ಮಿಕ್ಸ್ ರಿಲೇಯಲ್ಲಿ ಭಾರತಕ್ಕೆ ಕಂಚು; ಕನ್ನಡತಿ ಪ್ರಿಯಾ ಮೋಹನ್​ ಅಭಿನಂದಿಸಿದ ಕೇಂದ್ರ ಸಚಿವರು

ಮಿಕ್ಸ್ ರಿಲೇಯಲ್ಲಿ ಭಾರತಕ್ಕೆ ಕಂಚು; ಕನ್ನಡತಿ ಪ್ರಿಯಾ ಮೋಹನ್​ ಅಭಿನಂದಿಸಿದ ಕೇಂದ್ರ ಸಚಿವರು

ನವದೆಹಲಿ: ವಿಶ್ವ ಅಥ್ಲೆಟಿಕ್ಸ್​ನ ಮಿಕ್ಸ್ ರಿಲೇಯಲ್ಲಿ ಕಂಚಿನ ಪದಕ ಗೆದ್ದಿದ್ದ ಕನ್ನಡತಿ ಪ್ರಿಯಾ ಮೋಹನ್​​ ಅವರನ್ನ ಕೇಂದ್ರ ಕ್ರೀಡಾ ಮಂತ್ರಿ ಅನುರಾಗ್ ಠಾಕೂರ್​ ಅವರು ಅಭಿನಂದಿಸಿದ್ದಾರೆ. ಆಗಸ್ಟ್ 18 ರಿಂದ 22 ರ ವರೆಗೆ ನೈರೋಬಿಯಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್​ನಲ್ಲಿ ತುಮಕೂರು ಜಿಲ್ಲೆಯ ಹಬ್ಬತ್ತನಹಳ್ಳಿಯ ನಿವಾಸಿ ಪ್ರಿಯಾ ಕಂಚಿನ ಪದಕ ಗೆದ್ದಿದ್ದರು.

blank

ಮಿಕ್ಸ್​ ರಿಲೇಯಲ್ಲಿ ಭಾರತದ ಪರ ಭಾಗವಹಿಸಿದ್ದ ಎಲ್ಲಾ ಸ್ಪರ್ಧಿಗಳನ್ನ ಕರೆದು ಕೇಂದ್ರ ಸಚಿವರು ಅಭಿನಂದಿಸಿದ್ದಾರೆ. ಮೊದಲ ಬಾರಿಗೆ ವಿಶ್ವ ಅಥ್ಲೆಟಿಕ್​ನಲ್ಲಿ ಭಾರತಕ್ಕೆ ಪದಕ ಬಂದಿದೆ. ಈ ತಂಡದಲ್ಲಿ ಕನ್ನಡತಿ ಪ್ರಿಯಾ ಮೋಹನ್ ಕೂಡ ಸ್ಥಾನ ಪಡೆದುಕೊಂಡಿದ್ದರು ಅನ್ನೋದು ವಿಶೇಷ.

ಭಾರತೀಯ ಅಥ್ಲೆಟಿಕ್ ಫೆಡರೇಷನ್​ನಿಂದ ಅಭಿನಂದನಾ ಸಮಾರಂಭ ಆಯೋಜನೆ ಮಾಡಲಾಗಿತ್ತು. ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್​ನಲ್ಲಿ ಅಭಿನಂದನಾ ಸಮಾರಂಭ ಇತ್ತು. ವಿಶೇಷ ಅಂದ್ರೆ ಪ್ರಿಯಾ ಮೋಹನ್ ಅವರು ರಾಷ್ಟ್ರೀಯ ಕ್ರೀಡಾ ಕೂಟಗಳಲ್ಲಿ ಈಗಾಗಲೇ 15 ಹೆಚ್ಚು ಚಿನ್ನದ ಪದಕವನ್ನ ಗಳಿಸಿದ್ದಾರೆ.

Source: newsfirstlive.com Source link