ರೀಲ್​ನಲ್ಲಿ ಲೀಲಾ ಯಡವಟ್ಟು.. ರಿಯಲ್​ನಲ್ಲಿ ಪಾರು ಸೀರಿಯಲ್​ ಖಷಿ ಯಡವಟ್ಟು..!

ರೀಲ್​ನಲ್ಲಿ ಲೀಲಾ ಯಡವಟ್ಟು.. ರಿಯಲ್​ನಲ್ಲಿ ಪಾರು ಸೀರಿಯಲ್​ ಖಷಿ ಯಡವಟ್ಟು..!

ಹಿಟ್ಲರ್​ ಕಲ್ಯಾಣ ಧಾರಾವಾಹಿಯ ಬಗ್ಗೆ ನಿಮಗೆಲ್ಲ ಗೊತ್ತೇ ಒದೆ. AJ ಅಂದ್ರೆ ಹಿಟ್ಲರ್​ ಐ ಮೀನ್​ ಫುಲ್​ ಸ್ಟ್ರಿಕ್ಟ್​​.. ಆದ್ರೆ ನಮ್ಮ ಹೀರೋಯಿನ್​ ಅದಕ್ಕೆ ತದ್ವಿರುದ್ಧ​.. ಒಂಥಾರ ಭಜಾರಿ. ಭಜಾರಿ ಮಾತ್ರ ಅಲ್ಲಾ ತಾನು ಮಾಡುವ ಕೆಲಸವೆಲ್ಲವು ಎಡವಟ್ಟಗಳೇ..

ಏನೋ ಮಾಡೊಕೆ ಹೋಗಿ ಇನ್ನೊಂದೆನೊ ಮಾಡ್ತಾಳೆ.. ಪ್ರತಿ ಒಬ್ಬರ ಹತ್ತಿರಾನು ಬೈಸ್ಕೊಳ್ತಾನೆ ಇರ್ತಾಳೆ.. ಅದರಲ್ಲೂ ತನ್ನ ತಾಯಿ ಹತ್ತಿರ ಅಂತು ಮಾತು ಮಾತಿಗು ಬೈಗುಳ ಪಕ್ಕಾ.. ಇದು ನಮ್ಮ ಲೀಲಾ ಸೀರಿಯಲ್​ನಲ್ಲಿ ಎಡವಟ್ಟು ಮಾಡಿಕೊಳ್ಳವ ಸಂಗತಿ ಅದು ಸ್ಕ್ರಿಪ್ಟೆಡ್​. ಆದರೆ ದಿನಕೊಂದು ಯಡವಟ್ಟನ್ನ ಮಾಡದಿದ್ರೆ ಇವರ ದಿನಾನೇ ಎಂಡ್​ ಆಗಲ್ಲ ಅನ್ನೊ ಹುಡುಗಿ ಇಲ್ಲೊಬ್ರಿದ್ದಾರೆ.. ಅವ್ರು ರೀಲ್​ನಲ್ಲಿ ಅಲ್ಲಾ ರಿಯಲ್​ನಲ್ಲಿ ಹೆಚ್ಚು ಹೆಚ್ಚು ಯಡವಟ್ಟನ್ನ ಮಾಡಿಕೊಳ್ತಾನೆ ಬಂದಿದ್ದಾರೆ.. ಅಪ್ಪನ ಮುದ್ದಿನ ಮಗಳು ಅವ್ರು, ಮತ್ಯಾರು ಅಲ್ಲ, ಪಾರು ಧಾರಾವಾಹಿಯ ಅನನ್ಯಾ ಅಲಿಯಾಸ್​ ಖುಷಿ.

blank

ಖುಷಿ ಮಾಡುವ ಯಡವಟ್ಟುಗಳು ಒಂದಾ ಎರಡಾ.. ಹಿಟ್ಲರ್​ ಕಲ್ಯಾಣದ ಲೀಲಾ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ ಮುದ್ದು ಮೊಗದ ಚಲುವೆ ಖುಷಿ. ಅವರ ಮಾತಲ್ಲೇ ಹೇಳೋದಾದ್ರೆ ಮಿಸ್ಟೇಕ್​ ಮಾಡದೇ ಇರುವ ದಿನಾನೇ ಇಲ್ವಂತೆ. ಇತ್ತಿಚೀಗೆ ಐರನ್​ ಮಾಡೋಕೆ ಹೋಗಿ ಒಂದು ಯಡವಟ್ಟು ಮಾಡ್ಕೊಂಡಿದ್ರಂತೆ. ಕೆಲಸದ ನಿಮಿತ್ಯ ಹೊರಗಡೆ ಹೋಗ್ಬೇಕಾದ್ರೆ ಐರನ್​ ಮಾಡಿ ಸ್ವೀಚ್​ ಹಾಗೆ ಆನ್​ನಲ್ಲಿಟ್ಟು ಹೋಗಿದ್ರಂತೆ.

ಮನೆಯಲ್ಲಿ ಅಕ್ಕ ಕೂಡ ಹೊರಗಡೆ ಹೋಗಿದ್ರಿಂದ ರಾತ್ರಿ ಬರುವಷ್ಟರಲ್ಲಿ ಹಾಸಿಗೆ ಎಲ್ಲಾ ಸುಟ್ಟು ಹೋಗಿತ್ತಂತೆ. ಇನ್ನೂ ಯಾರಿಗೋ ಬರ್ತ್​ ಡೇ ವಿಶ್​ ಮಾಡಲು ಹೋಗಿ ಇನ್ಯಾರಿಗೊ ಕಾಲ್​ ಮಾಡಿ ವಿಶ್​ ಮಾಡಿದ್ರಂತೆ. ಇನ್ನೊಂದಿನ ಕಾರ್​ ಪಾರ್ಕ್ ಮಾಡಲು ಹೋಗಿ ಎಲ್ಲಿಗೆ ಹೋಗ್ಬೇಕು ಅನ್ನೋದನ್ನೇ ಮರೆತು ಬಿಟ್ಟಿದ್ದಳಂತೆ ಪಾರು ಸೀರಿಯಲ್​ ಚಲುವೆ.

blank

ಇನ್ನೊಂದು ವಿಷಯ ಹೇಳಲೇಬೇಕು, ಕ್ಯಾಬ್​ಗೆ ಪೇ ಮಾಡುವಾಗ ಎರಡೆರಡು ಸಾರಿ ಪೇಮೆಂಟ್​ ಮಾಡಿದ್ರಂತೆ. ಈ ವಿಚಾರವಾಗಿ ಅಮ್ಮನ ಹತ್ತಿರ ಸರಿಯಾಗಿ ಒದೆ ತಿಂದಿದ್ರಂತೆ ನಮ್ಮ ಯಡವಟ್ಟು ಖುಷಿ. ಒಂದುವೇಳೆ ಹಿಟ್ಲರ್​ ಕಲ್ಯಾಣದ ಯಡವಟ್ಟು ಲೀಲಾ ಪಾತ್ರ ಸಿಕ್ಕಿದ್ದರೆ ಚಿಂದಿ ಮಾಡುತ್ತಿದ್ದರಂತೆ ಖಷಿ. ಆ ಪಾತ್ರಕ್ಕೂ ಇವರ ಬದುಕಿಗೂ ಅಷ್ಟು ಸಾಮ್ಯತೆ ಇದೆ ಎನ್ನುತ್ತಾರೆ. ಹೀಗೆ ರೀಯಲ್​ ಲೈಫ್​ನಲ್ಲಿ ಯಡವಟ್ಟುಗಳ ಮೇಲೆ ಯಡವಟ್ಟು ಮಾಡಿಕೊಳ್ಳುವ ಖುಷಿ, ಅಷ್ಟೇ ಚಂದವಾಗಿ ನಟನೆ ಕೂಡ ಮಾಡ್ತಾರೆ. ರಂಗ ಭೂಮಿಯ ತಳಪಾಯ ಖುಷಿಯವರ ನಟನೆಯಲ್ಲಿ ಕಾಣಿಸುತ್ತದೆ. ಅಂದ್ಹಾಗೆ ಖುಷಿ.. ಮಂಡ್ಯ ರಮೇಶ್​ ಅವರ ನಟನಾ ಶಾಲೆಯ ವಿದ್ಯಾರ್ಥಿ. ಮಂಡ್ಯ ರಮೇಶ್ ಅವರ ಗರಡಿಯಲ್ಲಿ ಪಳಗಿದ ಬೆಡಗಿಗೆ ಇನ್ನೂ ಹೆಚ್ಚು ಹೆಚ್ಚು ಅವಕಾಶಗಳು ದೊರೆತು ದೊಡ್ಡ ಮಟ್ಟದಲ್ಲಿ ಬೆಳಯಲಿ.. ಆಲ್​ ದಿ ಬೆಸ್ಟ್​ ಖುಷಿ.

Source: newsfirstlive.com Source link