ಬೀದರ್‌ನಲ್ಲಿ ಧಾರಾಕಾರ ಮಳೆ- ಹಲವು ಅವಾಂತರ

ಬೀದರ್: ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ಹಲವು ಅವಾಂತರಗಳು ಸೃಷಿಯಾಗಿವೆ.

ಮಳೆರಾಯನ ಆರ್ಭಟಕ್ಕೆ ಗ್ರಾಮೀಣ ಭಾಗದ ಜನ ಹೈರಾಣಾಗಿದ್ದು, ಔರಾದ್ ತಾಲೂಕಿನ ಗಡಿಕುಶನೂರ್ ಗ್ರಾಮದಲ್ಲಿ ಮಳೆರಾಯ ಅವಾಂತರ ಸೃಷ್ಟಿ ಮಾಡಿದ್ದಾನೆ. ಗ್ರಾಮದ ಶಕುಂತಲಾ ಸೊರಳ್ಳಿ ಅವರ ಮನೆಗೆ ಮಳೆ ನೀರು ನುಗ್ಗಿದ್ದು, ಮನೆಯಲ್ಲಿದ್ದ ಸಾಮಗ್ರಿಗಳು, ಆಹಾರ ಪದಾರ್ಥಗಳು ನೀರುಪಾಲಾಗಿವೆ.

ಧಾರಾಕಾರ ಮಳೆಗೆ ಬೀದರ್ ನ ಜಿಲ್ಲಾ ಕೋರ್ಟ್ ಆವರಣದಲ್ಲೂ ಮಳೆ ನೀರು ನಿಂತ್ತಿದ್ದು, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ಕೋಣೆಯಲ್ಲಿ ನೀರು ಸೋರಿಕೆಯಾಗಿದೆ. ನಗರದ ಕನ್ನಡಾಂಬೆ ರಸ್ತೆಗಳು ಜಲಾವೃತವಾಗಿದ್ದು, ಧಾರಾಕಾರ ಮಳೆಗೆ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಸಂಚಾರ ಮಾಡಲು ಹರಸಾಹಸ ಪಡುತ್ತಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಭಾರೀ ಮಳೆ- ಬೆಳೆಗಳು ಜಲಾವೃತ, ಸಂಕಷ್ಟದಲ್ಲಿ ರೈತರು

ಸತತ ಒಂದು ಗಂಟೆಗಳ ಕಾಲ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತವಾಗಿತ್ತು. ಆದರೆ ಮಳೆ ಇಲ್ಲದೆ ಬೆಳೆ ಕಳೆದುಕೊಳ್ಳುವ ಭೀತಿಯಲ್ಲಿದ್ದ ರೈತರಿಗೆ ಮಳೆಯಿಂದಾಗಿ ಮಂದಹಾಸ ಮೂಡಿದೆ.

Source: publictv.in Source link