ಶರಿಯಾ ಕಾನೂನು: ಇನ್ಮುಂದೆ ಅಫ್ಘಾನ್​​​ ಕಲಾವಿದರು ಕುಣಿಯಬಾರದು, ಹಾಡಬಾರದು, ಸಿನಿಮಾ ಮಾಡಬಾರದು..!

ಶರಿಯಾ ಕಾನೂನು: ಇನ್ಮುಂದೆ ಅಫ್ಘಾನ್​​​ ಕಲಾವಿದರು ಕುಣಿಯಬಾರದು, ಹಾಡಬಾರದು, ಸಿನಿಮಾ ಮಾಡಬಾರದು..!

ಕಾಬೂಲ್​​: ಅಫ್ಘಾನಿಸ್ತಾನದಲ್ಲಿ ತಾಲಿಬಾನ್​​​ ಉಗ್ರರು ಹೊಸ ಸರ್ಕಾರ ರಚನೆಗೆ ಮುಂದಾಗಿದ್ದಾರೆ. ಮುಂದಿನ ಸರ್ಕಾರದ ನೇತೃತ್ವ ಧಾರ್ಮಿಕ ವಿದ್ವಾಂಸರು ವಹಿಸಿಕೊಳ್ಳಲಿದ್ದಾರೆ ಎಂದಿರುವ ತಾಲಿಬಾನ್​​​​ ಕಟ್ಟುನಿಟ್ಟಾಗಿ ಶರಿಯಾ ಕಾನೂನು ಜಾರಿಗೆ ಸಜ್ಜಾಗಿದೆ. ನಾವು ಬದಲಾಗಿದ್ದೇವೆ, ಜನಪರ ಸರ್ಕಾರ ರಚನೆ ಮಾಡುತ್ತೇವೆ ಎನ್ನುತ್ತಿದ್ದ ನಾಯಕರು ಈಗ ಶರಿಯಾ ಕಾನೂನು ಜಾರಿಗೊಳಿಸಲು ಮುಂದಾಗಿ ಅದೇ ರಾಗ ಅದೇ ಹಾಡು ಎನ್ನುತ್ತಿದ್ದಾರೆ.

ಆರಂಭದಲ್ಲಿ ಜನಪರ ಆಡಳಿತ ನೀಡುತ್ತೇವೆ. ಮಕ್ಕಳು ಮತ್ತು ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ ಎಂದು ಹೇಳುತ್ತಿದ್ದ ತಾಲಿಬಾನ್​ ಈಗ ಅಧಿಕೃತವಾಗಿ ಶರಿಯಾ ಕಾನೂನು ಜಾರಿ ಮಾಡುವುದಾಗಿ ಹೇಳಿದೆ. ಅಫ್ಘಾನಿಸ್ತಾನದಲ್ಲಿ ಮತ್ತೆ ಶರಿಯಾ ಕಾನೂನು ಜಾರಿಗೆ ಬರಲಿದೆ ಎಂದು ತಾಲಿಬಾನ್​​​ ವಕ್ತಾರ್ ಜಬೀವುಲ್ಲಾ ಮುಜಾಯಿದ್ ಸ್ಪಷ್ಟಪಡಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಶರಿಯಾ ಕಾನೂನು ಜಾರಿ ಮಾಡಲಿದ್ದೇವೆ. ಮುಂದಿನ ದಿನಗಳಲ್ಲಿ ಯಾರೇ ಆಗಲಿ ತಮ್ಮ ವೃತ್ತಿ ಶರಿಯಾಗೆ ವಿರುದ್ಧವಾಗಿ ಇದ್ದರೆ ಶಿಫ್ಟ್​ ಮಾಡಿಕೊಳ್ಳಬೇಕಾಗುತ್ತದೆ. ಶರಿಯಾ ಜಾರಿ ಬಳಿಕ ಇದಕ್ಕೆ ವಿರುದ್ಧ ನಡೆದುಕೊಳ್ಳುವವರಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಈ ಮುನ್ನ ಸರಿಯಾದ ತನಿಖೆ ಮಾಡಲಾಗುವುದು ಎಂದಿದ್ದಾರೆ ಮುಜಾಯಿದ್.

ಇದನ್ನೂ ಓದಿ: ಕಾಶ್ಮೀರ ವಶಕ್ಕೆ ತಾಲಿಬಾನ್ ಸಹಾಯ ಮಾಡಲಿದೆ ಎಂದ ಪಾಕಿಸ್ತಾನ್; ಸ್ಕೆಚ್ ಹಾಕಿದ್ರಾ ಇಮ್ರಾನ್?

ಶರಿಯಾಗೆ ವಿರುದ್ಧವಾಗಿ ಯಾವುದೇ ವೃತ್ತಿಯನ್ನು ಮಾಡುವಂತಿಲ್ಲ ಎಂದು ತಾಲಿಬಾನ್​​ ಖಡಕ್​ ಸಂದೇಶ ನೀಡಿದೆ. ಒಂದು ವೇಳೆ ಈ ಕಾನೂನು ಜಾರಿಯಾದರೆ ಚಿತ್ರರಂಗದ ಕಲಾವಿದರು ಸಿನಿಮಾಗಳಲ್ಲಿ ನಟಿಸುವಂತಿಲ್ಲ, ಸಂಗೀತಗಾರರು ಹಾಡುವಂತಿಲ್ಲ, ಕುಣಿಯುವಂತಿಲ್ಲ. ಇದು ಅಫ್ಘಾನಿಸ್ತಾನ ಕಲಾವಿದರ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.

Source: newsfirstlive.com Source link