ಕಾಬೂಲ್​ನಲ್ಲಿ ಪಾಕ್​ ISI ಉಗ್ರರ ಕೃತ್ಯ; ಭಾರತೀಯರ ಪಾಸ್​ಪೋರ್ಟ್​ಗಳ ಕಳವು

ಕಾಬೂಲ್​ನಲ್ಲಿ ಪಾಕ್​ ISI ಉಗ್ರರ ಕೃತ್ಯ; ಭಾರತೀಯರ ಪಾಸ್​ಪೋರ್ಟ್​ಗಳ ಕಳವು

ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಕಾಬೂಲ್​ನಲ್ಲಿ ಪಾಕಿಸ್ತಾನದ ಐಎಸ್​ಐ ಉಗ್ರರು ಟ್ರಾವೆಲ್ ಏಜೆನ್ಸಿಯೊಂದರ ಮೇಲೆ ದಾಳಿ ನಡೆಸಿ ಭಾರತೀಯ ವೀಸಾ ಇರುವ ಆಫ್ಘನ್​ನ ಪಾಸ್​ಪೋರ್ಟ್​ಗಳನ್ನ ಕದ್ದಿದ್ದಾರೆ ಎನ್ನಲಾಗಿದೆ.

ಉರ್ದು ಮಾತನಾಡುತ್ತಿದ್ದ ಗುಂಪೊಂದು ಆಗಸ್ಟ್ 15 ಮತ್ತು 16 ರಂದು ಖಾಸಗಿ ಟ್ರಾವೆಲ್ ಏಜೆನ್ಸಿಯ ಮೇಲೆ ದಾಳಿ ನಡೆಸಿ ಈ ಪಾಸ್​ಪೋರ್ಟ್​ಗಳನ್ನು ಕದ್ದಿದ್ದಾರೆ ಎಂದು ಹೇಳಲಾಗಿದೆ. ಈ ಖಾಸಗಿ ಟ್ರಾವೆಲ್ ಏಜೆನ್ಸಿ ಭಾರತೀಯ ರಾಯಭಾರ ಕಚೇರಿಯ ಸಹಯೋಗದೊಂದಿಗೆ ನಡೆಯುತ್ತಿತ್ತು.. ಆಫ್ಘನ್ ಪ್ರಜೆಗಳಿಗೆ ಭಾರತೀಯ ವೀಸಾ ಸೇವೆಯನ್ನ ಒದಗಿಸುತ್ತಿತ್ತು ಎನ್ನಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ನೂತನ ಸರ್ಕಾರಕ್ಕೆ ಧಾರ್ಮಿಕ ವಿದ್ವಾಂಸರ ನಾಯಕತ್ವ; ತಾಲಿಬಾನ್​​

ಈ ಕುರಿತು ಮೂಲಗಳು ಮಾಹಿತಿ ನೀಡಿದ್ದು.. ಎಷ್ಟು ಪಾಸ್​ಪೋರ್ಟ್​ಗಳು ಕಳ್ಳತನವಾಗಿವೆ ಎಂಬ ಅಂಕಿಅಂಶದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ. ವಿದೇಶಾಂಗ ಸಚಿವಾಲಯ ಮತ್ತು ಭದ್ರತಾ ದಳಗಳು ಈ ಬಗ್ಗೆ ತನಿಖೆ ನಡೆಸುತ್ತಿವೆ. ಕಳವಾದ ಆಫ್ಘನ್ ಪಾಸ್​ಪೋರ್ಟ್​​ಗಳು ಭಾರತೀಯ ವೀಸಾವನ್ನು ಹೊಂದಿದ್ದವು.. ಇವುಗಳನ್ನು ಉಗ್ರರು ದುರುಪಯೋಗಪಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ಪರಿಸ್ಥಿತಿಯಿಂದ ಲಾಭ ಪಡೆಯಲು ಚೀನಾ ಪ್ಲಾನ್.. ತಾಲಿಬಾನ್ ಭೇಟಿಯಾದ ರಾಯಭಾರಿ

ಕಾಬೂಲ್​ನ್ನು ತಾಲಿಬಾನಿಗಳು ವಶಪಡಿಸಿಕೊಳ್ಳುತ್ತಲೇ ಭಾರತ ಸರ್ಕಾರ ಏರ್ ಇಂಡಿಯಾ ಮೂಲಕ ಭಾರತೀಯ ಪ್ರಜೆಗಳನ್ನು ಮತ್ತು ಬೆದರಿಕೆಗೊಳಗಾದ ತಂಡಗಳನ್ನು ರಕ್ಷಣೆ ಮಾಡಲು ಮುಂದಾಗಿತ್ತು. ಈ ಮಧ್ಯೆಯೇ ಘಟನೆ ನಡೆದಿದೆ.

ಈಗಾಗಲೇ ಸುಮಾರು 800 ಮಂದಿಯನ್ನು ಭಾರತೀಯ ಏರ್​ಫೋರ್ಸ್ ಸಿ-17 ಏರ್​ಕ್ರಾಫ್ಟ್ ಮೂಲಕ ಭಾರತಕ್ಕೆ ಕರೆತರಲಾಗಿದೆ. ಇನ್ನು ಮತ್ತೊಂದು ಬೆಳವಣಿಗೆಯಲ್ಲಿ ಭಾರತ ಸರ್ಕಾರದ ಕೇಂದ್ರ ಗೃಹ ಇಲಾಖೆ ಅಫ್ಘನ್ ಪ್ರಜೆಗಳಿಗೆ ನೀಡಲಾಗಿದ್ದ ಹಳೇ ವೀಸಾಗಳನ್ನು ರದ್ದು ಮಾಡಿದೆ. ಭದ್ರತೆಯ ಹಿನ್ನೆಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದೆ.

Source: newsfirstlive.com Source link