ತಾಲಿಬಾನಿಗಳಿಗೆ ಮರ್ಮಾಘಾತ; ಹಣಕಾಸಿನ ನೆರವು ತಡೆಹಿಡಿದ ವಿಶ್ವಬ್ಯಾಂಕ್

ತಾಲಿಬಾನಿಗಳಿಗೆ ಮರ್ಮಾಘಾತ; ಹಣಕಾಸಿನ ನೆರವು ತಡೆಹಿಡಿದ ವಿಶ್ವಬ್ಯಾಂಕ್

ಅಫ್ಘಾನಿಸ್ತಾನವನ್ನ ವಶಪಡಿಸಿಕೊಂಡ ತಾಲಿಬಾನಿಗಳಿಗೆ ವಿಶ್ವಬ್ಯಾಂಕ್ ದೊಡ್ಡ ಪೆಟ್ಟನ್ನೇ ಕೊಟ್ಟಿದೆ. ಅಫ್ಘಾನಿಸ್ತಾನದ ಯೋಜನೆಗಳಿಗೆ ನೀಡಲಾಗುವ ಹಣವನ್ನ ವಿಶ್ವಬ್ಯಾಂಕ್ ತಡೆಹಿಡಿದಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ವಿಶ್ವಬ್ಯಾಂಕ್.. ಅಭಿವೃದ್ಧಿ ಕಾರ್ಯಗಳ ಮೇಲೆ, ಮತ್ತು ಮಹಿಳೆಯರ ಮೇಲೆ​ ತಾಲಿಬಾನ್​ ಸರ್ಕಾರದ ಪರಿಣಾಮದ ಕುರಿತು ನಮಗೆ ಕಾಳಜಿ ಇದೆ ಎಂದು ಹೇಳಿದೆ.

ಇದನ್ನೂ ಓದಿ: ತಾಲಿಬಾನಿಗಳಿಗೆ IMF ಗುನ್ನಾ; ‘ಆರ್ಥಿಕ ಚಕ್ರವ್ಯೂಹ’ದ ಸ್ಟ್ರೋಕ್​ಗೆ ಉಗ್ರ ಸಂಘಟನೆ ಕಂಗಾಲು..!

ನಾವು ಅಫ್ಘಾನಿಸ್ತಾನದ ಪರಿಸ್ಥಿತಿಯನ್ನ ನಮ್ಮದೇ ಮಿತಿಯಲ್ಲಿ ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಇದರ ಜೊತೆಗೆ ನಾವು ಅಂತಾರಾಷ್ಟ್ರೀಯ ಸಮುದಾಯಗಳು ಹಾಗೂ ಡೆವಲೆಪ್​ಮೆಂಟ್ ಪಾರ್ಟ್​​ನರ್​ಗಳ ಜೊತೆಗೆ ಸಮಾಲೋಚನೆ ನಡೆಸುತ್ತಿದ್ದೇವೆ. ನಾವು ನಮ್ಮ ಪಾರ್ಟನರ್​ಗಳು ಜೊತೆಯಾಗಿ ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನ ಚಾಲನೆಯಲ್ಲಿಡಲು ಇರುವ ದಾರಿಗಳನ್ನು ಹುಡುಕುತ್ತೇವೆ ಮತ್ತು ಅಫ್ಘಾನಿಸ್ತಾನ ಜನರಿಗೆ ಬೆಂಬಲ ನೀಡುತ್ತೇವೆ ಎಂದಿದ್ದಾರೆ. 2002 ರ ಏಪ್ರಿಲ್​ನಿಂದ ವಿಶ್ವಬ್ಯಾಂಕ್ ಅಫ್ಘಾನಿಸ್ತಾನ ಅಭವೃದ್ಧಿಗಾಗಿ 5.3 ಬಿಲಿಯನ್ ಡಾಲರ್​​ಗಳನ್ನು ಮೀಸಲಿಟ್ಟಿತ್ತು.

ಇದನ್ನೂ ಓದಿ: ಪಂಜ್​​ಶಿರ್ ಪ್ರಾಂತ್ಯ ವಶಕ್ಕೆ ಪಡೆಯಲು ಕುತಂತ್ರ -ಮಹಿಳೆ, ಮಕ್ಕಳನ್ನೇ ಗುರಾಣಿಯಾಗಿ ಬಳಸಿಕೊಳ್ತಿರೋ ತಾಲಿಬಾನ್​​

Source: newsfirstlive.com Source link