ಪ್ರೀತಿ ನಿರಾಕರಣೆ; ಯುವತಿಯನ್ನು ಅಡ್ಡಗಟ್ಟಿ ತೊಡೆ, ಕುತ್ತಿಗೆಗೆ ಚಾಕುವಿನಿಂದ ಇರಿದ ಪಾಗಲ್​​ ಪ್ರೇಮಿ

ಪ್ರೀತಿ ನಿರಾಕರಣೆ; ಯುವತಿಯನ್ನು ಅಡ್ಡಗಟ್ಟಿ ತೊಡೆ, ಕುತ್ತಿಗೆಗೆ ಚಾಕುವಿನಿಂದ ಇರಿದ ಪಾಗಲ್​​ ಪ್ರೇಮಿ

ಬೆಂಗಳೂರು: ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿರುವ ಘಟನೆ ಬಾಗಲಗುಂಟೆಯ ಮಂಜುನಾಥ್ ನಗರದಲ್ಲಿ ನಡೆದಿದೆ. ಯುವತಿ ಇಂದು ಕಾಲೇಜಿಗೆ ಹೋಗುವಾಗ ಪಾಗಲ್ ಪ್ರೇಮಿ ಉದಯ್ ಎಂಬಾತ ಅಡ್ಡಗಟ್ಟಿದ್ದಾನೆ. ಈ ವೇಳೆ ನನ್ನ ಪ್ರೀತಿಯನ್ನೇ ನಿರಾಕರಿಸುತ್ತೀಯಾ ಎಂದು ಚಾಕುವಿನಿಂದ ಯುವತಿ ಕುತ್ತಿಗೆ ಹಾಗೂ ತೊಡೆ ಭಾಗಕ್ಕೆ ಬಲವಾಗಿ ಇರಿದಿದ್ದಾನೆ ಎಂದು ತಿಳಿದು ಬಂದಿದೆ.

ಇನ್ನು, ಯುವತಿ ಕೊಲೆಗೆ ಯತ್ನಿಸಿದ ಪಾಗಲ್​​ ಪ್ರೇಮಿ ಉದಯ್​​​​​​​​ ತಾನು ಗೋಡೆಗೆ ತಲೆ ಚಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ಈಗ ಉದಯ್​​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಂದೇ ಕಾಲೇಜಿನಲ್ಲಿ ಪಿಯುಸಿ

ಉದಯ್ ಮತ್ತು ಯುವತಿ ರಾಜಾಜಿನಗರದ ಒಂದೇ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಪಿಯುಸಿ ಮುಗಿದ ಬಳಿಕ ಪ್ರತ್ಯೇಕ ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿದ್ದರು. ಕಳೆದ ಮೂರು ವರ್ಷದಿಂದ ಯುವತಿ ಜೊತೆ ಸ್ನೇಹಿತನಾಗಿದ್ದ ಉದಯ್‌, ಇತ್ತೀಚೆಗೆ ಲವ್ ಪ್ರಪೋಸ್ ಮಾಡಿದ್ದ. ಆದರೆ, ಯುವತಿ ಉದಯ್​​ ಲವ್​​ ಪ್ರಪೋಸಲ್​​ ನಿರಾಕರಿಸಿದ್ದಳು. ಹಾಗಾಗಿ ಕಾಲೇಜಿಗೆ ಹೋಗುತ್ತಿದ್ದ ಯುವತಿಯನ್ನು ಅಡ್ಡಗಟ್ಟಿ ಉದಯ್​​ ಮಾರಣಾಂತಿಕ‌ ಹಲ್ಲೆ ನಡೆಸಿದ್ದಾನೆ.

ಇದನ್ನೂ ಓದಿ: ಅಘ್ಘಾನ್​ ಕ್ಯಾಬಿನೆಟ್ ಸಚಿವನೀಗ ಪಿಜ್ಜಾ ಡೆಲಿವರಿ ಬಾಯ್; ಆಕ್ಸ್​ಫರ್ಡ್​ ಪದವೀಧರನಿಗೆ ಎಂಥಾ ಸ್ಥಿತಿ

ಸದ್ಯ ಚಿಕಿತ್ಸೆಗಾಗಿ ಯುವತಿಯನ್ನು ಹೆಸರಘಟ್ಟ ರಸ್ತೆಯ ಸಪ್ತಗಿರಿ ಆಸ್ಪತ್ರೆಗೆ ಸೇರಿಸಲಾಗಿದೆ. ಯುವತಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

Source: newsfirstlive.com Source link