ಎತ್ತಿನಹೊಳೆ ಯೋಜನೆಯ ಪರ್ಯಾಯ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡಿ- ಸಿಎಂಗೆ ಹೆಚ್​ಡಿಕೆ ಪತ್ರ

ಎತ್ತಿನಹೊಳೆ ಯೋಜನೆಯ ಪರ್ಯಾಯ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡಿ- ಸಿಎಂಗೆ ಹೆಚ್​ಡಿಕೆ ಪತ್ರ

ಬೆಂಗಳೂರು: ಎತ್ತಿನಹೊಳೆ ಯೋಜನೆಯ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡುವಂತೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಭೈರಗೊಂಡ್ಲು ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು 5.78 TMC ಯಿಂದ 2 TMC ಗೆ ಕಡಿತಗೊಳಿಸುವ ಪರ್ಯಾಯ ಪ್ರಸ್ತಾವನೆಯಿಂದಾಗಿ ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಕೆಯ ಮೇಲೆ ಉಂಟಾಗುವ ಭೀಕರ ಪರಿಣಾಮಗಳ ಕುರಿತು ಈ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಪತ್ರದಲ್ಲಿ ಏನಿದೆ..?

  1. ಎತ್ತಿನ ಹೊಳೆ ಯೋಜನೆಯ ನಿರ್ಮಾಣ ಕಾರ್ಯ 2012 ರಿಂದ ಜಾರಿಯಲ್ಲಿದ್ದು 8,200 ಕೋಟಿ ರೂ ವೆಚ್ಚವಾಗಿದೆ. ಯೋಜನೆಯ ಪ್ರಮುಖ ಅಂಗವಾದ ಭೈರಗೊಂಡ್ಲು ಜಲಾಶಯದವರೆಗೆ ಕಾಮಗಾರಿ ಪ್ರಗತಿಯಲ್ಲಿದ್ದು ಭೂ ಸ್ವಾಧೀನ ಸಮಸ್ಯೆಗಳಿಂದಾಗಿ 3.5 ವರ್ಷಗಳಿಂದ ಯೋಜನೆ ನೆನೆಗುದಿಗೆ ಬಿದ್ದಿದೆ.
  2. ಯೋಜನೆಯ ಮೂಲ ಉದ್ದೇಶ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವುದು ಮತ್ತು ಕೆರೆಗಳನ್ನು ತುಂಬಿಸುವುದು.
  3. ಪದೇ ಪದೇ ಯೋಜನೆಯ ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಿ ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು ತೀವ್ರವಾಗಿ ಕಡಿತಗೊಳಿಸುವ ತೀರ್ಮಾನದಿಂದ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಗೆ ಯೋಜನೆಯ ಬಗ್ಗೆ ವಿಶ್ವಾಸವೇ ಇಲ್ಲದಂತಾಗಿದೆ. ಬದಲಾವಣೆಯಿಂದ ತೀವ್ರ ಆಘಾತವಾಗಿದೆ. ಯಾವುದೇ ಸಮಯದಲ್ಲೂ ಇದು ಉಗ್ರ ಚಳುವಳಿ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಪರ್ಯಾಯ ಪ್ರಸ್ತಾನೆಯಿಂದ ಯೋಜನೆಯ ಮೂಲ ಉದ್ದೇಶಕ್ಕೆ ದುಷ್ಪರಿಣಾಮ ಬೀರಲಿದೆ.
  4. ಭೈರಗೊಂಡ್ಲು ಜಲಾಶಯದ ಸಂಗ್ರಹಣಾ ಸಾಮರ್ಥ್ಯವನ್ನು 5.78 ಟಿಎಂಸಿಯಿಂದ 2 ಟಿಎಂಸಿವರೆಗೆ ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೂಡಲೇ ಕೈಬಿಟ್ಟು, ಜಲಾಶಯಕ್ಕೆ ಅಗತ್ಯವಾದ ಭೂಸ್ವಾಧೀನ ಪ್ರಕ್ರಿಯೆಯನ್ನು ಕೊರಟಗೆರೆ ಭೂಮಾಲೀಕರ ಬೇಡಿಕೆಯಂತೆಯೇ ಸಕಾರಾತ್ಮಕವಾಗಿ ಪರಿಗಣಿಸಿ, ಈಗಾಗಲೇ ಅನುಮೋದಿತ ಪರಿಷ್ಕೃತ ಯೋಜನಾ ವರದಿಯಂತೆ ನಿರ್ಮಾಣ ಕಾರ್ಯವನ್ನು ಮುಂದುವರೆಸಿ.

Source: newsfirstlive.com Source link