ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳ ಅಟ್ಟಹಾಸ; ಭಾರತದ ವ್ಯಾಪಾರ ವಹಿವಾಟಿನ ಮೇಲೆ ಎಫೆಕ್ಟ್​

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳ ಅಟ್ಟಹಾಸ; ಭಾರತದ ವ್ಯಾಪಾರ ವಹಿವಾಟಿನ ಮೇಲೆ ಎಫೆಕ್ಟ್​

ಅಫ್ಘಾನ್ ತಾಲಿಬಾನ್ ವಶವಾದ್ಮೇಲೆ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಎದುರಾಗ್ತಾಲೆ ಇವೆ. ದೇಶದ ಗ್ರಾಹಕರ ಜೇಬಿಗೂ ಇದೀಗ ತಾಲಿಬಾನ್​ಗಳಿಂದ ಕತ್ತರಿ ಬೀಳುವಂತ್ತಾಗಿದೆ. ಅದ್ರಲ್ಲೂ ಹೈದರಬಾದ್ ಬಿರಿಯಾನಿ ಪ್ರಿಯರ ಪಾಲು ದೊಡ್ಡದಾಗಿದೆ. ತಾಲಿಬಾನ್​ ಬಂದೂಕಿಗೂ ಹೈದರಾಬಾದ್ ಬಿರಿಯಾನಿಗೂ ಏನ್ ಸಂಬಂಧ..?

ಹೈದರಾಬಾದ್ ಬಿರಿಯಾನಿ….. ನಾನ್ ವೆಜ್ ಪ್ರಿಯರ ಬಾಯಲ್ಲಿ ನೀರೂರಿಸುವ ಬಿರಿಯಾನಿ ಇದು. ಈ ಹೆಸರು ಕೇಳಿದ್ರೆ ಸಾಕು ಬಿರಿಯಾನಿ ಪ್ರಿಯರ ಕಿವಿಗೆ ನೆಟ್ಟಗಾಗಿ ಬಿಡುತ್ತೆ. ಈ ಹೈದರಾಬಾದ್ ಬಿರಿಯಾನಿ ಎಂತಹ ಖಾದ್ಯವೆಂದ್ರೆ, 8 ವರ್ಷದ ಮಕ್ಕಳಿಂದ ಹಿಡಿದು 80 ವರ್ಷದ ಮುದುಕನ ತನಕಾ ಎಲ್ಲರನ್ನ ತನ್ನ ರುಚಿಯಲ್ಲಿ ಬಂಧಿಯಾಗುವಂತೆ ಮಾಡುತ್ತೆ. ವೀಕೆಂಡ್​ನಲ್ಲಿ ನಾಲಗೆ ಡಿಫ್ರೆಂಟ್ ರುಚಿ ಬೇಡಲು ಶುರು ಮಾಡಿದ್ರೆ ಸಾಕು, ಜನರು ಈ ಘಮ ಘಮಿಸುವ ಹೈದ್ರಬಾದ್ ಬಿರಿಯಾನಿಯನ್ನ ಹುಡುಕೊಂಡು ಹೋಗಿ,ರುಚಿ ಸವಿದು ಬರ್ತಾರೆ. ಆದ್ರೆ ಇದೀಗ ಹೈದರಬಾದ್ ಬಿರಿಯಾನಿ ಪ್ರಿಯರಿಗೂ ಶಾಕಿಂಗ್ ನ್ಯೂಸ್ ಎದುರಾಗಿದೆ, ಇನ್ಮುಂದೆ ಈ ಬೊಂಬಾಟ್ ಬಿರಿಯಾನಿಯ ಸವಿಯನ್ನ ಸವಿಬೇಕಾದ್ರೆ ಸ್ವಲ್ಪ ಹೆಚ್ಚು ಹಣ ಪೇ ಮಾಡ್ಬೇಕಾದ ಅಗತ್ಯತೆ ಎದುರಾಗಿದೆ.

ಅಫ್ಘಾನ್​ ಅರಾಜಕತೆಗೆ ಹೆಚ್ಚಾಗಲಿದೆ ಬಿರಿಯಾನಿ ರೇಟ್
ಇನ್ಮುಂದೆ ದುಬಾರಿಯಾಗಲಿದೆ ಹೈದರಾಬಾದ್ ಬಿರಿಯಾನಿ

ತಾಲಿಬಾನ್​ಗಳ ಕಪಿಮುಷ್ಠಿಗೆ ಸಿಲುಕಿ ಅಫ್ಘಾನ್ ಅಕ್ಷರಶಃ ಹೈರಾಣಾಗಿದೆ. ಜನರು ಜೀವ ಉಳಿದ್ರೆ ಸಾಕು ಎಂದು ಉಟ್ಟ ಬಟ್ಟೆಯಲ್ಲಿ ದೇಶ ಬಿಡಲು ರೆಡಿಯಾಗಿದ್ದಾರೆ. ಮಹಿಳೆಯರು, ಮಕ್ಕಳು ನರಕಯಾತನೆ ಅನುಭವಿಸುತ್ತಿದ್ದಾರೆ. ಅಫ್ಘಾನ್​ ತಾಲಿಬಾನ್​ ಕೈವಶ ಮಾಡ್ಕೊಂಡಿದ್ದರ ಎಫೆಕ್ಟ್​ ಇದೀಗ ಹೈದ್ರಬಾದ್ ಬಿರಿಯಾನಿಗೂ ತಟ್ಟಿದೆ.

ಅರೇ ಇದೇನಪ್ಪಾ, ಅಫ್ಘಾನ್​ಸ್ತಾನದ ತಾಲಿಬಾನ್​ಗಳ ಬಂದೂಕಿನ ಘರ್ಜನೆಗೂ, ಈ ಹೈದ್ರಬಾದ್ ಬಿರಿಯಾನಿಗೂ ಎತ್ತನಿಂದೆತ್ತ ಸಂಬಂಧವಯ್ಯಾ ಅನ್ನೋ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಕಾಮನ್. ಅದ್ಕೂ ಒಂದು ಕಾರಣ ಇದೆ.. ಅದ್ನು ಹೇಳ್ತೀವಿ ನೋಡಿ…

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳ ಅಟ್ಟಹಾಸ
ಭಾರತದ ವ್ಯಾಪಾರ ವಹಿವಾಟಿನ ಮೇಲೆ ಎಫೆಕ್ಟ್​

ನೆರೆ ರಾಷ್ಟ್ರದಲ್ಲಿ ಯಾವುದೇ ರೀತಿಯಲ್ಲಿ ದೊಡ್ಡ ಡೆವಲಪ್​ಮೆಂಟ್ಸ್​ ನಡೆದ್ರೆ, ಅದ್ರ ಪರಿಣಾಮ ನಮ್ಮ ದೇಶದಲ್ಲೂ ಬೀಳುತ್ತೆ. ಇದೀಗ ಅಫ್ಘಾನಿಸ್ತಾನ್ ತಾಲಿಬಾನ್ ತೆಕ್ಕೆಗೆ ಜಾರಿರುವುದರಿಂದ ಭಾರತದಲ್ಲಿ ಡ್ರೈ ಫ್ರೂಟ್ಸ್​ ಬೆಲೆ ಹೆಚ್ಚಾಗಿದೆ. ಅದ್ಕೆಲ್ಲಾ ಕಾರಣ ಮತ್ತೆ ಅದೇ ತಾಲಿಬಾನ್.

ಹೌದು.. ಯಾವಾಗ ಅಫ್ಘಾನ್ ತಾಲಿಬಾನ್​ ತೆಕ್ಕೆಗೆ ಜಾರಿತ್ತೋ, ತಾಲಿಬಾನ್​ಗಳು ಭಾರತದೊಂದಿಗೆ ಎಲ್ಲ ರೀತಿಯ ಆಮದು-ರಫ್ತು ಸೇರಿದಂತೆ ಎಲ್ಲಾ ರೀತಿಯ ವ್ಯಾಪಾರ ವಹಿವಾಟುಗಳಿಗೆ ನಿರ್ಬಂಧ ಹೇರಿತ್ತು. ಪಾಕಿಸ್ತಾನದ ಮೂಲಕ ರಸ್ತೆ ಮಾರ್ಗವಾಗಿ ಬರುತ್ತಿದ್ದ ಸರಕುಗಳನ್ನು ತಾಲಿಬಾನ್ ನಿಷೇಧ ಹೇರಿತ್ತು. ಪರಿಣಾಮ ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಮದು ಆಗ್ತಿದ್ದ ಡ್ರೈ ಫ್ರೂಟ್ಸ್​​ಗೆ ಬ್ರೇಕ್ ಬಿದ್ದಿದೆ. ಅಫ್ಘಾನಿಸ್ತಾನದಿಂದ ಆಮದಾಗ್ತಿದ್ದ ಡ್ರೈ ಫ್ರೂಟ್ಸ್​ ನಿಂತ್ತಿದ್ದರಿಂದ ಭಾರತದಲ್ಲಿ ಈಗಾಗಲೇ ಡ್ರೈ ಫ್ರೂಟ್ಸ್​ ರೇಟ್ ಹೆಚ್ಚಾಗಿದೆ. ಇದ್ರ ಮುಂದುವರೆದ ಭಾಗ ಎಂಬಂತೆ ಹೈದ್ರಬಾದ್ ಬಿರಿಯಾನಿಗೂ ರೇಟ್ ಡಬಲ್ ಆಗೋ ಸಾಧ್ಯತೆ ಹೆಚ್ಚಿದೆ.

ಒಂದು ವೇಳೆ ಭಾರತ ಹಾಗೂ ಅಫ್ಘಾನ್ ನಡುವೆ ಮತ್ತೆ ವ್ಯಾಪಾರ ವಹಿವಾಟು ಆರಂಭವಾಗದಿದ್ದರೆ, ದಾಸ್ತಾನು ಇರುವ ಒಣ ಹಣ್ಣುಗಳ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಭಾರತ ಶೇಕಡಾ 80ರಷ್ಟು ಡ್ರೈ ಫ್ರೂಟ್ಸ್​​​ಗಳನ್ನ ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿತ್ತು. ಇದೀಗ ಎಲ್ಲವು ಸ್ತಬ್ಧವಾಗಿದೆ.ಹೈದರಾಬಾದ್ ಬಿರಿಯಾನಿಯಲ್ಲಿ ಹೇರಳವಾಗಿ ಡ್ರೈಫ್ರೂಟ್ಸ್ ಹಾಗೂ ವಿವಿಧ ರೀತಿಯ ಮಸಾಲೆಗಳನ್ನು ಹಾಕಿ ತಯಾರಿಸಲಾಗುತ್ತದೆ. ಒಂದು ವೇಳೇ ಡ್ರೈಫ್ರೂಟ್ಸ್​ ರೇಟ್ ದುಪ್ಪಟ್ಟಾದ್ರೆ ಹೈದರಬಾದ್​​​ ಬಿರಿಯಾನಿಯ ಬೆಲೆ ಕೂಡ ಶೀಘ್ರದಲ್ಲೇ ಹೆಚ್ಚಾಗುವ ಸಾಧ್ಯತೆ ಅಧಿಕವಾಗಿದೆ.

ವ್ಯಾಪಾರ ವಹಿವಾಟುಗಳಿಗೆ ತಾಲಿಬಾನ್ ನಿಷೇಧ ಹೇರಿರುವ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ರಫ್ತು ಮಂಡಳಿಯ ಮಹಾ ನಿರ್ದೇಶಕ ಡಾ.ಅಜಯ್ ಸಹಾಯ್

ಪಾಕಿಸ್ತಾನ ಮಾರ್ಗವಾಗಿ ಅಫ್ಘಾನಿಸ್ತಾನದಿಂದ ಭಾರತಕ್ಕೆ ಸರಕುಗಳು ಬರುತ್ತಿದ್ದವು. ಆದರೆ ತಾಲಿಬಾನ್ ಪಾಕಿಸ್ತಾನದ ಮಾರ್ಗವಾಗಿ ಸರಕು ಸಾಗಣೆಯನ್ನು ನಿರ್ಬಂಧಿಸಿದೆ. ಇದ್ರಿಂದ ಅಫ್ಘಾನಿಸ್ತಾನದಿಂದ ಬರ್ತಿದ್ದ ಎಲ್ಲಾ ರೀತಿಯ ಆಮದು ನಿಂತು ಹೋಗಿವೆ.
ಕೊರೊನಾ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಹೆಚ್ಚಿನ ಜನರು ಡ್ರೈ ಫ್ರೂಟ್ಸ್​ ತಿನ್ನುತ್ತಿದ್ರು. ಇಂತಹ ಸಮಯದಲ್ಲಿಯೇ ಡ್ರೈ ಫ್ರೂಟ್ಸ್​ ಆಮದಾಗುವುದು ನಿಂತ್ತಿರೋದು ಗ್ರಾಹಕರ ಆಂತಕಕ್ಕೂ ಕಾರಣವಾಗಿದೆ.

2021ರಲ್ಲಿ 83 ಕೋಟಿ ಮೌಲ್ಯದ ವಸ್ತುಗಳು ಅಫ್ಘಾನ್​ಗೆ ರಫ್ತು
51 ಕೋಟಿ ಮೌಲ್ಯದ ವಸ್ತುಗಳನ್ನು ಆಮದುಮಾಡಿಕೊಂಡ ಭಾರತ
ತಾಲಿಬಾನ್​ಗಳಿಂದಾಗಿ ಭಾರತಕ್ಕೆ ಆರ್ಥಿಕ ಹೊಡೆತ?

ಅಫ್ಘಾನಿಸ್ತಾನದೊಂದಿಗೆ ಭಾರತವು ಉತ್ತಮ ವ್ಯಾಪಾರ ಸಂಬಂಧ ಹೊಂದಿದೆ. ಆದ್ರೆ ಭಾರತ ಹಾಗೂ ಅಫ್ಘಾನ್ ನಡುವಿನ ವ್ಯಾಪಾರ ಸಂಬಂಧಕ್ಕೆ ತಾಲಿಬಾನ್​ಗಳು ತಡೆಗೋಡೆ ನಿರ್ಮಿಸಿ ಬಿಟ್ಟಿದ್ದಾರೆ. ಸಕ್ಕರೆ, ಔಷಧ, ಬಟ್ಟೆ, ಟೀ, ಕಾಫಿ, ಸಾಂಬಾರ ಪದಾರ್ಥಗಳನ್ನು ಭಾರತ ಅಫ್ಘಾನ್​ಗೆ ರಪ್ತು ಮಾಡಿದ್ರೆ, ಅಲ್ಲಿಂದ ಒಣಹಣ್ಣುಗಳು ಈರುಳ್ಳಿಗಳನ್ನ ಆಮದು ಮಾಡಲಾಗ್ತಿತ್ತು.

2021 ರಲ್ಲಿ ಭಾರತ ಒಟ್ಟು 83 ಕೋಟಿ ಮೌಲ್ಯದ ವಸ್ತುಗಳನ್ನ ರಫ್ತು ಮಾಡಿದ್ರೆ, ಅಲ್ಲಿಂದ 51 ಕೋಟಿ ಮೌಲ್ಯದ ವಸ್ತುಗಳನ್ನ ಆಮದು ಮಾಡ್ಕೊಂಡಿದೆ. ಆದ್ರೆ ಇದೀಗ ತಾಲಿಬಾನ್​ಗಳು ಮಿಕಗಳಿಂದ ಇದೀಗ ಎಲ್ಲದಕ್ಕೂ ಬ್ರೇಕ್ ಬಿದ್ದಿದೆ. ಇದ್ರಿಂದ ಭಾರತದಲ್ಲಿ ಡ್ರೈ ಫ್ರೂಟ್ಸ್​ ರೇಟ್ ಹೆಚ್ಚಾಗುವ ಸಾಧ್ಯತೆ ಇದೆ, ಗ್ರಾಹಕರ ಜೇಬಿಗೂ ಕತ್ತರಿ ಬೀಳಲಿದೆ.

ಅಫ್ಘಾನಿಸ್ತಾನದಲ್ಲಿ ಭಾರತವು ಸುಮಾರು 400 ಯೋಜನೆಗಳಿಗಾಗಿ ಭಾರತವು ₹ 22,000 ಕೋಟಿ ಮೌಲ್ಯದ ಹೂಡಿಕೆ ಮಾಡಿದೆ. ಈ ಪೈಕಿ ಕೆಲ ಕಾಮಗಾರಿಗಳು ಇನ್ನೂ ಅನುಷ್ಠಾನದ ಹಂತದಲ್ಲಿವೆ. ಆದ್ರೆ ಅಫ್ಘಾನಿಸ್ತಾನದಲ್ಲಿ ಇದೀಗ ತಾಲಿಬಾನ್​ಗಳು ಸರ್ಕಾರ ರಚನೆ ಮಾಡಲು ತುದಿಗಾಲಿನಲ್ಲಿ ನಿಂತ್ತಿರೋದ್ರಿಂದ, ಭಾರತ ಮಾಡಿರುವ ಹೂಡಿಕೆಯ ಕಥೆ ಏನೋ ಅನ್ನೋ ಪ್ರಶ್ನೆ ಹುಟ್ಕೊಂಡಿದೆ.

ಒಟ್ಟಿನಲ್ಲಿ ಅಫ್ಘಾನ್​ನ ಮೇಲೆ ತಾಲಿಬಾನ್​ಗಳು ಹಿಡಿತ ಸಾಧಿಸಿರವುದು ಅಲ್ಲಿಯ ಜನರಿಗೆ ಮಾತ್ರವಲ್ಲದೇ ಇತರೆ ದೇಶಗಳ ಮೇಲೂ ಪರಿಣಾಮ ಬೀಳುವಂತ್ತಾಗಿದೆ. ಆಗಸ್ಟ್​ 31 ರ ನಂತರ ಅಫ್ಘಾನ್​ನಲ್ಲಿ ತಾಲಿಬಾನ್​ಗಳು ಸರ್ಕಾರ ರಚನೆ ಮಾಡುವು ಸಿದ್ಧತೆಯಲ್ಲಿದ್ದಾರೆ. ತಾಲಿಬಾನ್​ ಸರ್ಕಾರ ಕಟ್ಟಿದ್ಮೇಲೆ ಇನ್ನು ಯಾವ್ಯಾವ ರೀತಿಯಲ್ಲಿ ಸಮಸ್ಯೆಗಳು ಎದುರಾಗುತ್ತೋ ಕಾದು ನೋಡಬೇಕಾಗಿದೆ.

ಅಫ್ಘಾನ್​ ತಾಲಿಬಾನ್ ಹಿಡಿತಕ್ಕೆ ಸಿಕ್ಕಿದ್ಮೇಲೆ ಜಗತ್ತಿಗೆ ಒಂದಲ್ಲ ಒಂದು ರೀತಿಯಲ್ಲಿ ಸಮಸ್ಯೆ ಎದುರಾಗ್ತಾಲೆ ಇದೆ. ಇದೇ ತಾಲಿಬಾನ್​ಗಳಿಂದ ದೇಶದ ಗ್ರಾಹಕರ ಜೇಬಿಗೂ ಕತ್ತರಿ ಬೀಳುವ ಸಾಧ್ಯತೆ ಇದೆ. ತಾಲಿಬಾನ್​ಗಳಿಂದ ಇನ್ನು ಯಾವ್ಯಾವ ಸಮಸ್ಯೆಗಳು ಸೃಷ್ಟಿಯಾಗುತ್ತೋ ಗೊತ್ತಿಲ್ಲ.. ಆದ್ರೆ ತಾಲಿಬಾನ್​ಗಳಿಂದ ಸಮಸ್ಯೆ ಮಾತ್ರ ತಪ್ಪಿದಲ್ಲ.

Source: newsfirstlive.com Source link