ಅಘ್ಘಾನ್​ ಕ್ಯಾಬಿನೆಟ್ ಸಚಿವನೀಗ ಪಿಜ್ಜಾ ಡೆಲಿವರಿ ಬಾಯ್; ಆಕ್ಸ್​ಫರ್ಡ್​ ಪದವಿಧರನಿಗೆ ಎಂಥ ಸ್ಥಿತಿ

ಅಘ್ಘಾನ್​ ಕ್ಯಾಬಿನೆಟ್ ಸಚಿವನೀಗ ಪಿಜ್ಜಾ ಡೆಲಿವರಿ ಬಾಯ್; ಆಕ್ಸ್​ಫರ್ಡ್​ ಪದವಿಧರನಿಗೆ ಎಂಥ ಸ್ಥಿತಿ

ಕಾಲ ಅಟ್ಕಾಯಿಸಿಕೊಂಡು ಬಂದಾಗ ಒಬ್ಬ ಮನುಷ್ಯನನ್ನ ಯಾವ ಮಟ್ಟಕ್ಕಾದ್ರೂ ತಳ್ಳಿ ಬಿಡುತ್ತೆ ಅನ್ನೋ ಜ್ವಲಂತ ಉದಾಹರಣೆಗಳು ಅದೆಷ್ಟೋ ನಮ್ಮ ಕಣ್ಮುಂದೆಯೇ ಇವೆ. ‘ಕಾಲ ಕೆಟ್ಟೊಯ್ತಲ್ಲ’ ಎಂಬ ಕವಿಯೊಬ್ಬನ ಹಾಡಿಗೂ ವ್ಯತಿರಿಕ್ತ ಎನ್ನುವಂತೆ ಕೆಟ್ಟು ಹೋಗಿದ್ದು, ಕಾಲವೋ? ಮನುಷ್ಯತ್ವದ ಗುಣಗಳೋ ಅಥವಾ ನಾವು ಮಾಡಿಕೊಂಡಿರುವ ವ್ಯವಸ್ಥೆಯೋ? ಒಂದೂ ಅರ್ಥವಾಗದ ಪರಿಸ್ಥಿತಿಗೆ ಬಂದು ತಲುಪಿದ್ದೇವೆ!

Image

ನೀವು ನಂಬ್ತೀರೋ ಬಿಡ್ತಿರೋ ಗೊತ್ತಿಲ್ಲ..! ಅಗರ್ಭ ಶ್ರೀಮಂತನೊಬ್ಬ ಎಲ್ಲವನ್ನೂ ಕಳ್ಕೊಂಡು ಭಿಕ್ಷೆ ಬೇಡುವ ಬದುಕಿಗೆ ತಮ್ಮನ್ನ ದೂಡಿಕೊಂಡ ಕಥೆಗಳು ನಮ್ಮಲ್ಲಿವೆ. ಎಲ್ಲಿಯಾದರೂ ರಾಜಕಾರಣಿಯೊಬ್ಬ ಪಿಜ್ಜಾ ಮಾರುವ ಸ್ಥಿತಿಗೆ ಬಂದು ತಲುಪಿರುವ ನಿದರ್ಶನಗಳು ಬಗ್ಗೆ ಕೇಳಿದ್ದೀರಾ? ಬಹುಶಃ ಪ್ರಪಂಚದ ಯಾವುದೇ ಮೂಲೆಯಲ್ಲೂ ಹುಡುಕಿದರೂ ಸಿಗಲಿಕ್ಕಿಲ್ಲವೇನೋ. ಆದರೆ ಅಂತಹ ಪರಿಸ್ಥಿತಿಗೆ ರಾಜಕಾರಣಿಗಳು ಬರ್ತಾರೆ ಅಂದ್ರೆ ಸಾಮಾನ್ಯ ಜನರ ಪಾಡು ಹೇಗಿರಬೇಡ ಅಂತಾ ಊಹಿಸಿಕೊಳ್ಳಿ.

ವ್ಯವಸ್ಥೆಯ ಕಾರಳ ಮುಖಕ್ಕೆ ಹಿಡಿದ ಕೈಗನ್ನಡಿ ಅಂದ್ರೆ ಈ ಸ್ಟೋರಿಯೂ ಕೂಡ ಹೌದು! ಹೌದು, ಅಫ್ಘಾನಿಸ್ತಾನದಲ್ಲಿ ಮನುಷ್ಯತ್ವದ ಮಾನವೀಯ ನೆಲೆಗಳು ತಾಲಿಬಾನಿಗಳ ರೌದ್ರಾವತಾರಕ್ಕೆ ಮಖಾಡೆ ಬಿದ್ದು ನೆಲಕಚ್ಚಿವೆ. ಇದರ ಕ್ರೂರ, ಕಠೋರ ಸನ್ನಿವೇಶದ ಫಲವೇ ಅಫ್ಘಾನಿಸ್ತಾನದ ರಾಜಕಾರಣಿಯೊಬ್ಬ, ಮಾಜಿ ಕ್ಯಾಬಿನೆಟ್ ಸಚಿವರೊಬ್ಬರು ಜರ್ಮನಿಯಲ್ಲಿ ಇಂದು ಪಿಜ್ಜಾ ಮಾರುತ್ತಿದ್ದಾರೆ.

Image

ಸಯೀದ್ ಅಹಮ್ಮದ್ ಶಾಹ ಸಾದತ್, ಹಮ್ಮು-ಬಿಮ್ಮು ಇಲ್ಲದೇ ಜರ್ಮನಿಯ ಲೈಪ್ಜಿಗ್​​ನಲ್ಲಿ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿರೋರು. ಇವ್ರು ಘನಿ ಸರ್ಕಾರದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಸಚಿವರಾಗಿ ಕೆಲಸ ಮಾಡುತ್ತಿದ್ದವ್ರು. ಇಂದು ಡೆಲಿವರಿ ಬಾಯ್​ ಆಗಿ ಕೆಲಸ ಮಾಡ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಪೈಶಾಚಿಕ ಕೃತ್ಯಗಳಿಂದ ಜೀವಭಯದ ಆತಂಕ ಎದುರಾಗಿತ್ತು. ಹೀಗಾಗಿ ಇವರು ಕಳೆದ ಒಂದು ವರ್ಷದ ಹಿಂದೆ ಅಫ್ಘಾನಿಸ್ತಾನದ ತಮ್ಮ ಕಚೇರಿಯನ್ನ ತೊರೆದು ಜರ್ಮನ್​​ಗೆ ಕೆಲಸ ಹುಡುಕಿಕೊಂಡು ಬಂದಿದ್ದರು.

ಹೀಗೆ ಕೆಲಸ ಹುಡುಕಿಕೊಂಡು ಬಂದಿದ್ದ ಇವರಿಗೆ ಅಷ್ಟು ಸುಲಭದಲ್ಲಿ ಜರ್ಮನ್​​ನಲ್ಲಿ ಬದುಕು ಕಟ್ಟಿಕೊಳ್ಳೋದು ಅಷ್ಟು ಸುಲಭವಾಗಿರಲಿಲ್ಲ. ಅದೇ ಕಾರಣಕ್ಕೆ ಅವರು ಪಿಜ್ಜಾ ಮಾರಟ ಮಾಡಲು ಮುಂದಾಗ್ತಾರೆ. ಅದರಂತೆ ಇತ್ತೀಚೆಗೆ ಅವರು ಸೈಕಲ್ ಏರಿ ಪಿಜ್ಜಾ ಮಾರಾಟ ಮಾಡುತ್ತಿರುವ ದೃಶ್ಯವನ್ನ ಸೆರೆ ಹಿಡಿದಿದ್ದಾರೆ. ಅಫ್ಘಾನ್​​ನಲ್ಲಿ ಭಿಕ್ಕಟ್ಟು ಉಂಟಾಗಿರುವ ಬೆನ್ನಲ್ಲೇ ಮಾಜಿ ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವರು ಪಿಜ್ಜಾ ಮಾರಾಟ ಮಾಡುತ್ತಿರುವ ಫೋಟೋ ವೈರಲ್ ಆಗಿದೆ.

ಅರಬ್ ದೇಶದ ಜನಪ್ರಿಯ ಮೀಡಿಯಾ ಅಲ್​ ಜಜೀರಾ ಹಾಗೂ ಜರ್ಮನ್​ ಸ್ಥಳೀಯ ಮಾಧ್ಯಮಗಳು ಸಾದತ್ ಕುರಿತು ವರದಿ ಪ್ರಸಾರ ಮಾಡಿವೆ. ಸೈಕಲ್ ಏರಿ ಲೈಪ್ಜಿಗ್​ನ ಗಲ್ಲಿಗಲ್ಲಿಯಲ್ಲಿರುವ ನಿವಾಸಿಗಳಿಗೂ ಪಿಜ್ಜಾ ಮಾರಾಟ ಮಾಡಿ ತಮ್ಮ ಬದುಕನ್ನ ಕಟ್ಟಿಕೊಳ್ತಿದ್ದಾರೆ.

Image

ಆಕ್ಸ್​ಫರ್ಡ್​ ವಿವಿಯಲ್ಲಿ ಮಾಸ್ಟರ್ಸ್​ ಡಿಗ್ರಿ
ಅಂದ್ಹಾಗೆ ಸಾದತ್ ಅವರು 2018 ರಲ್ಲಿ ಅಶ್ರಫ್ ಘನಿ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು. 2 ವರ್ಷಗಳ ಕಾಲ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಸಚಿವರಾಗಿ ಕೆಲಸ ಮಾಡಿ 2020 ರಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆ ನೀಡುತ್ತಿದ್ದಂತೆಯೇ ಕಳೆದ ಡಿಸೆಂಬರ್​ನಲ್ಲಿ ಜರ್ಮನ್​​ಗೆ ಬಂದಿದ್ದಾರೆ.
ಫಿಜ್ಜಾ ಮಾರುತ್ತಿದ್ದಾರೆ ಅಂದ ಮಾತ್ರಕ್ಕೆ ಸಾದತ್ ಅವರು, ಓದಿರೋದು ಮಾಸ್ಟರ್ಸ್ ಡಿಗ್ರಿ. ಅದು ಸಾಮಾನ್ಯ ವಿಶ್ವವಿದ್ಯಾಲಯದಲ್ಲಿ ಪದವಿಯನ್ನ ಪಡೆದುಕೊಂಡಿಲ್ಲ. ಜಗತ್ ಪ್ರಸಿದ್ಧ ಆಕ್ಸಫರ್ಡ್​ ವಿಶ್ವವಿದ್ಯಾಲಯದಲ್ಲಿ ಕಮ್ಯುನಿಕೇಷನ್ ಮತ್ತು ಎಲೆಟ್ರಾನಿಕ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನ ಪಡೆದುಕೊಂಡಿದ್ದಾರೆ. ಇಷ್ಟೆಲ್ಲಾ ವಿದ್ಯವಂತರಾಗಿಯೂ ಪಿಜ್ಜಾ ಮಾರುವ ಸಂದಿಗ್ಧತೆ ಎದುರಾಗಿರೋದು ನಿಜಕ್ಕೂ ವಿಪರ್ಯಸವೇ ಸರಿ!

Source: newsfirstlive.com Source link