ಆಕ್ಷೇಪಾರ್ಹ ಪದ ಬಳಕೆ.. ಜಗ್ಗೇಶ್ ವಿರುದ್ಧ ದ.ಸಂ.ಸ ಅಧ್ಯಕ್ಷ ದೂರು

ಆಕ್ಷೇಪಾರ್ಹ ಪದ ಬಳಕೆ.. ಜಗ್ಗೇಶ್ ವಿರುದ್ಧ ದ.ಸಂ.ಸ ಅಧ್ಯಕ್ಷ ದೂರು

ಬೆಂಗಳೂರು: ನಟ ಕೋಮಲ್ ವಿರುದ್ಧ ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಸಿ.ಎಸ್. ರಘು ಆರೋಪ ಹೊರಿಸಿದ ಬೆನ್ನಲ್ಲೇ ನಟ ಜಗ್ಗೇಶ್ ಸಿ.ಎಸ್. ರಘು ಅವರ ವಿರುದ್ಧ ಮಾನನಷ್ಠ ಮೊಕದ್ದಮೆ ಹೂಡುತ್ತೇನೆ ಎಂದಿದ್ದರು. ಅಲ್ಲದೇ ರಘು ಅವರಿಗೆ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.

ಅಲ್ಲದೇ ರಘು ಅವರ ವಿರುದ್ಧ ಜಗ್ಗೇಶ್ ಟ್ವೀಟ್​ಗಳನ್ನೂ ಮಾಡಿದ್ದಾರೆ. ಟ್ವೀಟ್​​ನಲ್ಲಿ ಜಗ್ಗೇಶ್ ರಘು ಅವರಿಗೆ ಆಕ್ಷೇಪಾರ್ಹ ಪದ ಬಳಸಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿರುವ ರಘು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಮಹಾ ನಿರ್ದೇಶಕರಾದ ಡಾ. ಪಿ. ರವೀಂದ್ರನಾಥ್ ಅವರಿಗೆ ದೂರು ಸಲ್ಲಿಸಿದ್ದಾರೆ.

Source: newsfirstlive.com Source link