‘ಭಾರತದ ಆಸ್ತಿ ಮೋದಿಗೆ ಸೇರಿದ್ದಲ್ಲ, ಸಾರ್ವಜನಿಕರದ್ದು’; ಸಿಎಂ ಮಮತಾ ಬ್ಯಾನರ್ಜಿ ಕಿಡಿ

‘ಭಾರತದ ಆಸ್ತಿ ಮೋದಿಗೆ ಸೇರಿದ್ದಲ್ಲ, ಸಾರ್ವಜನಿಕರದ್ದು’; ಸಿಎಂ ಮಮತಾ ಬ್ಯಾನರ್ಜಿ ಕಿಡಿ

ಕೋಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ರಾಷ್ಟ್ರೀಯ ನಗದೀಕರಣ ಯೋಜನೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ಮಮತಾ ಬ್ಯಾನರ್ಜಿ, ರಾಷ್ಟ್ರೀಯ ನಗದೀಕರಣ ಯೋಜನೆ (NMP) ಆಘಾತಕಾರಿ ನೀತಿ ಎಂದಿದ್ದಾರೆ.

ಬಿಜೆಪಿ ದೇಶದ ಆಸ್ತಿಗಳನ್ನು ಮಾರಾಟ ಮಾಡುತ್ತಿದೆ. ಇದರಿಂದ ಸಿಗುವ ಹಣವನ್ನು ಚುನಾವಣೆಗಳಲ್ಲಿ ವಿರೋಧ ಪಕ್ಷಗಳ ವಿರುದ್ಧ ಬಳಕೆ ಮಾಡುತ್ತದೆ. ಅದಕ್ಕಾಗಿಯೇ ರಾಷ್ಟ್ರೀಯ ನಗದೀಕರಣ ಯೋಜನೆ ಜಾರಿ ಮಾಡಲಾಗಿದೆ ಎಂದು ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.

ಕೇಂದ್ರ ಸರ್ಕಾರದ ಈ ನಿರ್ಧಾರವನ್ನು ನಾವು ಖಂಡಿಸುತ್ತೇವೆ. ದೇಶದ ಆಸ್ತಿ ಸಾರ್ವಜನಿಕರಿಗೆ ಸೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅಥವಾ ಬಿಜೆಪಿಯದ್ದಲ್ಲ. ಕೇಂದ್ರ ಸರ್ಕಾರ ತಮ್ಮ ಇಚ್ಛೆಯಂತೆ ದೇಶದ ಆಸ್ತಿ ಮಾರಾಟ ಮಾಡುವಂತಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬಿಜೆಪಿ ತೆಕ್ಕೆಗೆ ಮೈಸೂರು ಮೇಯರ್ ಪಟ್ಟ.. ಕಮಲದ ಕಾರ್ಯತಂತ್ರ ಯಶಸ್ವಿಯಾಗಿದ್ದು ಹೇಗೆ..?

ದೇಶದ ಆಸ್ತಿ ಮಾರಾಟ ಮಾಡಲು ಹೊರಟ ಬಿಜೆಪಿಗೆ ನಾಚಿಕೆಯಾಗಬೇಕು. ರಾಷ್ಟ್ರದ ಆಸ್ತಿ ಮಾರಾಟ ಮಾಡುವ ಹಕ್ಕು ಬಿಜೆಪಿಗೆ ಯಾರೂ ನೀಡಿಲ್ಲ. ಈ ಜನವಿರೋಧಿ ನೀತಿ ವಿರುದ್ಧ ಇಡೀ ದೇಶ ಹೋರಾಡಬೇಕಿದೆ ಎಂದ ದೀದಿ, ಇತ್ತೀಚೆಗೆ ಸೋಮವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಿದ ರಾಷ್ಟ್ರೀಯ ನಗದೀಕರಣ ಯೋಜನೆಗೆ ವಿರೋಧ ತೋರಿದರು.

Source: newsfirstlive.com Source link