ತಲೆಕೆಳಗಾದ ಕೇರಳ ಮಾಡೆಲ್; ಒಂದೇ ದಿನ 31,445 ಕೊರೊನಾ ಪಾಸಿಟಿವ್ ಕೇಸ್

ತಲೆಕೆಳಗಾದ ಕೇರಳ ಮಾಡೆಲ್; ಒಂದೇ ದಿನ 31,445 ಕೊರೊನಾ ಪಾಸಿಟಿವ್ ಕೇಸ್

ಕೇರಳ: ಹಿಂದೊಮ್ಮೆ ಕೊರೊನಾ ಸೋಂಕು ನಿರ್ವಹಣೆಯಲ್ಲಿ ಮಾದರಿ ರಾಜ್ಯ ಎನ್ನಿಸಿಕೊಂಡಿದ್ದ ಕೇರಳ ಇದೀಗ ಪಾಸಿಟಿವ್ ಪ್ರಕರಣಗಳ ಸಂಖ್ಯೆಯಲ್ಲಿ ಅತೀ ಕಳಪೆ ರಾಜ್ಯ ಎನ್ನಿಸಿಕೊಂಡಿದೆ.

ಕಳೆದ ಕೆಲವು ತಿಂಗಳುಗಳಿಂದ ಕೇರಳ ರಾಜ್ಯದಲ್ಲಿ ಕೊರೊನಾ ತಾಂಡವವಾಡುತ್ತಿದೆ. ಇಂದು ಒಂದೇ ದಿನ ಕೇರಳ ರಾಜ್ಯದಲ್ಲಿ ಬರೋಬ್ಬರಿ 31,445 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ನೆರೆರಾಜ್ಯಗಳಾದ ತಮಿಳುನಾಡು ಮತ್ತ ಕರ್ನಾಟಕಕ್ಕೂ ಆತಂಕ ಹೆಚ್ಚಾಗಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡ: ನೆಗೆಟಿವ್​ ವರದಿಯೊಂದಿಗೆ ಕೇರಳದಿಂದ ಬಂದಿದ್ದ 228 ವಿದ್ಯಾರ್ಥಿಗಳಿಗೆ ಪಾಸಿಟಿವ್

ಇಂದಿನ ಕೊರೊನಾ ಪ್ರಕರಣಗಳನ್ನು ನಿನ್ನೆಗೆ ಹೋಲಿಸಿದರೆ ನಿನ್ನೆಗಿಂತಲೂ ಇಂದು 7,149 ಕೇಸ್​​ಗಳು ಹೆಚ್ಚಾಗಿದ್ದು ದಿನೇ ದಿನೇ ಕೊರೊನಾ ಪ್ರಕರಣಗಳು ಏರಿಕೆ ಕಾಣುತ್ತಲೇ ಇವೆ. ಇನ್ನು ಕೇರಳದ ಪಾಸಿಟಿವಿಟಿ ರೇಟ್ 19.03%ಗೆ ಜಿಗಿದಿದೆ. ಇಂದು ಸೋಂಕಿನಿಂದಾಗಿ 215 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಕೇರಳಕ್ಕೆ ಹತ್ತರ ಕುತ್ತು.. ಸೋಂಕಿತರಿಗೂ ಸೋಂಕು; ಕರ್ನಾಟಕಕ್ಕೂ ಆತಂಕ ತಂದಿರೋ ದೇವರ ನಾಡು

ನಿನ್ನೆ ಅಂದ್ರೆ ಆಗಸ್ಟ್ 24 ರಂದು ಕೇರಳದಲ್ಲಿ 24,296 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದವು.. ಆಗಸ್ಟ್ 23 ರಂದು ವರದಿಯಾಗಿದ್ದ ಕೇಸ್​ಗಳಿಗಿಂತಲೂ ನಿನ್ನೆ 10,910 ಹೆಚ್ಚು ಕೇಸ್​​ಗಳು ವರದಿಯಾಗಿದ್ದವು. ನಿನ್ನೆಯ ಪಾಸಿಟಿವಿಟಿ ರೇಟ್ 18.04% ಇತ್ತು. ಆಗಸ್ಟ್ 23 ರಂದು ಕೇರಳದಲ್ಲಿ 13,386 ಪ್ರಕರಣಗಳು ವರದಿಯಾಗಿದ್ದವು.

Source: newsfirstlive.com Source link