ನೀರು ಕುಡಿಯಲು ಹೋಗಿ ಕಾಲುವೆಯಲ್ಲಿ ಬಿದ್ದು ಯುವಕ ಸಾವು

ಯಾದಗಿರಿ: ನೀರು ಕುಡಿಯಲು ಹೋಗಿ ಕಾಲು ಜಾರಿ ಕಾಲುವೆಯಲ್ಲಿ ಬಿದ್ದು ಯುವಕ ಸಾವನ್ನಪ್ಪಿದ ಘಟನೆ ಜಿಲ್ಲೆಯ ಹುಣಸಗಿ ತಾಲೂಕಿನ ಮಾರ್ನಾಳ್ ಬಳಿ ನಡೆದಿದೆ.

ಸಾವನ್ನಪ್ಪಿದ ಯುವಕನನ್ನು ನಾರಾಯಣಪುರ ಗ್ರಾಮದ 22 ವರ್ಷದ ಜುಮ್ಮಣ್ಣ ಎಂದು ಗುರುತಿಸಲಾಗಿದೆ. ನಾರಾಯಣಪುರ ಬಳಿಯ ತೋಟಗಾರಿಕೆ ಇಲಾಖೆಯ ನರ್ಸರಿಯಲ್ಲಿ ಕೆಲಸ ಮಾಡುತ್ತಿದ್ದ ಜುಮ್ಮಣ್ಣ, ಎಡದಂಡೆ ಕಾಲುವೆ ಬಳಿ ವಾಯು ವಿಹಾರಕ್ಕೆ ತೆರಳಿದ್ದ. ಇದನ್ನೂ ಓದಿ: ಗಲಾಟೆ ಮಾಡಿ ತಲೆಗೆ ಕಲ್ಲಲ್ಲಿ ಹೊಡೆದು ಹುಡುಗಿಯನ್ನು ದೂರ ಕರೆದೊಯ್ದು ರೇಪ್ ಮಾಡಿದ್ರು: ಯುವಕ

ಈ ವೇಳೆ ನೀರು ಕುಡಿಯಲು ಕಾಲುವೆ ದಡಕ್ಕಿಳಿದಿದ್ದ, ಆಗ ಕಾಲು ಜಾರಿ ಬಿದ್ದು ಸಾವನ್ನಪ್ಪಿದಾನೆ. ಇಂದು ಬೆಳಗ್ಗೆ ಮಾರ್ನಾಳ್ ಬಳಿಯ ಕಾಲುವೆಯಲ್ಲಿ ಶವ ಪತ್ತೆಯಾಗಿದೆ. ನಾರಾಯಣಪುರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ.

Source: publictv.in Source link