ಕೊರೊನಾ ಮೂರನೇ ಅಲೆ ಯಾವಾಗ ಬರುತ್ತೆ? -ತಜ್ಞರು ಹೇಳಿದ್ದೇನು..?

ಕೊರೊನಾ ಮೂರನೇ ಅಲೆ ಯಾವಾಗ ಬರುತ್ತೆ? -ತಜ್ಞರು ಹೇಳಿದ್ದೇನು..?

ಬೆಂಗಳೂರು: ರಾಜ್ಯದ ಗ್ರಾಮೀಣ ಪ್ರದೇಶಗಳ ಜನರಿಗೆ ಕೊರೊನಾ ಲಸಿಕೆ ನೀಡುವ ಉದ್ದೇಶದಿಂದ ವೊಲ್ವೊ ಮತ್ತು ನಾರಾಯಣ ಹೃದಯಾಲಯ ಆಸ್ಪತ್ರೆ ಅಭಿವೃದ್ಧಿಪಡಿಸಿರುವ ಮೊಬೈಲ್ ಲಸಿಕೆ ಬಸ್​ಗೆ ಇಂದು ನಾರಾಯಣ ಹೃದಯಾಲಯದ ನಿರ್ದೇಶಕ ಹಾಗೂ ಮುಖ್ಯ ವೈದ್ಯ ದೇವಿ ಶೆಟ್ಟಿ ಚಾಲನೆ ನೀಡಿದ್ದಾರೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ದೇವಿ ಶೆಟ್ಟಿ.. ಇಂದು ವ್ಯಾಕ್ಸಿನೇಷನ್ ಬಸ್​​ಗೆ ಚಾಲನೆ ನೀಡಲಾಗಿದೆ. ಇದರ ಉದ್ದೇಶ ಬೆಂಗಳೂರು ಜನ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ, ಆದರೆ ಹಳ್ಳಿಯಲ್ಲಿರುವ ಜನರಿಗೆ ವ್ಯಾಕ್ಸಿನ್ ಸಿಗುತ್ತಿಲ್ಲ. ಹೀಗಾಗಿ ದಿನಕ್ಕೆ ಸಾವಿರ ಜನರಿಗೆ ಲಸಿಕೆ ಹಾಕುವ ಈ ಯೋಜನೆಗೆ ಚಾಲನೆ ನೀಡುತ್ತಿದ್ದೇವೆ. ಈ ಸೇವೆ ಎಲ್ಲರಿಗೂ ಉಚಿತವಾಗಿರುತ್ತದೆ ಎಂದರು.

ಇದೇ ವೇಳೆ ಮೂರನೇ ಅಲೆ ಯಾವಾಗ ಬರುತ್ತೆ ಅಂತಾ ಮಾಧ್ಯಮಗಳು ಪ್ರಶ್ನಿಸಿದಾಗ.. ಮೂರನೇ ಅಲೆ ಬರುವುದಿಲ್ಲ ಅಂತಾ ದೇವರಲ್ಲಿ ಕೇಳಿಕೊಳ್ಳೋಣ. ಜೊತೆಗೆ ಮೂರನೇ ಅಲೆ ಬರುತ್ತೆ ಅಂತಾ ನಾವು ಜಾಗೃತರಾಗಬೇಕು. ನಾವು ಎಚ್ಚರಿಕೆಯಿಂದ ಇರದಿದ್ದರೆ ಅಪಾಯ ಗ್ಯಾರಂಟಿ. ಮೂರನೇ ಅಲೆ ಆಗ ಬರುತ್ತೆ, ಈಗ ಬರುತ್ತೆ ಅಂತಾ ಭವಿಷ್ಯ ನುಡಿಯಲಿಕ್ಕೆ ಆಗಲ್ಲ ಅಂತಾ ಹೇಳಿದರು. ಅದಕ್ಕೆ ಮಾಧ್ಯಮಗಳು ಅಕ್ಟೋಬರ್​​ನಲ್ಲಿ ಮೂರನೇ ಅಲೆ ಬರುವ ಸಾಧ್ಯತೆ ಇದೆಯಾ ಅಂತಾ ಪ್ರಶ್ನೆ ಮಾಡಿದಾಗ, ಬಂದರೂ ಬರಬಹುದು ಅಂತಷ್ಟೇ ಹೇಳಿದರು.

Source: newsfirstlive.com Source link