ಡಾಲಿ ಧನಂಜಯ್​ಗೆ ವಿಲನ್ ಆದ್ರು ಲೂಸ್ ಮಾದ ಯೋಗಿ..!

ಡಾಲಿ ಧನಂಜಯ್​ಗೆ ವಿಲನ್ ಆದ್ರು ಲೂಸ್ ಮಾದ ಯೋಗಿ..!

ಲೂಸ್ ಮಾದ ಯೋಗಿ.. ಇವತ್ತಿಗೂ ಲೂಸ್ ಮಾದ ಅನ್ನೋ ಹೆಸರನ್ನ ಯೋಗೇಶ್ ಅನ್ನೋ ಹೆಸರಿನಿಂದ ದೂರ ಮಾಡಲು ಸಾಧ್ಯವಾಗುತ್ತಿಲ್ಲ.. ದುನಿಯಾ ಸಿನಿಮಾದ ಒಂದು ಪಾತ್ರ ಇವತ್ತಿಗೂ ಯೋಗೇಶ್ ಅವರನ್ನ ಕನ್ನಡಿಗರು ಗುರುತಿಸುವಂತೆ ಮಾಡಿದೆ.. ಸಾಲು ಸಾಲು ಸಿನಿಮಾಗಳಲ್ಲಿ ಹೀರೋ ಆಗಿ ಯೋಗಿ ಮಿಂಚಿದ್ದಾರೆ ಮತ್ತು ಮಿಂಚುತ್ತಿದ್ದಾರೆ.. ಆದ್ರೆ ಜಸ್ಟ್ ಫಾರ್ ಎ ಚೈಂಜ್ ಎಂಬುವಂತೆ ನೆಗೆಟಿವ್ ರೋಲ್ ಒಂದು ಯೋಗಿ ಮನೆ ಅಡ್ರೆಸ್ ತನಕ ಹುಡುಕಿಕೊಂಡು ಬಂದಿದ್ಯಂತೆ. ಅದೂ ಡಾಲಿ ಧನಂಜಯ್ ನಟನೆ ಹೊಸ ಸಿನಿಮಾದಿಂದ!

ಇವತ್ತು ಹೀರೋ ರೋಲ್ ಗಿಂತ ವಿಲನ್ ರೋಲ್​ಗಳಿಂದಲೇ ಧನಂಜಯ ಹೆಚ್ಚೆಚ್ಚು ಸೌಂಡ್ ಮಾಡ್ತಿರೋದು. ಕನ್ನಡದ ಗಡಿಯನ್ನ ದಾಟಿ ಈಗ ಅಕ್ಕ ಪಕ್ಕದ ಇಂಡಸ್ಟ್ರಿಗಳಲ್ಲಿ ಡಾಲಿ ದಾಂಧಲೆ ಮಾಡ್ತಿದ್ದಾರೆ. ಇಂತಹ ಡಾಲಿ ಧನಂಜಯ್ ಹೀರೋ ಆಗಿ ನಟಿಸುತ್ತಿರೋ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ವಿಲನ್​​​. ಹಾಗಾದ್ರೆ ಯಾವುದು ಆ ಸಿನಿಮಾ ಅನ್ನೋದಕ್ಕೆ ಉತ್ತರ ಹೆಡ್ ಬುಷ್.

ಇದನ್ನೂ ಓದಿ: ವಿಸ್ಮಯಕಾರಿ ಮೂಡುಗಲ್ಲು ಗುಹಾಂತರ ಕೇಶವನಾಥ ದೇವಾಲಯಕ್ಕೆ ಭೇಟಿ ಕೊಟ್ಟ ರಕ್ಷಿತ್​, ರಿಷಬ್​ ಶೆಟ್ಟಿ

ಲಂಕೆ.. ಯೋಗೇಶ್ ನಟಿಸಿರುವ ಸಿನಿಮಾ.. ಟೀಸರ್, ಸಾಂಗ್​​ಗಳಿಂದ ಗಮನ ಸೇಳೆದಿರೋ ಲಂಕೆ ಶೀಘ್ರದಲ್ಲೇ ಥಿಯೇಟರ್ ಗಳಲ್ಲಿ ಸೌಂಡ್ ಮಾಡಲಿದೆ. ಈ ಲಂಕೆ ಸಿನಿಮಾದ ಆಡಿಯೋ ಲಾಂಚ್ ಅನ್ನ ಡಾಲಿ ಧನಂಜಯ ಪ್ರೀತಿಯಿಂದ ಮಾಡಿಕೊಟ್ಟಿದ್ದಾರೆ. ಲಂಕೆ ಆಡಿಯೋ ಲಾಂಚ್​​ ಸಂದರ್ಭದಲ್ಲಿ ಡಾಲಿ ಧನಂಜಯ ತಮ್ಮ ನಿರ್ಮಾಣದ ಹೆಡ್ ಬುಷ್ ಸಿನಿಮಾದಲ್ಲಿ ಲೂಸ್ ಮಾದ ಯೋಗಿ ನಟಿಸುತ್ತಿದ್ದಾರೆ ಅನ್ನೋ ಗುಟ್ಟನ್ನ ಬಿಟ್ಟುಕೊಟ್ಟಿದ್ದಾರೆ.

 

View this post on Instagram

 

A post shared by Dhananjaya (@dhananjaya_ka)

ಇದನ್ನೂ ಓದಿ: ‘ಪುಷ್ಪ’ನ ಅಂಗಳದಲ್ಲಿ ಡಾಲಿ ಫೈಟ್ ಸೋರಿಕೆ -‘ಜಾಲಿ ರೆಡ್ಡಿ’ ಲುಕ್​​ಗೆ ಡಾಲಿ ಫ್ಯಾನ್ಸ್ ಫುಲ್ ಫಿದಾ

ಹೆಡ್ ಬುಷ್ ಸಿನಿಮಾದಲ್ಲಿ ಯೋಗೇಶ್ ನೆಗೆಟಿವ್ ರೋಲ್ ಒಂದನ್ನ ಮಾಡ್ತಿದ್ದಾರೆ ಅನ್ನೋ ಮಾಹಿತಿ ಇದೆ. ಯೋಗಿ ಕರಿಯರ್​​​​ಗೆ ನೆಗೆಟಿವ್ ರೋಲ್ ಅಥವಾ ವಿಲನ್ ರೋಲ್ ಇದೇ ಫಸ್ಟ್ ಏನು ಅಲ್ಲ. ಈ ಹಿಂದೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ನಟನೆಯ ಲೀಡರ್ ಸಿನಿಮಾದಲ್ಲಿ ಯೋಗಿ ನೆಗೆಟಿವ್ ರೋಲ್​​ನಲ್ಲಿ ಕಾಣಿಸಿಕೊಂಡಿದ್ದರು. ಈಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ ಯೋಗಿ.

ಇದನ್ನೂ ಓದಿ: ಸುದೀಪ್ ಬರ್ತ್​​ಡೇ K3 ರಿಲೀಸ್ ಅನೌನ್ಸ್​​ಮೆಂಟ್ -RRR ಬರೋ ದಿನ ಕೋಟಿಗೊಬ್ಬ ರಿಲೀಸ್ ಆಗುತ್ತಾ?

 

Source: newsfirstlive.com Source link