‘ರಾಜಿ’ ಪಾತ್ರದಲ್ಲಿ ನಟಿಸಿದ್ದಕ್ಕೆ ತಮಿಳು ಜನರೆದುರು ಕೈಮುಗಿದು ಕ್ಷಮೆ ಕೇಳಿದ ಸಮಂತಾ

‘ರಾಜಿ’ ಪಾತ್ರದಲ್ಲಿ ನಟಿಸಿದ್ದಕ್ಕೆ ತಮಿಳು ಜನರೆದುರು ಕೈಮುಗಿದು ಕ್ಷಮೆ ಕೇಳಿದ ಸಮಂತಾ

ಸಮಂತಾ ಅಕ್ಕಿನೇನಿ.. ಸೌಥ್ ಸಿನಿ ದುನಿಯಾದ ಆ್ಯಪಲ್ ಬ್ಯೂಟಿ.. ಈಕೆ ನಕ್ಕರೆ ಪಡ್ಡೆ ಫ್ಯಾನ್ಸ್ ಪಾಲಿಗೆ ಬೆಳೆದಿಂಗಳು, ಆಕೆ ಅತ್ತರೆ ತಂಗಳು.. ಇನ್ನು ಆ್ಯಮ್​​​​ ಸೋ ಸಾರಿ ಅಂದರೆ ಫ್ಯಾನ್ಸ್​​​​​​ಗೆ ಬೇಜಾರಾಗದೆ ಇರುತ್ತಾ ಹೇಳಿ.. ಆ ಎಲ್ಲಾ ವಿರೋಧಗಳಿಗೆ ಸಮಂತಾ ಉತ್ತರ ಕೊಟ್ಟಿದ್ದಾರೆ.. ನನ್ನಿಂದ ತಪ್ಪಾಗಿದ್ರೆ ಕ್ಷಮಿಸಿ ಬಿಡಿ ಎಂದು ಬೇಡಿಕೊಂಡಿದ್ದಾರೆ.. ಹಿಂಗ್ಯಾಕ್ ಅಂದ್ರು ಅಕ್ಕಿನೇನಿ ಕುಟುಂಬದ ಸೊಸೆ..?

ಸಮಂತಾ ಅಕ್ಕಿನೇನಿ.. ಸೌಥ್ ಸಿನಿ ಲೋಕದ ಬೆಳದಿಂಗಳಂಥ ಚೆಲುವು.. ಸ್ಯಾಮ್ಸ್ ಮೇಲೆ ಪಡ್ಡೆ ಫ್ಯಾನ್ಸ್​​ಗೆ ಸದಾ ಒಲವು.. ನಂಗೆ ಗರ್ಲ್ ಫ್ರೆಂಡ್ ಸಿಕ್ರೆ ಸಮಂತಾನಂಗೆ ನಗೋ ನಯನ ಮನೋಹರಿ ಸಿಗಬೇಕು ಅಂತ ಅದೆಷ್ಟೋ ಪಡ್ಡೆ ಫ್ಯಾನ್ಸ್ ತಿರುಪತಿಗೆ ಸೀಕ್ರೆಟ್ ಆಗಿ ಅಪ್ಲಿಕೇಷನ್ ಹಾಕಿದ್ದಾರೋ ಏನೋ.. ಇವತ್ತಿಗೂ ಸಮಂತಾಗೆ ದಿಲ್ಕಿ ಡಿಮ್ಯಾಂಡ್ ಇದೆ..

blank
ಸಖತ್ ಪೀಕ್​​​​​​ನಲ್ಲಿದ್ದ ಹೀರೋಯಿನ್ಸ್ ಮದುವೆಯಾದ ಮೇಲೆ ಸ್ಟಾರ್ ವ್ಯಾಲ್ಯು ಕಡಿಮೆಯಾಗುತ್ತೆ ಅಂತಾರೆ.. ಆದ್ರೆ ಕೆಲ ನಟಿಯರ ಬೇಡಿಕೆ ಕಿಂಚಿತ್ತೂ ಕಡಿಮೆ ಆಗೊಲ್ಲ.. ಸೌಥ್ ಇಂಡಿಯನ್ ಬ್ಯೂಟಿ ಸಮಂತಾ ಅಕ್ಕಿನೇನಿ ಅವರಿಗೆ ಮದುವೆಯ ನಂತರವೂ ಸಾಕಷ್ಟು ಆಫರ್ಸ್​​ಗಳು ಬರ್ತಿವೆ.. ಸದ್ಯ ವಿಜಯ್ ಸೇತುಪತಿ ನಟನೆಯ ತಮಿಳು ಸಿನಿಮಾವೊಂದರಲ್ಲಿ ನಯನತಾರ ಜೊತೆಗೆ ಟಾಲಿವುಡ್ ಆ್ಯಪಲ್ ಬ್ಯೂಟಿ ನಟಿಸಿ ನಳನಳಿಸುತ್ತಿದ್ದಾರೆ..

ವಿನ್ನೈತಾಂಡಿ ವರುವಾಯ ಅನ್ನೋ ತಮಿಳು ಸಿನಿಮಾದಲ್ಲಿ ಚಿಕ್ಕದೊಂದು ಪಾತ್ರದ ಮೂಲಕ ನಗೆ ಬೆಳಕನ್ನ ಚೆಲ್ಲುತ್ತ ಸಿನಿಮಾ ರಂಗಕ್ಕೆ ಬಂದವರು ಸಮಂತಾ ರುಥ್ ಪ್ರಭು.. ತದ ನಂತರ ಏ ಮಾಯ ಚೇಸ್ಯಾವೇ ಸಿನಿಮಾದ ಮೂಲಕ ಟಾಲಿವುಡ್ ಅಂಗಳದಲ್ಲಿ ಹೊಸ ಹೀರೋಯಿನ್ ಆಗಿ ಪರಿಚಯವಾದ್ರು.. ಈ ಸಿನಿಮಾದ ನಂತರ ಸ್ಯಾಮ್ಸ್ ತಿರುಗು ನೋಡಿದ್ದೇ ಇಲ್ಲ.. ಈಗ ಸಮಂತಾ ಸಿನಿ ಕರಿಯರ್​​​ಗೆ 11 ವರ್ಷವಾಗಿದೆ.. ಮೂವತ್ನಾಲ್ಕು ಆಗಿದ್ದರೂ ಇಪ್ಪತ್ನಾಲ್ಕರ ಹುಡ್ಗಿಯಂತೆ ಕಂಗೊಳಿಸೋ ಮಿಸಸ್ ನಾಗ ಚೈತನ್ಯ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.. ಹಾಗಾದ್ರೆ ಸ್ಯಾಮ್ಸ್ ಕ್ಷಮೆಯಾಚಿಸಲು ಕಾರಣವೇನು..?

ಅದ್ಯಾವ ಕಾರಣಕ್ಕೆ ಕ್ಷಮೆ ಕೇಳಿದ್ರು ಸಮಂತಾ..?
ರಾಜಿ ವಿಚಾರಕ್ಕೆ ಸ್ವಾರಿ ಕೇಳಿದ್ರಾ ಆ್ಯಪಲ್ ಬ್ಯುಟಿ..?

ನೋಡಿ ಒಂದು ಸಿನಿಮಾ ಆ ಸಿನಿಮಾದಲ್ಲಿ ಬರೋ ಪಾತ್ರ ಎಷ್ಟ್ ಎಷ್ಟೆಲ್ಲ ಸೌಂಡ್ ಮಾಡುತ್ತೆ ಅಂತ.. ವೆರಿ ಫೇಮಸ್ ವೆಬ್ ಸಿರೀಸ್ ಫ್ಯಾಮಿಲಿ ಮ್ಯಾನ್-2 ನಲ್ಲಿ ಸಮಂತಾ ಶ್ರೀಲಂಕನ್ ತಮಿಳು ಹೋರಾಟಗಾರ್ತಿ ರಾಜಿ ಅನ್ನೋ ಪಾತ್ರದಲ್ಲಿ ಕಾಣಿಸಿಕೊಂಡ್ರು.. ಸಮಂತಾ ಪಾತ್ರಕ್ಕೆ ಆಕೆ ರಾಜಿ ಪಾತ್ರಕ್ಕಾಗಿ ಮಾಡಿಕೊಂಡ ಪರಿಶ್ರಮಕ್ಕೆ ಎಲ್ಲಾ ಭಾಷೆಯ ಸಿನಿಮಾ ಪ್ರೇಕ್ಷಕ ಮಂದಿ ಮೆಚ್ಚಿ ಭೇಷ್ ಭೇಷ್ ಎಂದ್ರು.. ಆದ್ರೆ ಸಮಂತಾ ನಿರ್ವಹಿಸಿದ ರಾಜಿ ಪಾತ್ರವನ್ನ ಕಂಡ ತಮಿಳು ನಾಡಿನ ಕೆಲ ಜನ ಹಾಗೂ ರಾಜಕಾರಣಿಗಳು ತೀವ್ರ ವಿರೋಧ ವ್ಯಕ್ತ ಪಡಿಸಿದ್ರು.. ಈಗ ವಿಚಾರಕ್ಕೆ ಸಮಂತಾ ಮೌನ ಮುರಿದ್ದಾರೆ.. ನಾನು ನಿರ್ವಹಿಸಿದ್ದ ಪಾತ್ರದಿಂದ ನಿಮಗೆ ಬೇಸವಾಗಿದ್ದರೆ ಕ್ಷಮಿಸಿ ಬಿಡಿ ಎಂದು ಕೇಳಿಕೊಂಡಿದ್ದಾರೆ..

 

 

View this post on Instagram

 

A post shared by S (@samantharuthprabhuoffl)

ಸಮಂತಾ ಅವರ ಕ್ಷಮೆಯ ಹೇಳಿಕೆ ರಾಜಿ ಪಾತ್ರವನ್ನ ವಿರೋಧ ಮಾಡಿದ ಮಂದಿಗೆ ಮುಟ್ಟದಿದ್ದರೂ ಅವರ ಫ್ಯಾನ್ಸ್​ಗಳಿಗೆ ತಟ್ಟಿದೆ.. ಸಮಂತಾ ಸಾರಿ ಕೇಳಿದ್ದನ್ನ ಕಂಡು ಸ್ಯಾಮ್ಸ್ ಫ್ಯಾನ್ಸ್ ಅಯ್ಯೋ ಪಾಪ ಎಂದಿದ್ದಾರೆ.

Source: newsfirstlive.com Source link