‘ದೊಡ್ಡಣ್ಣ’ ಅನ್ನೋ ಬ್ರಾಂಡ್​ ವ್ಯಾಲ್ಯೂ ಮಣ್ಣುಪಾಲು ಮಾಡಿದ ತಾಲಿಬಾನ್..!

‘ದೊಡ್ಡಣ್ಣ’ ಅನ್ನೋ ಬ್ರಾಂಡ್​ ವ್ಯಾಲ್ಯೂ ಮಣ್ಣುಪಾಲು ಮಾಡಿದ ತಾಲಿಬಾನ್..!

ಅಮೆರಿಕ ಸೇನೆ 20 ವರ್ಷಗಳ ಕಾಲ ಅಫ್ಘಾನ್‌ನಲ್ಲಿದ್ದಾಗ ತಾಲಿಬಾನಿ ಉಗ್ರರು ಬಾಲಮುದುಡಿಕೊಂಡು ಇದ್ರು. ಆದ್ರೆ, ಅಮೆರಿಕ ಮಾಡಿದ ಎಡವಟ್ಟಿನಿಂದಲೇ ಇಂದು ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ದೊಡ್ಡಣ್ಣನಿಗೆ ಅವಾಜ್‌ ಹಾಕಿದ್ದಾರೆ. ಆದರೆ, ಈ ಅವಾಜ್​ಗೆ ಅಮೆರಿಕಾ ನಡುಗಿ ಹೋಗಿರೋದಂತೂ ನಿಜ!

blank

ಇದನ್ನೂ ಓದಿ: ‘ರಾಜಿ’ ಪಾತ್ರದಲ್ಲಿ ನಟಿಸಿದ್ದಕ್ಕೆ ತಮಿಳು ಜನರೆದುರು ಕೈಮುಗಿದು ಕ್ಷಮೆ ಕೇಳಿದ ಸಮಂತಾ

11 ಸೆಪ್ಟೆಂಬರ್‌ 2001 ರಂದು ಅಮೆರಿಕದ ಅವಳಿ ಗೋಪುರದ ಮೇಲೆ ಉಗ್ರಗಾಮಿಗಳು ದಾಳಿ ನಡೆಸುತ್ತಾರೆ. ಅಮೆರಿಕದಿಂದ ಕಳುವು ಮಾಡಿದ್ದ ನಾಗರಿಕ ವಿಮಾನಗಳನ್ನೇ ದಾಳಿಗೆ ಬಳಸಿಕೊಳ್ಳಲಾಗುತ್ತೆ. ದಾಳಿಯಲ್ಲಿ ಸಾವಿರಾರು ಜನ ಸಾವನ್ನಪ್ಪುತ್ತಾರೆ. ಇದರಿಂದ ವಿಶ್ವದ ದೊಡ್ಡಣ್ಣ ಎಂದೇ ಕರೆಯಿಸಿಕೊಳ್ಳುತ್ತಿದ್ದ ಅಮೆರಿಕ ಸ್ತದ್ಧವಾಗಿ ಬಿಡುತ್ತೆ. ದಾಳಿ ನಡೆಸಿದವನು ಅಲ್‌ಕೈದಾ ಉಗ್ರಗಾಮಿ ಒಸಾಮಾ ಬಿನ್‌ ಲಾಡೆನ್‌ ಅನ್ನೋದನ್ನು ಖಚಿತ ಪಡಿಸಿಕೊಳ್ಳುತ್ತೆ. ತಕ್ಷಣವೇ ಅಂದಿನ ಅಮೆರಿಕ ಅಧ್ಯಕ್ಷ ಬುಷ್‌ ಅವರು ಅಫ್ಘಾನ್‌ಗೆ ಅಮೆರಿಕ ಸೇನೆ ಕಳುಹಿಸುತ್ತಾರೆ. ಅಂದಿನಿಂದ ಬರೋಬ್ಬರಿ 20 ವರ್ಷಗಳ ಕಾಲ ತಾಲಿಬಾನಿಗಳ ವಿರುದ್ಧ ಅಮೆರಿಕ ಸೇನೆ ಹೋರಾಡುತ್ತದೆ. ತಾಲಿಬಾನಿ ಶಿಬಿರಗಳ ಮೇಲೆ ಬಾಂಬ್‌ ದಾಳಿ ನಡೆಸುತ್ತದೆ.

ಇದರಿಂದ ತಾಲಿಬಾನಿಗಳು ಅಫ್ಘಾನ್‌ನಲ್ಲಿ ಅಧಿಕಾರ ಕಳೆದುಕೊಂಡು ಅಡಗಿ ಬಿಡ್ತಾರೆ. ಅಮೆರಿಕ ಸೇನೆ ಎಲ್ಲಿಯವರೆಗೆ ಅಫ್ಘಾನ್‌ನಲ್ಲಿ ಇತ್ತೋ ಅಲ್ಲಿಯವರೆಗೂ ತಾಲಿಬಾನಿಗಳು ಬಾಲ ಮುದುಡಿಕೊಂಡೆ ಇದ್ರು. ಆದ್ರೆ, ಈಗ ಪರಿಸ್ಥಿತಿ ಬದಲಾಗಿದೆ. ದೊಡ್ಡಣ್ಣನಿಗೆ ಅವಾಜ್‌ ಹಾಕೋವಷ್ಟು ತಾಲಿಬಾನಿಗಳು ಬೆಳೆದು ಬಿಟ್ಟಿದ್ದಾರೆ. ದುರಂತ ಅಂದ್ರೆ ಇದಕ್ಕೆಲ್ಲ ಬೇರೆಯಾವುದೇ ರಾಷ್ಟ್ರವಲ್ಲ. ಸ್ವಲಃ ಅಮೆರಿಕವೇ ಕಾರಣವಾಗಿದೆ.
ದೊಡ್ಡಣ್ಣನಿಗೆ ಗಡುವು ನೀಡಿದ ತಾಲಿಬಾನ್‌

ಇದನ್ನೂ ಓದಿ: ತಾಲಿಬಾನಿಗಳಿಗೆ ಮರ್ಮಾಘಾತ; ಹಣಕಾಸಿನ ನೆರವು ತಡೆಹಿಡಿದ ವಿಶ್ವಬ್ಯಾಂಕ್

blank

ಆಗಸ್ಟ್‌ 31ರೊಳಗೆ ಸೇನೆ ವಾಪಸ್‌ ಪಡೆಯದಿದ್ರೆ ಹುಷಾರ್‌
ತಾಲಿಬಾನ್‌ ಉಗ್ರರು ಅಮೆರಿಕಗೆ ಹಾಕಿರೋ ಅವಾಜ್‌ ಕೇಳಿಬಿಟ್ರೆ ಒಂದು ಕ್ಷಣ ಅಬ್ಬಾ! ಅನಿಸಿಬಿಡುತ್ತೆ. ಇಲ್ಲಿಯವರೆಗೆ ಒಂದು ರೀತಿಯ ಬ್ರಾಂಡ್‌ ಆಗಿ ಅಮೆರಿಕ ಗುರುತಿಸಿಕೊಂಡಿತ್ತು. ಜಾಗತಿಕವಾಗಿ ತನ್ನದೇ ಆದ ಘನತೆ ಗೌರವ ಹೊಂದಿತ್ತು. ಹೀಗಾಗಿ ಯಾವುದೇ ರಾಷ್ಟ್ರವಾದ್ರೂ ಇಷ್ಟೊಂದು ಕಠೋರವಾಗಿ ಅವಾಜ್‌ ಹಾಕಿರಲಿಲ್ಲ. ಇಲ್ಲಿಯವರೆಗೆ ಅಮೆರಿಕದ ಬಗ್ಗೆ ಮಾತಾಡಬೇಕು ಅಂದ್ರೆ ಯಾವುದೇ ರಾಷ್ಟ್ರವಾದ್ರೂ 10 ಬಾರಿ ಯೋಚಿಸುತ್ತಿತ್ತು. ಅಳೆದು ತೂಗಿ ಮಾತಾಡುತ್ತಿತ್ತು. ಅಪ್ಪಿ ತಪ್ಪಿಯೂ ಅಮೆರಿಕದ ವಿರೋಧ ಕಟ್ಟಿಕೊಳ್ಳಲು ಹೋಗುತ್ತಿರಲಿಲ್ಲ. ಒಮ್ಮೆ ವಿರೋಧ ಕಟ್ಟಿಕೊಂಡ್ರೆ ಆ ರಾಷ್ಟ್ರದ ಕಥೆ ಕಷ್ಟವಾಗುತ್ತಿತ್ತು. ಅಂತಹ ಘನತೆ, ಗೌರವ, ಪ್ರತಿಷ್ಟೆ, ಯಶಸ್ಸನ್ನು ಹೊಂದಿರೋ ರಾಷ್ಟ್ರಕ್ಕೆ ಒಂದು ಉಗ್ರಗಾಮಿ ಸಂಘಟನೆಯಾಗಿರೋ ತಾಲಿಬಾನ್‌ ಖಡಕ್‌ ಎಚ್ಚರಿಕೆ ನೀಡಿ ಬಿಟ್ಟಿದೆ. ಅದೇನು ಅಂತಿಂಥ ಎಚ್ಚರಿಕೆ ಅಲ್ಲ, ಆಗಸ್ಟ್‌ 31 ರೊಳಗೆ ಕಾಬುಲ್‌ ವಿಮಾನ ನಿಲ್ದಾಣ ಬಿಟ್ಟು ಹೊರಡಬೇಕು. ಇಲ್ಲದಿದ್ರೆ, ಪರಿಸ್ಥಿತಿ ಸರಿಯಿರುವುದಿಲ್ಲ ಅಂಥ ಅವಾಜ್‌ ಹಾಕಿಬಿಟ್ಟಿದೆ. ಇದು ಕೇವಲ ಅಮೆರಿಕಗೆ ಮಾತ್ರ ಎಚ್ಚರಿಕೆ ಅಲ್ಲ, ಕಾಬುಲ್‌ ವಿಮಾನ ನಿಲ್ದಾಣದಲ್ಲಿ ಬೀಡು ಬಿಟ್ಟಿದ್ದ ಬ್ರಿಟನ್‌ಗೂ ಎಚ್ಚರಿಕೆ ರವಾನೆಯಾಗಿದೆ.

ತಾಲಿಬಾನಿ ಉಗ್ರರು ಎಚ್ಚರಿಕೆ ನೀಡಿದ್ದು ಏಕೆ?
ಅಮೆರಿಕ ವಶದಲ್ಲಿ ಇರೋದು ಕಾಬುಲ್‌ ವಿಮಾನ ನಿಲ್ದಾಣ ಮಾತ್ರ

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ತಮ್ಮ ಸೇನೆಯನ್ನು ಅಫ್ಘಾನ್‌ನಿಂದ ವಾಪಸ್‌ ಪಡೆಯುವುದಾಗಿ ಕಳೆದು ಮೂರು ತಿಂಗಳ ಹಿಂದೆ ಘೋಷಿಸಿದ್ರು. ಅನಂತರ ಹಂತ ಹಂತವಾಗಿ ಸೇನೆಯನ್ನು ವಾಪಸ್‌ ಪಡೆದ್ರು. ಇದೇ ಸಮಯದಲ್ಲಿ ತಾಲಿಬಾನಿಗಳು ಅಫ್ಘಾನ್‌ ಮೇಲೆ ದಾಳಿಯನ್ನು ತೀವ್ರಗೊಳಿಸಿದ್ರು. ಅಫ್ಘಾನ್‌ ಸೇನೆ ಹೋರಾಟ ಮಾಡಲಾಗದೇ ಶರಣಾಗಿ ಬಿಡ್ತು. ಅಧ್ಯಕ್ಷನಾಗಿದ್ದ ಅಶ್ರಫ್‌ ಘನಿ ದೇಶ ಬಿಟ್ಟು ಓಡಿಹೋಗಿ ಬಿಟ್ರು. ಅಂತಿಮವಾಗಿ ತಾಲಿಬಾನ್ ಉಗ್ರರು ಪಂಜ್‌ಶೀರ್‌ ಪ್ರದೇಶವನ್ನು ಹೊರತುಪಡಿಸಿ ಸಂಪೂರ್ಣ ಅಫ್ಘಾನ್‌ ವಶಪಡಿಸಿಕೊಂಡು ಬಿಟ್ರು. ಅಂತಿಮವಾಗಿ ಕಾಬುಲ್‌ ವಿಮಾನ ನಿಲ್ದಾಣ ಮಾತ್ರ ಅಮೆರಿಕ ಸೇನೆಯ ವಶದಲ್ಲಿದೆ. ಅದೇ ನಿಲ್ದಾಣದಿಂದ ಅಮೆರಿಕ, ಬ್ರಿಟನ್‌, ಭಾರತ, ಇಟಲಿ ಸೇರಿದಂತೆ ಎಲ್ಲಾ ರಾಷ್ಟ್ರಗಳು ತನ್ನ ದೇಶದ ಜನರನ್ನು ಏರ್‌ಲಿಫ್ಟ್‌ ಮಾಡುತ್ತಿವೆ.

ಇದನ್ನೂ ಓದಿ: ಕಾಬೂಲ್​ನಲ್ಲಿ ಪಾಕ್​ ISI ಉಗ್ರರ ಕೃತ್ಯ; ಭಾರತೀಯರ ಪಾಸ್​ಪೋರ್ಟ್​ಗಳ ಕಳವು

blank

ಕಾಬುಲ್‌ ವಿಮಾನ ನಿಲ್ದಾಣದಲ್ಲಿ ಇದ್ದಾರೆ 5 ಸಾವಿರ ಅಮೆರಿಕ ಸೈನಿಕರು
ವಿಮಾನ ನಿಲ್ದಾಣವನ್ನು ವಶದಲ್ಲಿ ಇಟ್ಟುಕೊಂಡಿದ್ದು ಏಕೆ ಗೊತ್ತಾ?

ಅಮೆರಿಕ ನಿರೀಕ್ಷೆಯೂ ಮಾಡದ ರೀತಿಯಲ್ಲಿ ತಾಲಿಬಾನಿ ಉಗ್ರರು ಅಫ್ಘಾನ್‌ ಅನ್ನು ವಶಪಡಿಸಿಕೊಂಡು ಬಿಟ್ಟಿದ್ದಾರೆ. ಆದ್ರೆ, ತಾಲಿಬಾನಿಗಳ ಆಡಳಿತದಲ್ಲಿ ವಿದೇಶಿಯರು ನೆಲೆಸುವುದು ಅಷ್ಟು ಸುಲಭವಿಲ್ಲ. ಸ್ವತಃ ಅಫ್ಘಾನ್‌ ಜನರೇ ತಾಲಿಬಾನಿಗಳಿಗೆ ಹೆದರಿ ಓಡಿ ಹೋಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ವಿದೇಶಿ ಪ್ರಜೆಗಳ ಕಥೆ ಏನಾಗಬೇಡ? ಅದಕ್ಕಾಗಿಯೇ ಅಫ್ಘಾನ್‌ ರಾಜಧಾನಿ ಕಾಬುಲ್‌ ವಿಮಾನ ನಿಲ್ದಾಣವನ್ನು ಅಮೆರಿಕ ಸೇನೆ ತನ್ನ ವಶದಲ್ಲಿ ಇಟ್ಟುಕೊಂಡಿದೆ. ಈ ವಿಮಾನ ನಿಲ್ದಾಣದ ಮೂಲಕ ಅಮೆರಿಕದ ಪ್ರಜೆಗಳನ್ನು ಸಾಗಾಟ ಮಾಡುವುದು ಅದರ ಉದ್ದೇಶವಾಗಿದೆ. ಅಷ್ಟೇ ಅಲ್ಲ, ಬ್ರಿಟನ್‌, ಭಾರತ ಸೇರಿದಂತೆ ಇತರೆ ದೇಶದ ಜನರನ್ನೂ ಸ್ಥಳಾಂತರಿಸುವ ಕೆಲಸ ಆಗುತ್ತಿದೆ.

ಆಗಸ್ಟ್‌ 31ರೊಳಗೆ ತೆರವು ಮಾಡುತ್ತೇವೆ ಅಂದಿದ್ದ ಅಮೆರಿಕ
ತೆರವು ಕಷ್ಟ ಅಂತ ತಿಳಿಸಿದ ಅಮೆರಿಕ ರಕ್ಷಣಾ ಇಲಾಖೆ

ಈ ಮುನ್ನ ಅಮೆರಿಕ ಆಗಸ್ಟ್‌ 31 ರೊಳಗೆ ಕಾಬುಲ್‌ ವಿಮಾನ ನಿಲ್ದಾಣವನ್ನು ತೆರೆವು ಮಾಡುವುದಾಗಿ ಹೇಳಿತ್ತು. ಅಷ್ಟರೊಳಗೆ ತನ್ನ ದೇಶದ ಎಲ್ಲಾ ಪ್ರಜೆಗಳನ್ನು ಏರ್‌ಲಿಫ್ಟ್‌ ಮಾಡಿಕೊಂಡು ಹೋಗಬೇಕು ಅನ್ನೋದು ಅಮೆರಿಕ ಪ್ಲಾನ್‌ ಆಗಿತ್ತು. ಆದ್ರೆ, ದೊಡ್ಡಣ್ಣ ಅಂದುಕೊಂಡಿದ್ದೇ ಒಂದು ಆಗಿರುವುದೇ ಮತ್ತೊಂದು ಆಗಿ ಬಿಡ್ತು. ಹೌದು, ಆಗಸ್ಟ್‌ 31 ರೊಳಗೆ ಅಮೆರಿಕದ ಎಲ್ಲಾ ಪ್ರಜೆಗಳನ್ನು, 20 ವರ್ಷಗಳ ಕಾಲ ಅಮೆರಿಕ ಸೇನೆಗೆ ಸಪೋರ್ಟ್‌ ಮಾಡಿದವರನ್ನು ತೆರವು ಮಾಡಿಕೊಂಡು ಹೋಗಲು ಸಾಧ್ಯವಾಗಲ್ಲ. ಹೀಗಾಗಿ ಅವಧಿ ವಿಸ್ತರಣೆ ಅಗತ್ಯ ಅಂತ ಅಮೆರಿಕ ರಕ್ಷಣಾ ಇಲಾಖೆ ತಿಳಿಸಿತ್ತು. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವಧಿ ವಿಸ್ತರಿಸುವ ಮಾತು ಆಡಿದ್ರು. ಆದ್ರೆ, ಅಮೆರಿಕಾಗೆ ಆಗಸ್ಟ್‌ 31ರೊಳಗೆ ತೆರವು ಮಾಡುವಂತೆ ತಾಲಿಬಾನಿ ಮುಖಂಡ ಖಡಕ್‌ ಎಚ್ಚರಿಕೆ ನೀಡಿದ್ದಾನೆ.

ಇದನ್ನೂ ಓದಿ: ಅಘ್ಘಾನ್​ ಕ್ಯಾಬಿನೆಟ್ ಸಚಿವನೀಗ ಪಿಜ್ಜಾ ಡೆಲಿವರಿ ಬಾಯ್; ಆಕ್ಸ್​ಫರ್ಡ್​ ಪದವೀಧರನಿಗೆ ಎಂಥಾ ಸ್ಥಿತಿ

blank

ಎಚ್ಚರಿಕೆ ಕೊಟ್ಟ 12 ಗಂಟೆಯಲ್ಲಿ 6600 ಜನರ ಸಾಗಾಟ
ತಾಲಿಬಾನ್‌ ಮುಖಂಡನ ಎಚ್ಚರಿಕೆಗೆ ಅಮೆರಿಕ ಹೆದರಿತಾ?

ಆಗಸ್ಟ್‌ 31ರೊಳಗೆ ತೆರವು ಮಾಡಿದ್ರೆ ಸರಿ, ಇಲ್ಲದಿದ್ರೆ ನಮ್ಮನ್ನು ಪ್ರಚೋದಿಸಿದಂತೆ ಆಗಿ ಬಿಡುತ್ತದೆ. ಮುಂದಾಗುವ ಪರಣಾಮ ಎದುರಿಸಬೇಕಾಗುತ್ತದೆ ಅಂತ ತಾಲಿಬಾನಿ ಮುಖಂಡ ಎಚ್ಚರಿಕೆ ನೀಡಿದ್ದೇ ತಡ. ಅಮೆರಿಕ ಸೇನೆ ತರಾತುರಿಯಲ್ಲಿ ಅಫ್ಘಾನ್‌ನಲ್ಲಿ ಸಿಲುಕಿದವರನ್ನು ಹೊತ್ತುಕೊಂಡು ಹೋಗುತ್ತಿದೆ. ತಾಲಿಬಾನ್‌ ಮುಖಂಡ ಎಚ್ಚರಿಕೆ ನೀಡುವ ಮುನ್ನ ಅಂದ್ರೆ ಸೋಮವಾರ 24 ಗಂಟೆಯ ಅವಧಿಯಲ್ಲಿ 10400 ಮಂದಿಯನ್ನು ತೆರವು ಮಾಡಿತ್ತು. ಆದ್ರೆ, ಎಚ್ಚರಿಕೆಯ ಸಂದೇಶ ಬಂದ 12 ಗಂಟೆಯಲ್ಲಿ 6600 ಜನರನ್ನು ಏರ್‌ಲಿಫ್ಟ್‌ ಮಾಡಿದೆ. ಈ ಕಾರ್ಯಾಚರಣೆಗೆ ಸಿ-17ರ 15 ವಿಮಾನಗಳನ್ನು ಬಳಸಿಕೊಳ್ಳಲಾಗಿತ್ತು. ಮತ್ತೊಂದೆಡೆ ಬ್ರಿಟನ್‌ ಕೂಡ ವೇಗವಾಗಿಯೇ ತನ್ನ ಪ್ರಜೆಗಳನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದೆ.
ವಿಶ್ವದ ದೊಡ್ಡಣ್ಣನಿಗೆ ಮುಖಭಂಗ

ಜಾಗತಿಕ ಮಟ್ಟದಲ್ಲಿ ಅಮೆರಿಕ ಪ್ರಭಾವ ಕುಗ್ಗಿತಾ?
ಶತಮಾನಗಳ ಕಾಲ ಅಮೆರಿಕ ಅಂದ್ರೆ ಒಂದು ರೀತಿಯ ಗತ್ತು ಇತ್ತು. ಆದ್ರೆ, ಅದೆಲ್ಲವೂ ತಾಲಿಬಾನ್‌ ವಿಚಾರದಲ್ಲಿ ಮಣ್ಣುಪಾಲಾಯ್ತು. ಅಮೆರಿಕ ಸೇನೆ ಯಾವಾಗ ಅಫ್ಘಾನ್‌ನಿಂದ ಹಿಂದೆ ಸರಿಯುವ ಮಾತಾಡಿತೋ ಆವಾಗಲೇ ಜಗತ್ತಿನ ಮುಂದೆ ಅಮೆರಿಕದ ಚಿತ್ರಣವೇ ಬದಲಾಗಿ ಬಿಡ್ತು. ಈ ಮುನ್ನ ಇದ್ದ ಅಭಿಪ್ರಾಯವೆಲ್ಲ ಬದಲಾಗಿ ಬಿಡ್ತು. ಯಾಕಂದ್ರೆ, ಅಮೆರಿಕ ಸೇನಾ ವಾಪಸ್‌ ಆಗಿರೋ ಪರಿಣಾಮ ತಾಲಿಬಾನ್‌ ಉಗ್ರರು ಅಫ್ಘಾನ್‌ನಲ್ಲಿ ಕ್ರೌರ್ಯ ಮೆರೆಯುತ್ತಿದ್ದಾರೆ. ಮಹಿಳೆಯರನ್ನು ಹಿಂಸಿಸುತ್ತಿದ್ದಾರೆ. ತಾಲಿಬಾನ್‌ ವಿರುದ್ಧ ಪ್ರತಿಭಟಿಸುವರ ವಿರುದ್ಧ ಗುಂಡು ಹಾರಿಸುತ್ತಿದ್ದಾರೆ. ಈ ಹಿಂದೆ ತಾಲಿಬಾನ್‌ ವಿರುದ್ಧ ಹೋರಾಡಿದ್ದ ಪೊಲೀಸ್‌ ಅಧಿಕಾರಿಗಳನ್ನು ಹತ್ಯೆ ಮಾಡುತ್ತಿದ್ದಾರೆ. ತಾಲಿಬಾನಿಗಳ ಕ್ರೌರ್ಯಕ್ಕೆ ಹೆದರಿ ಅಲ್ಲಿಯ ಜನ ದೇಶ ಬಿಟ್ಟು ಓಡುತ್ತಿದ್ದಾರೆ.

ಇದನ್ನೂ ಓದಿ: ಅಫ್ಘಾನಿಸ್ತಾನದ ನೂತನ ಸರ್ಕಾರಕ್ಕೆ ಕಟ್ಟರ್​​ ಪಂಥೀಯರ ನಾಯಕತ್ವ

blank

ಇಲ್ಲಿಯವರೆಗೆ ಅಮೆರಿಕದ ಮೇಲೆ ಇದ್ದ ದೊಡ್ಡಣ್ಣ ಅನ್ನೋ ಬ್ರಾಂಡ್‌ ಮೌಲ್ಯವನ್ನು ತಾಲಿಬಾನ್‌ ಮಣ್ಣುಪಾಲು ಮಾಡುತ್ತಿದೆ. ಇದಕ್ಕೆಲ್ಲಾ ಕಾರಣ ಅಮೆರಿಕವೇ ಆಗಿದೆ. ಸೇನಾ ಹಿಂತೆಗೆತದ ಬಗ್ಗೆ ಸರಿಯಾದ ಪ್ಲಾನ್‌ ಇರಬೇಕಿತ್ತು. ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಳ್ಳದಂತೆ ನೋಡಿಕೊಳ್ಳಬೇಕಿತ್ತು. ಆದ್ರೆ, ಆ ಕೆಲಸ ಆಗಲೇ ಇಲ್ಲ.

Source: newsfirstlive.com Source link