ರೈತರಿಗೆ ಸಿಹಿಸುದ್ದಿ ನೀಡಿದ ಮೋದಿ; ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ ₹290 ನಿಗದಿ

ರೈತರಿಗೆ ಸಿಹಿಸುದ್ದಿ ನೀಡಿದ ಮೋದಿ; ಕಬ್ಬಿನ ಕನಿಷ್ಠ ಬೆಂಬಲ ಬೆಲೆ ಕ್ವಿಂಟಾಲ್‌ಗೆ ₹290 ನಿಗದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಬ್ಬು ಬೆಳೆಗಾರರಿಗೆ ಸಿಹಿಸುದ್ದಿ ನೀಡಿದೆ. ಸಕ್ಕರೆ ಕಾರ್ಖಾನೆಗಳಲ್ಲಿ ರೈತರಿಗೆ ನೀಡುವ ಕಬ್ಬಿನ ನ್ಯಾಯೋಚಿತ ಮತ್ತು ಕನಿಷ್ಠ ಬೆಂಬಲ ಬೆಲೆ (ಎಫ್‌ಆರ್‌ಪಿ) ಪ್ರತಿ ಕ್ವಿಂಟಾಲ್​​ಗೆ ₹285 ನಿಗಧಿ ಮಾಡಿ ಆದೇಶಿಸಿದೆ.

ಈ ಹಿಂದೆಯೇ ಎಫ್‌ಆರ್‌ಪಿ ಏರಿಕೆಗೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತ್ತು. ಅದರಂತೆಯೇ ಈಗ 2020-21ರ ಸಕ್ಕರೆ ಋುತುವಿನಲ್ಲಿ ಕಬ್ಬಿನ ಎಫ್‌ಆರ್‌ಪಿ ಏರಿಕೆಯಾಗಿ ಪ್ರತಿ ಕ್ವಿಂಟಾಲ್‌ಗೆ 290 ರೂಪಾಯಿ ಆಗಿದೆ.

ಕಬ್ಬು ಬೆಳೆಗಾರರು ತಮ್ಮ ಉತ್ಪನ್ನಗಳಿಗೆ ನ್ಯಾಯೋಚಿತ ಮತ್ತು ಕನಿಷ್ಠ ಬೆಲೆ ಒದಗಿಸುವ ನಿಟ್ಟಿನಲ್ಲಿ ಎಫ್‌ಆರ್‌ಪಿ ನಿರ್ಣಯಿಸಲಾಗಿದೆ. ಹೀಗೆಂದು ಖುದ್ದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್​​ ಮಾಡಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ತವರು ಜಿಲ್ಲೆಯಲ್ಲಿ ‘ಆಪರೇಷನ್​ ಹಸ್ತ’ ಜೋರು -ಮತ್ತಿಬ್ಬರು JDS ಶಾಸಕರು ‘ಕೈ’ ಹಿಡಿತಾರಾ?

Source: newsfirstlive.com Source link