರೋಕೆ ಸಜ್ಜಾಗಿವೆ. ಈಗಾಗಲೇ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರರು ಬೆಂಗಳೂರಿನ ಲೀಲಾ ಪ್ಯಾಲೇಸ್​​​ನಲ್ಲಿ ಕ್ವಾರಂಟೀನ್​​​​ನಲ್ಲಿದ್ದು, ಶೀಘ್ರವೇ ದುಬೈಗೆ ವಿಮಾನ ಹತ್ತಲಿದ್ದಾರೆ.

ಇದನ್ನೂ ಓದಿ: ಚಿನ್ನ ಗೆದ್ದರೂ ಬೀಗದ ನೀರಜ್ ಚೋಪ್ರಾ; ಕನ್ನಡಿಗ ಕಾಶಿನಾಥ್​​​​​ ನಾಯ್ಕ್ ಭೇಟಿಯಾಗಿ ಗುರುವಂದನೆ

ಆರ್​​ಸಿಬಿ ತಂಡಕ್ಕೆ ಮೂವರ ಹೊಸಬರ ಎಂಟ್ರಿಯಾಗಿದ್ದು, ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿದ್ದಾರೆ. ಶ್ರೀಲಂಕಾ ಆಲ್​​ರೌಂಡರ್​​ ವನಿಂದು ಹಸರಂಗ, ವೇಗಿ ದುಷ್ಮಂತ ಚಮೀರಾ ಹಾಗೂ ಸಿಂಗಾಪೂರ್​​ ಕ್ರಿಕೆಟಿಗ ಟಿಮ್​ ಡೇವಿಡ್​ ತಂಡದಲ್ಲಿ ಬದಲಿ ಆಟಗಾರರಾಗಿ ಸ್ಥಾನ ಪಡೆದಿದ್ದಾರೆ. ಆರ್​​ಸಿಬಿ ಸೇರಿರುವ ಕುರಿತು ಮಾತನಾಡಿರುವ ಹಸರಂಗ ಮತ್ತು ಚಮೀರಾ ಅವರ ವಿಡಿಯೋವನ್ನ ಫ್ರಾಂಚೈಸಿ ತನ್ನ ಅಧಿಕೃತ ಟ್ವಿಟರ್​​ನಲ್ಲಿ ಹಂಚಿಕೊಂಡಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಆಡಲು ಇಬ್ಬರು ಆಟಗಾರರು ಉತ್ಸುಕರಾಗಿದ್ದೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ENG Vs IND: ಟೀಮ್​ ಇಂಡಿಯಾದ ಪ್ಲೇಯಿಂಗ್​ XI ಬದಲಾಗುತ್ತಾ? ತಂಡದಲ್ಲಿ ಯಾರು ಇನ್​​​, ಯಾರು ಔಟ್?

ವನಿಂದು ಹಸರಂಗ ಮಾತನಾಡಿ, ನಾನು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲು ಆತುರದಿಂದ ಕಾಯುತ್ತಿದ್ದೇನೆ. ದುಬೈನಲ್ಲಿ ನಡೆಯಲಿರುವ ಐಪಿಎಲ್​​​​ ಜರ್ನಿ ನನಗೆ ಫನ್​ ಜರ್ನಿ ಆಗಿರಲಿದೆ. ಹಾಗಾಗಿ ಅಭಿಮಾನಿಗಳನ್ನು ನಮ್ಮನ್ನು ಪ್ರೋತ್ಸಾಹಿಸಿ ಎಂದು ಕೇಳಿದ್ದಾರೆ. ಇನ್ನು ಅಭಿಮಾನಿಗಳಿಗೆ ನಮಸ್ತೆ ಹೇಳುವ ಮೂಲಕ ಮಾತು ಆರಂಭಿಸಿದ ದುಷ್ಮಂತ ಚಮೀರಾ, RCB ಕುಟುಂಬ ಸೇರುತ್ತಿರುವುದಕ್ಕೆ ನನಗೆ ತುಂಬಾ ಖುಷಿಯಾಗ್ತಿದೆ. ವಿರಾಟ್, ಎಬಿಡಿ, ಮ್ಯಾಕ್ಸ್‌ವೆಲ್ ಅವರಂತಹ ಅದ್ಭುತ ಆಟಗಾರರ ಜೊತೆ ಆಡುವುದಕ್ಕೆ ಆತುರದಿಂದ ಕಾಯ್ತಿದ್ದೇನೆ. ಆದರೆ ಆರ್​ಸಿಬಿ ಅಭಿಮಾನಿಗಳು ಸುರಕ್ಷಿತವಾಗಿರಿ ಎಂದಿದ್ದಾರೆ.

ಇದನ್ನೂ ಓದಿ: ENG Vs IND: ಭಾರತದ ಜಯದ ಓಟಕ್ಕೆ ಕಡಿವಾಣ ಹಾಕ್ತಾರಾ ರೂಟ್​​-ಬೈರ್​​ಸ್ಟೋ?

ಇದನ್ನೂ ಓದಿ: ಚಾಂಪಿಯನ್ ಪಟ್ಟದ ಮೇಲೆ ಕಣ್ಣಿಟ್ಟ ಮುಂಬೈ, ಚೆನ್ನೈ -ಅರಬ್ಬರ ನಾಡಲ್ಲಿ ಅಭ್ಯಾಸ ಶುರು

 

Source: newsfirstlive.com Source link