ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇಲ್ಲೊಬ್ಬಳು ಚಿಂಪಾಂಜಿಯನ್ನೇ 4 ವರ್ಷ ಲವ್​ ಮಾಡಿಬಿಟ್ಟವ್ಳೆ..!

ಪ್ರೀತಿಗೆ ಕಣ್ಣಿಲ್ಲ ಅಂತಾರೆ, ಆದರೆ ಇಲ್ಲೊಬ್ಬಳು ಚಿಂಪಾಂಜಿಯನ್ನೇ 4 ವರ್ಷ ಲವ್​ ಮಾಡಿಬಿಟ್ಟವ್ಳೆ..!

ಪ್ರೀತಿ ಮಾಯೆ ಹುಷಾರು! ಈ ಮಾತು ಇವತ್ತಿನ ಸ್ಟೋರಿಗೆ ಹೇಳಿ ಮಾಡಿಸಿದ ಹಾಗಿದೆ. ಪ್ರೇಮದ ಜೊತೆಗೆ ಕಣ್ಣಿರು ಕಟ್ಟಿಟ್ಟ ಬುತ್ತಿ ಅನ್ನುವ ಹಾಗೆ, ಇಲ್ಲೊಬ್ಬಳು ತನ್ನ ಪ್ರೀತಿಗಾಗಿ ಕಣ್ಣೀರು ಹಾಕುತ್ತಿದ್ದಾಳೆ. ಎಲ್ಲರ ಪ್ರೀತಿಯ ರೀತಿ ಈಕೆಯದು ಸಾಮಾನ್ಯ ಪ್ರೀತಿ ಅಲ್ಲ. ಬದಲಿಗೆ ಇವಳ ಪ್ರೀತಿ ಒಂದು ಚಿಂಪಾಜಿ ಜೊತೆ. ಯಾರಿವಳು?

ಮನುಷ್ಯ ಹಾಗೂ ಪ್ರಾಣಿಗಳ ನಡುವೆ ಒಂದು ವಿಶೇಷವಾದ ಬಾಂಡ್ ಬೆಳೆದಿರುತ್ತೆ. ಇದಕ್ಕೆ ಪ್ರಾಣಿಗಳ ಭಾವನೆಗಳು ಜೊತೆಯಾಗಿ ಅದು ಇನ್ನೊಂದು ಹಂತಕ್ಕೆ ತಲುಪುತ್ತೆ. ಪ್ರಾಣಿಗಳನ್ನು ಸಾಕುವುದರಿಂದ ಅಥವಾ ಪ್ರಾಣಿಗಳಿಗೆ ವಿಶೇಷ ಸ್ಥಾನ ಕೊಡುವುದರಿಂದ, ಆ ಜೀವಕ್ಕೆ ಸ್ಫೂರ್ತಿ ತುಂಬುವುದರ ಜೊತೆಗೆ, ಪ್ರಾಣಿ ಪ್ರೇಮಿಯ ಬದಕು ಸಹ ಭಾವನೆಗಳನ್ನು ಹೊರ ಹಾಕಲು ಒಂದು ಹೊಸ ಮಾರ್ಗ ಸಿಗುತ್ತದೆ. ಇದಕ್ಕಾಗೇ ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ನಾಯಿ, ಬೆಕ್ಕು, ಮೊಲ ಹೀಗೆ ಪ್ರಾಣಿಗಳನ್ನು ಬೆಳಸಿ ಪೋಷಿಸುತ್ತಾರೆ. ಆದರೆ ಆ ಪ್ರೀತಿ ಅತಿರೇಕವಾಗಿ, ಪ್ರಾಣಿಯೊಡಗಿನ ಸಂಬಂಧಕ್ಕೆ ಬೇರೆ ಅರ್ಥ ಅನರ್ಥಗಳು ಹುಟ್ಟಿದರೆ? ಅದು ಇವತ್ತಿನ ಸ್ಟೋರಿ ರೀತಿ ಕಣ್ಣೀರಿನಲ್ಲಿ ಅಂತ್ಯವಾಗಬೇಕಾಗುತ್ತದೆ.

ಇದನ್ನೂ ಓದಿ: BigBreaking: ಮತ್ತೊಂದು ಬಾರಿ ಮದುವೆಯಾದ ಬಹುಭಾಷಾ ನಟ ಪ್ರಕಾಶ್ ರೈ

blank

ಪ್ರೀತಿ ಅನ್ನೋದು ಕುರುಡು, ಒಮ್ಮೊಮ್ಮೆ ಪ್ರೀತಿಯಲ್ಲಿ ತಪ್ಪು ಹೆಜ್ಜೆಗಳು, ತಪ್ಪು ನಿರ್ಧಾರಗಳನ್ನು ಅರಿವಿಲ್ಲದೇ ತೆಗೆದುಕೊಂಡು ಬಿಡ್ತೀವಿ. ಕೊನೆಗೆ ಪಶ್ಚಾತಾಪಕ್ಕಾಗೋ ಅಥವಾ ನಿಶ್ಕಲ್ಮಶ ಪ್ರೀತಿ ಸಿಗಲಿಲ್ಲ ಎನ್ನುವ ಕಾರಣಕ್ಕೂ ದುಃಖದಲ್ಲಿ ಮುಗಿಸಿ ಬಿಡ್ತೀವಿ. ಹಾಗೆ ಇಲ್ಲೊಬ್ಬಳು ಮಹಿಳೆ ತನ್ನ ಪ್ರೀತಿ ಸಿಗದಿದ್ದಕ್ಕೆ ಕಣ್ಣೀರು ಹಾಕುತ್ತಿದ್ದಾಳೆ. ತನ್ನ ಪ್ರಿಯಕರನ ಹತ್ತಿರ ಹೋಗಲು ಬಿಡಿ ಎಂದು ಗೋಗರೆಯುತ್ತಿದ್ದಾಳೆ. ಆದರೆ ಆಕೆ ಮಾಡಿದ ತಪ್ಪು ಇಷ್ಟೇ ನೋಡಿ. ಎಲ್ಲವನ್ನೂ ಬಿಟ್ಟು ಆಕೆ ತನ್ನ ಪ್ರೀತಿಯನ್ನು ಹಂಚಿರೋದು, ಮೃಗಾಲಯದಲ್ಲಿ ಕಟ್ಟುಪಾಡುಗಳ ನಡುವೆ ಇರುವ, ತನ್ನವರ ಜೊತೆ ನಿಶ್ಚಿಂತೆಯಿಂದ ಜೀವಿಸುವ, ಚಿಂಪಾಂಜಿಯ ಜೊತೆ.

ನಾಲ್ಕು ವರ್ಷಗಳಿಂದ ಚಿಂಪಾಂಜಿ ಜೊತೆ ಪ್ರೇಮ ಸಲ್ಲಾಪ
ಗಾಜಿನ ನಡುವೆ ಹುಟ್ಟಿದ ಪ್ರೀತಿಗೆ ಕೊನೆಗೂ ಬ್ರೇಕ್

ಈ ಒಂದು ಚೌಕಟ್ಟಿನ ನಡುವೆ, ನಕಲಿ ಮರಗಳ ಮೇಲೆ, ಮೇಲು ಕೆಳಗೂ ಅಡ್ಡಾಡುವ ಹಲವು ಚಿಂಪಾಂಜಿಯಲ್ಲಿ ಒಂದು ಚಿಂಪಾಂಜಿಯೇ ಈ ಚಿತಾ. ಈಗ ಈಕೆಯ ಪ್ರೇಮ ಬಂಧನದಲ್ಲಿ ಸಿಲುಕಿರುವುದು ಇದೆ ಚಿಂಪಾಂಜಿ. ಸಹಜವಾಗಿ ಮೃಗಾಲಯಗಳು, ಪ್ರಾಣಿಗಳ ಪರಿಚಯವಾಗಲಿ ಅನ್ನುವ ಕಾರಣಕ್ಕೆ ಹೀಗೆ ಪ್ರದರ್ಶನಕ್ಕಾಗಿ ಕಾಡು ಪ್ರಾಣಿಗಳನ್ನು ಇಟ್ಟಿರುತ್ತಾರೆ. ಇದನ್ನು ಒಮ್ಮೆ ಬಂದು ನೋಡಿದಾಗ ಆ ಪ್ರಾಣಿಗಳ ತುಂಟಾಟ ಇಷ್ಟವಾಗಿ, ಕೆಲವು ಮೆಲುಕು ಹಾಕುವ ಘಟನೆಗಳನ್ನು ಕಲೆ ಹಾಕಿಕೊಳ್ಳುತ್ತೇವೆ. ಆದ್ರೆ ಆ ಒಂದು ಸಂಬಂಧವನ್ನು ಅಲ್ಲೆ ಬಿಟ್ಟು ಹಾಗೆ ಹೋಗಬೇಕು. ಅತಿ ಹೆಚ್ಚು ಎಂದರೆ ಅದರ ಜೊತೆ ಒಂದು ಸೆಲ್ಫಿ, ತಿನ್ನಲು ಆಹಾರ ಏನೋ ಕೊಟ್ಟ ಆ ಸಂಬಂಧವನ್ನು ಅಲ್ಲೆ ಬ್ರೇಕ್ ಮಾಡಬೇಕು. ಆದರೆ ಇವಳು ಸತತ 4 ವರ್ಷಗಳಿಂದ ಈ ಚಿಂಪಾಂಜಿಗೆ ತನ್ನ ಪ್ರೀತಿಯನ್ನು ಧಾರೆ ಎರೆದಿದ್ದಾಳೆ. ಗಾಜಿನ ಮಧ್ಯೆ ಶುರುವಾದ ಇವರಿಬ್ಬರ ಪ್ರೀತಿ, ಗಾಜಿನ ನಡುವೆಯೇ ಸಾಗಿ, ಈಗ ಕೊನೆಗೂ ಅಂತ್ಯವಾಗುವ ಹಂತ ತಲುಪಿದೆ.

ಇದನ್ನೂ ಓದಿ: ಸುದೀಪ್ ಬರ್ತ್​​ಡೇ K3 ರಿಲೀಸ್ ಅನೌನ್ಸ್​​ಮೆಂಟ್ -RRR ಬರೋ ದಿನ ಕೋಟಿಗೊಬ್ಬ ರಿಲೀಸ್ ಆಗುತ್ತಾ?

ಬೆಲ್ಜಿಯಂನ ಅಂಟ್ವರ್ಪ್ ಮೃಗಾಲದಲ್ಲಿ ನಡೆಯುತ್ತಿದ್ದ ಚಿಂಪಾಂಜಿ ಲವ್
ಚಿಂಪಾಂಜಿಯ ನಡುವಳಿಕೆಗೆ ಸೋತು, ಪ್ರೇಮ ಪಾಶ ಬೀಸಿದ ಮಹಿಳೆ

ಚಿಂಪಾಂಜಿ ಚಿತಾ ಜೊತೆ ಪ್ರೇಮಾಂಕುರವನ್ನು ಬೆಳೆಸಿದ ಮಹಿಳೆ ಹೆಸರು ಆಡಿ ಟಿಮ್ಮರ್ಮನ್ಸ್. ಇವಳು ಬೆಲ್ಜಿಯಂ ನಿವಾಸಿ. ಬೆಲ್ಜಿಯಂನಲ್ಲಿನ ಅಂಟ್ವರ್ಪ್ ಎನ್ನುವ ಜೂ ತುಂಬಾ ಫೇಮಸ್. ಇದೇ ಜೂ ನಲ್ಲಿ ಬರೋಬರಿ 5000 ಸಾವಿರ ವಿವಿದ ಜಾತಿಯ ಪ್ರಾಣಿಗಳಿವೇ. ಅದರಲ್ಲಿ ಚಿಂಪಾಂಜಿಗಳೂ ಕೂಡ ಒಂದು. ಈ ಚಿಂಪಾಜಿಗಳ ಗುಂಪಿನಲ್ಲಿ 38 ವರ್ಷದ ಚಿತಾ ನಡುವಳಿಕೆ ಎಲ್ಲರಿಗೂ ಆಕರ್ಷಿತವಾಗೇ ಇದೆ. ಆದರೆ ಆಡಿರವರಿಗೆ ಈ ಚಿಂಪಾಂಜಿ ವಿಶೇಷ ಪ್ರೀತಿಯನ್ನು ಕೊಟ್ಟಿದೆ ಎಂದು ಹೇಳುತ್ತಿದ್ದಾರೆ. ಚಿತಾನನ್ನು ಬೇಟಿಯಾಗಲು ಅಡಿ ವಾರಕ್ಕೋಮ್ಮೆಯಾದರು ಬಂದು ದಿನವಿಡಿ ಗಾಜಿನ ಮುಂದೆ ಚಿತಾ ಜೊತೆ ಮಾತನಾಡುತ್ತಿದ್ದರಂತೆ. ಈಗ ಇವರಿಬ್ಬರ ನಡುವೆ ವಿಶೇಷವಾದ ಪ್ರೀತಿ ಹುಟ್ಟಿಕೊಂಡಿದೆ. ಚಿತಾ ನನ್ನು ನೋಡದೇ ಮಾತನಾಡದೆ ನಾ ಇರಲಾರೆ ಎನ್ನುತ್ತಿದ್ದಾರೆ ಆಡಿ. ಆದರೆ ಮೃಗಾಲಯದ ನಿರ್ದೇಶಕರು ಹೇಳುತ್ತಿರುವುದೇ ಬೇರೆ.

blank

ಆಡಿ ಮೃಗಾಲಯಕ್ಕೆ ಬರದಂತೆ ನಿರ್ಬಂಧ
ಪ್ರಾಣಿ ಜೊತೆ ಸಂಬಂಧ ತಪ್ಪು ಎಂದ ಅಧಿಕಾರಿಗಳು

ಇದನ್ನೂ ಓದಿ: ಅಘ್ಘಾನ್​ ಕ್ಯಾಬಿನೆಟ್ ಸಚಿವನೀಗ ಪಿಜ್ಜಾ ಡೆಲಿವರಿ ಬಾಯ್; ಆಕ್ಸ್​ಫರ್ಡ್​ ಪದವೀಧರನಿಗೆ ಎಂಥಾ ಸ್ಥಿತಿ

3 ದಿನಕ್ಕೊಮ್ಮೆ ಅಥವಾ ಪ್ರತಿ ವಾರಕ್ಕೊಮ್ಮೆ ಹೀಗೆ ಆಡಿ ಮೃಗಾಲಯಕ್ಕೆ ಆಗ್ಗಾಗೆ ಹೋಗುತ್ತಿದ್ದಳು. ಅಲ್ಲದೆ ನೇರವಾಗಿ ಚಿಂಪಾಂಜಿ ಎದುರಲ್ಲೆ ಕೂತು, ಗಾಜಿನ ಮೇಲೆ ಮುತ್ತಿಡುವುದು, ಪದೆ ಪದೆ ಕರೆದು ಅದರ ಜೊತೆ ವ್ಯವಹರಿಸುವುದು ಹೀಗೆ ಮಾಡುತ್ತಲೇ ಇದ್ದಳು. ಇದನ್ನು ಗಮನಿಸಿದ ಮೃಗಾಲಯದ ಸಿಬ್ಬಂದಿ, ಇವರನ್ನು ಹಿಂಬಾಲಿಸಿದ್ದಾರೆ. ದಿನವಿಡಿ ಚಿಂಪಾಂಜಿಯ ಎದುರು ಕುಳಿತು ಆಕೆ ಏನು ಮಾಡುತ್ತಿದ್ದಾಳೆ ಎನ್ನುವ ಕುತೂಹಲದಿಂದ ನಾಲ್ಕು ವರ್ಷದ ಬಳಿಕ ವಿಚಾರಿಸಲು ಮುಂದಾಗಿದ್ದಾರೆ. ಆಗಲೇ ಆಕೆ ಹೇಳಿದ್ದು, ಚಿಂಪಾಂಜಿ ಚಿತಾ ಜೊತೆ 4 ವರ್ಷಗಳಿಂದ ಆಕೆ ಸಂಬಂಧ ಇದೆ ಎಂದು. ಮೃಗಾಲಯದಲ್ಲಿರುವ ಪ್ರಾಣಿಗಳ ಜೊತೆ ಸಂಬಂಧ ಇಟ್ಟುಕೊಳ್ಳುವುದು ಅನೈತಿಕ ಎನ್ನುವಂತೆ ಕೂಡಲೇ ಆಡಿರನ್ನು ಜೂ ಗೆ ಕಾಲಿಡುವಂತಿಲ್ಲ ಎಂದು ಆಕೆಗೆ ನಿರ್ಭಂದ ಹೇರಲಾಗಿದೆ. ಇದೆ ವಿಷಯಕ್ಕಾಗಿ ಆಡಿ ಕಣ್ಣಿರು ಹರಿಸಿ, ತನ್ನ ಪ್ರೀತಿಯ ಚಿತಾವನ್ನು ಬೇಟಿಯಾಗಲು ಬಿಟ್ಟು ಕೊಡಿ ಎಂದು ಕೇಳಿಕೊಂಡಳು.

ನಾನು ಚಿತಾನನ್ನು ಲವ್ ಮಾಡುತ್ತಿದ್ದೇನೆ. ಚಿತಾ ಕೂಡ ನನ್ನನ್ನು ತುಂಬ ಲವ್ ಮಾಡುತ್ತಾನೆ. ಅದು ಒಂದೆರಡು ವರ್ಷಗಳಿಂದಲ್ಲ. ನಮ್ಮಿಬ್ಬರ ಪ್ರೀತಿ ಶುರುವಾಗಿ 4 ವರ್ಷಗಳಾಗಿದೆ. ನಾವಿಬ್ಬರು ಗಾಜಿನ ಹಿಂದೆ ಪ್ರೀತಿ ಮಾಡುವುದು ಬಿಟ್ಟರೇ ಬೇರೇನು ಮಾಡುವುದಿಲ್ಲ. ನಮ್ಮಿಬ್ಬರನ್ನು ದೂರ ಮಾಡುವುದಾದರೂ ಯಾಕೆ? ನಮ್ಮಿಬ್ಬರ ನಡುವೆ ಸಂಬಂಧ ಇದೆ ಅನ್ನೋದನ್ನು ಮಾತ್ರ ನಾನು ಹೇಳಬಲ್ಲೆ.
-ಆಡಿ ಟಿಮ್ಮರ್ಮನ್ಸ್, ಚಿಂಪಾಂಜಿ ಪ್ರೇಯಸಿ

ಹೌದಾ? ನಿಜಕ್ಕೂ ಪ್ರಾಣಿಗಳು ಮನುಷ್ಯನ ಪ್ರೀತಿಗೆ ಸೋಲಬಹುದು? ಖಂಡಿತವಾಗಿಯೂ ಹೌದು. ಕೆಲವು ಪ್ರಾಣಿಗಳಲ್ಲಿ ಪ್ರೀತಿಯ ಭಾವನೆ ಇದ್ದೆ ಇರುತ್ತದೆ. ವಿಶೇಷವಾಗಿ ಚಿಂಪಾಂಜಿ ಮಾನವನ ಹತ್ತಿರದ ಜಾತಿ. ಈ ಪ್ರಾಣಿಗಳಲ್ಲಿ ಪ್ರೀತಿಯ ಭಾವನೆ ಮೂಡೋದು ಸಹಜ. ಆದ್ರೆ ಅದು ಅಷ್ಟು ಸುಲಭವಲ್ಲ. ಪ್ರಾಣಿಗಳು ಮಾನವನಿಗೆ ಮನಸೋಲಲು ಸಾಕಷ್ಟು ದಿನಗಳು ತೆಗೆದುಕೊಳ್ಳುತ್ತದೆ. ಅಲ್ಲದೆ ಪ್ರಾಣಿಗಳು ಆ ಪ್ರೀತಿಯನ್ನು ಮಿಸ್ ಮಾಡಿಕೊಳ್ಳಲು ತಯಾರಾಗಿರುವುದಿಲ್ಲ. ಒಮ್ಮೆ ಮನುಷ್ಯ ಪ್ರಾಣಿಯ ಸಂಬಂಧ ಗಟ್ಟಿಯಾದರೇ, ಪ್ರಾಣಿಯಿಂದ ದೂರಾಗುವುದು ಕಷ್ಟ, ಜೊತೆಗೆ ಪ್ರಾಣಿಗಳಿಗೂ ಮನುಷ್ಯನ ಅಗಲಿಕೆಯಿಂದ ಬದುಕುಳಿಯುವುದು ಕಷ್ಟ ಅನ್ನೋದು ತಜ್ಞರು ಹೇಳ್ತಾರೆ.

ಇದನ್ನೂ ಓದಿ: ಎಲ್ಲಾ ಕುಡುಕರು ಸೇರಿ ನನಗೆ ಕುಡುಕನ ಪಟ್ಟ ಕಟ್ಟಿದ್ರು; ಸಿ.ಟಿ ರವಿ ಹೀಗಂದಿದ್ದು ಯಾರಿಗೆ?

ಚಿಂಪಾಂಜಿ ಪ್ರೀತಿಯ ಬಗ್ಗೆ ಝೂ ಸಿಬ್ಬಂದಿ ಏನ್ ಹೇಳ್ತಾರೆ ?
ಆಡಿಯ ಝೂ ಪ್ರವೇಶದ ನಿಷೇಧದ ಹಿಂದಿನ ಕಥೆ ಏನು ?

ಚಿತಾ ಮತ್ತು ಅಡಿ ಇಬ್ಬರ ನಡುವೆ ಹುಟ್ಟಿರುವ ಸಂಬಂಧವನ್ನು ಕೂಡಲೇ ಕಡಿತಗೊಳಿಸ ಬೇಕು ಎನ್ನುವ ಕಾರಣಕ್ಕೆ ಆಕೆಯನ್ನು ರದ್ದು ಮಾಡಿದ್ದಾರೆ. ಆದರೆ ಈ ಕೆಲಸ ಮಾಡುವ ಮೊದಲು ಮೃಗಾಲಯದ ಸಿಬ್ಬಂದಿ ಏನ್ ಯೋಚನೆ ಮಾಡಿದ್ದಾರೆ ಗೊತ್ತಾ ?

ಆಡಿಯವರ ಈ ವರ್ತನೆಯಿಂದ ಚಿತಾ ಮಾನವ ಸಂಪರ್ಕದ ಚಟ ರೂಢಿ ಮಾಡಿಕೊಳ್ಳುತ್ತಾನೆ. ಇದರಿಂದ ಅವನು ಝೂಗೆ ಬಂದವರೆಲ್ಲರಿಂದ ಇದೆ ಬಯಸಲು ಶುರು ಮಾಡುತ್ತಾನೆ. ಇದರಿಂದ ಚಿತಾ ತನ್ನ ಗುಂಪಿನಿಂದ ದೂರಾಗಿ ಕೇವಲ ಸಂದರ್ಶಕರ ನಡುವೆ ಕಾಲ ಕಳೆಯಲು ಬಯಸುತ್ತಾನೆ. ಗುಂಪಿನಿಂದ ದೂರಾದರೇ, ಅವನ ಅಸ್ತಿತ್ವದ ಮೇಲೆ ಅವನಿಗೆ ಬೇಸರವಾಗುವುದಲ್ಲದೆ. ಚಿಂಪಾಂಜಿಗಳ ನಡುವೆ ಜಗಳ ಹಾಗೂ ಕಲಹ ಉಂಟಾಗುವ ಸಾಧ್ಯತೆ ಇದೆ.
ಸಿಬ್ಬಂದಿ, ಅಂಟ್ವರ್ಪ್ ಮೃಗಾಲಯ ಬೆಲ್ಜಿಯಂ

ಆಡಿ ತೋರುತ್ತಿರುವ ಆ ಪ್ರೀತಿಯಿಂದ ಚಿತಾಗೆ ಏನೆಲ್ಲ ತೊಂದರೆಯಾಗಬಹುದು ಎಂದು. ಚಿತಾವನ್ನು ಚಿಂಪಾಂಜಿಗಳು ತಮ್ಮ ಗುಂಪಿನಿಂದ ದೂರ ಉಳಿಸಲು ಯತ್ನಿಸುತ್ತವೆಯಂತೆ. ಗುಂಪಿನಿಂದ ದೂರಾದರೆ ತನ್ನ ಅಸ್ತಿತ್ವವನ್ನು ಮರೆತು ಬಿಡಬಹುದು ಚಿತಾ. ಈ ಕಾರಣದಿಂದ ಆಡಿಯನ್ನು ಮೃಗಾಲಯದ ಒಳಗೆ ಪ್ರವೇಶ ಪಡೆಯಬಾರದು ಎಂದು ನೇರವಾಗಿ ಬ್ಯಾನ್ ಮಾಡಿಬಿಟ್ಟಿದ್ದಾರೆ. ಹಾಗಾದರೆ ಆಡಿ, ತನ್ನ ಪ್ರಿಯಕರನನ್ನು ಇನ್ನೆಂದು ಬೇಟಿ ಆಗುವ ಹಾಗಿಲ್ಲವಾ ? ಆಡಿ ತನ್ನ ಪ್ರೀತಿಯನ್ನು ಬೇಟಿಯಾಗಲು ಏನೆಲ್ಲಾ ಮಾಡ್ತಾ ಇದ್ದಾಳೆ ? ಇವಳ ಪರಿಸ್ತಿತಿ ಹೀಗಾದ್ರೆ ಮೃಗಾಲಯದಲ್ಲಿರುವ ಚಿತಾ ಕಥೆ ಏನು ಗೊತ್ತಾ ?

ಇದನ್ನೂ ಓದಿ: ‘ರಾಜಿ’ ಪಾತ್ರದಲ್ಲಿ ನಟಿಸಿದ್ದಕ್ಕೆ ತಮಿಳು ಜನರೆದುರು ಕೈಮುಗಿದು ಕ್ಷಮೆ ಕೇಳಿದ ಸಮಂತಾ

ಪ್ರೀತಿಗಾಗಿ ಹೋರಾಟ ಮಾಡಲು ಆಡಿ ಟಿಮ್ಮರ್ಮನ್ಸ್ ರೆಡಿ
ಕೋರ್ಟ್ ಮೆಟ್ಟಿಲೇರಿ, ಚಿಂಪಾಂಜಿ ಚಿತಾನನ್ನು ಭೇಟಿಯಾಗಲಿದ್ದಾಳೆ

ಈಕೆಯ ನಡೆಯನ್ನು ಖಂಡಿಸಿ, ಅಂಟ್ವರ್ಪ್ ಮೃಗಾಲಯದವರು ಈಕೆಯನ್ನು ದೂರ ಉಳಿಸಿದೆ. ಆದರೆ ಬ್ಯಾನ್ ಆದ ಮೇಲೆ ಸುಮ್ಮನೆ ಕೂರುವೆನು ಎಂದು ಆಡಿ ಎಲ್ಲೂ ಹೇಳಿಲ್ಲ. ಬದಲಿಗೆ ತನ್ನ ಪ್ರೀತಿಯನ್ನು ಮರು ಪಡೆಯಲು ಈಕೆ ಕೋರ್ಟ್ ಮೆಟ್ಟಿಲೇರಲು ಸಿದ್ದಳಾಗಿದ್ದಾಳೆ. ಹೇಗಾದರೂ ಮಾಡಿ ಮತ್ತೆ ಪ್ರೀತಿಯನ್ನು ಪಡೆದೇ ಪಡೆಯುವುದಾಗಿ ಪಣ ತೊಟ್ಟಿದ್ದಾಳೆ ಆಡಿ. ಆದರೆ ಜೂ ನಲ್ಲಿ ಇನ್ನು ಗಾಜಿನ ಹಿಂದೆ ಕಾದು ಕುಳಿತಿರುವ ಚಿತಾ ಕಥೆ ಏನು ಅನ್ನೋದ್ದಾದ್ರೆ? ಚಿಂಪಾಂಜಿ ಕಣ್ಣುಗಳಿಂದ ದೂರವಾದರೆ ನಾಲ್ಕೈದು ತಿಂಗಳಲ್ಲಿ ಅವಳನ್ನು ಮರೆಯಬಹುದು. ಔಟ್ ಆಫ್ ಸೈಟ್ ಇಸ್ ಔಟ್ ಆಫ್ ಮೈಂಡ್ ಎನ್ನುವ ತತ್ವವನ್ನು ಬಳಸಿಕೊಳ್ಳುತ್ತಿದ್ದಾರೆ. ಹೀಗಾದರೂ ಸರಿ, ಚಿತಾವನ್ನು ತನ್ನ ಸಂಗಡಿಗರ ಜೊತೆ ಬೆರಯಲು ಪ್ಲಾನ್ ಮಾಡಿದ್ದಾರೆ ಮೃಗಾಲಯದವರು. ಆದರೆ ಸಧ್ಯಕ್ಕಂತೂ ಚಿತಾ, ಆಡಿಯನ್ನು ಕಾಯುತ್ತಿರುವುದು ಮಾತ್ರ ನಿಜ.

ಇದನ್ನೂ ಓದಿ: ‘ದೊಡ್ಡಣ್ಣ’ ಅನ್ನೋ ಬ್ರಾಂಡ್​ ವ್ಯಾಲ್ಯೂ ಮಣ್ಣುಪಾಲು ಮಾಡಿದ ತಾಲಿಬಾನ್..!

Source: newsfirstlive.com Source link