ಡೆತ್ ನೋಟ್ ಬರೆದು ಭದ್ರಾ ಡ್ಯಾಂಗೆ ಹಾರಿ ಪ್ರಾಣ ಕಳೆದುಕೊಂಡ ಕಂದಾಯ ನಿರೀಕ್ಷಕ

ಡೆತ್ ನೋಟ್ ಬರೆದು ಭದ್ರಾ ಡ್ಯಾಂಗೆ ಹಾರಿ ಪ್ರಾಣ ಕಳೆದುಕೊಂಡ ಕಂದಾಯ ನಿರೀಕ್ಷಕ

ಚಿಕ್ಕಮಗಳೂರು: ಡೆತ್ ನೋಟ್ ಬರೆದು ಕಂದಾಯ ನಿರೀಕ್ಷಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಸಮೀಪದ ಭದ್ರಾ ಹಿನ್ನೀರಿನಲ್ಲಿ ನಡೆದಿದೆ. ಕಂದಾಯ ನಿರೀಕ್ಷಕ ಸೋಮಶೇಖರ್ 55 ಅತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.

ಡೆತ್​ನೋಟ್​ನಲ್ಲಿ ಮೂವರ ಹೆಸರು ಬರೆದಿರುವ ಸೋಮಶೇಖರ್.. ಬಗರ್​ಹುಕಂ ಹಾಗೂ ಸ್ಮಶಾನ ಭೂಮಿ ವಿಚಾರ ಉಲ್ಲೇಖಿಸಿದ್ದಾರೆ. ಲಕ್ಕವಳ್ಳಿ ಸಮೀಪದ ಭದ್ರಾ ಹಿನ್ನೀರಿನಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರು ಲಕ್ಕವಳ್ಳಿಯಲ್ಲಿ ಕಂದಾಯ ನಿರೀಕ್ಷಕರಾಗಿ ಕೆಲಸ ಮಾಡ್ತಿದ್ದರು. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಾಜಿ ಶಾಸಕ ಶ್ರೀನಿವಾಸ್ ಸೋಮಶೇಖರ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದು.. ಆತ ಪ್ರಮಾಣಿಕ ಅಧಿಕಾರಿ.. ಅವರ ಆತ್ಮಹತ್ಯೆ ದುರದೃಷ್ಟಕರ.. ಮೂವರು ರಾಜಕರಾಣಿಗಳ ಹೆಸರು ಬರೆದು ವಾಟ್ಸ್​ಆ್ಯಪ್ ಮೂಲಕ ಹರಿ ಬಿಟ್ಟಿದ್ದಾರೆ. ಬಗರ್ ಹುಕಂ ಕಮಿಟಿಯ ಕಿರುಕುಳ ಶಂಕೆ ಇದೆ. ಸೋಮಶೇಖರ್​ಗೆ ನ್ಯಾಯ ನೀಡಬೇಕು.. ತಪ್ಪಿತಸ್ಥರಿಗೆ ಶಿಕ್ಷಯಾಗಬೇಕು. ಇಲ್ಲದಿದ್ರೆ ಹೋರಾಟ ಮಾಡಬೇಕಾಗುತ್ತದೆಂದು ಎಚ್ಚರಿಕೆ ನೀಡಿದ್ದಾರೆ.

Source: newsfirstlive.com Source link