ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿ ಆಗಬೇಕು, ಅದಕ್ಕಾಗಿ ನಾವು ಫೈಟ್ ಮಾಡ್ತೀವಿ -ಬಾಲಚಂದ್ರ

ರಮೇಶ್ ಜಾರಕಿಹೊಳಿ ಮತ್ತೆ ಮಂತ್ರಿ ಆಗಬೇಕು, ಅದಕ್ಕಾಗಿ ನಾವು ಫೈಟ್ ಮಾಡ್ತೀವಿ -ಬಾಲಚಂದ್ರ

ನವದೆಹಲಿ: ರಮೇಶ್ ಜಾರಕಿಹೊಳಿ, ಸೀಮಂತ್ ಪಾಟೀಲ್​ಗೆ ಸಚಿವ ಸ್ಥಾನ ನೀಡಬೇಕೆಂದು ನಮ್ಮ ಒತ್ತಾಯ ಇದೆ ಅಂತಾ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.

ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ.. ನಾವು ಯಾವ ಹೈಕಮಾಂಡ್ ನಾಯಕರನ್ನು ಭೇಟಿ ಆಗಲು ಬಂದಿಲ್ಲ. ಬೇರೆ ಯಾವುದೋ ಒಂದು ಕೆಲಸದ ಸಲುವಾಗಿ ದೆಹಲಿಗೆ ಬಂದಿದ್ದೇವೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರನ್ನ ಈ ಸಂದರ್ಭದಲ್ಲಿ ನಾವು ಭೇಟಿ ಮಾಡುತ್ತೇವೆ.

ಈ ಹಿಂದೆ ಬಿಜೆಪಿ ಸರ್ಕಾರ ತರುವಲ್ಲಿ ರಮೇಶ್ ಜಾರಕಿಹೊಳಿ ಹಾಗೂ ಸೀಮಂತ್ ಪಾಟೀಲ್ ಪಾತ್ರ ಪ್ರಮುಖವಾಗಿದೆ. ಹೀಗಾಗಿ ಸಿಎಂ ಅವರನ್ನ ಭೇಟಿಯಾಗಿ ಒತ್ತಾಯ ಮಾಡುತ್ತೇವೆ. ನಾಳೆ ಬೆಂಗಳೂರಿಗೆ ಹೋಗುತ್ತೇವೆ ಅಂತಾ ಇದೇ ವೇಳೆ ಹೇಳಿದರು.

Source: newsfirstlive.com Source link