ರಸ್ತೆ ಮಧ್ಯೆಯೇ ದಿಢೀರ್​​ ಕಾಣಿಸಿಕೊಂಡ ದೈತ್ಯಾಕಾರದ ಹಾವು; ಒಂದು ಕ್ಷಣ ದಂಗಾದ ಪ್ರಯಾಣಿಕರು

ರಸ್ತೆ ಮಧ್ಯೆಯೇ ದಿಢೀರ್​​ ಕಾಣಿಸಿಕೊಂಡ ದೈತ್ಯಾಕಾರದ ಹಾವು; ಒಂದು ಕ್ಷಣ ದಂಗಾದ ಪ್ರಯಾಣಿಕರು

ಸುಮಾರು 10 ಅಡಿ ಉದ್ದದ ದೈತ್ಯಾಕಾರದ ಅನಕೊಂಡವೊಂದು ರಸ್ತೆ ದಾಟಿದ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಈ ದೈತ್ಯಾಕಾರದ ಅನಕೊಂಡ ರಸ್ತೆ ದಾಟುತ್ತಿದ್ದ ಪರಿಣಾಮ ಕೆಲಹೊತ್ತು ಭಾರೀ ಟ್ರಾಫಿಕ್​​ ಜಾಮ್​​ ಉಂಟಾಗಿದೆ. ಹೀಗಾಗಿ ಸುಮಾರು ಹತ್ತು ನಿಮಿಷಗಳ ಕಾಲ ವಾಹನಗಳು ಎಲ್ಲವೂ ರಸ್ತೆಯ ಮಧ್ಯೆಯಲ್ಲೇ ನಿಂತಿದ್ದವು. ಹೀಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಅನಕೊಂಡ ದಾಟುತ್ತಿರುವುದು ಯಾರದ್ದೋ ಮೊಬೈಲಿನಲ್ಲಿ ಸೆರೆಯಾಗಿದ್ದು, ವಿಡಿಯೋ ಭಾರೀ ವೈರಲ್​​ ಆಗಿದೆ.

 

View this post on Instagram

 

A post shared by Animals Venture 🐾 (@animalsventure)

ಎಂದಿನಂತೆಯೇ ಇಂದು ರಸ್ತೆಯಲ್ಲಿ ವಾಹನಗಳು ಸಾಗುತ್ತಿದ್ದವು. ಈ ವೇಳೆ ಅನಕೊಂಡವೊಂದು ರಸ್ತೆ ಮಧ್ಯೆಯೇ ದಿಢೀರ್​​ ಕಾಣಿಸಿಕೊಂಡಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ದಾಟಲು ದೈತ್ಯ ಹಾವು ಮುಂದಾಗಿದೆ. ಇದನ್ನು ನೋಡಿದ ಕೂಡಲೇ ವಾಹನ ಸವಾರರು ಒಂದು ಕ್ಷಣ ದಂಗಾಗಿ ಹೋಗಿದ್ದಾರೆ.

ಇದನ್ನೂ ಓದಿ: ಅಘ್ಘಾನ್​ ಕ್ಯಾಬಿನೆಟ್ ಸಚಿವನೀಗ ಪಿಜ್ಜಾ ಡೆಲಿವರಿ ಬಾಯ್; ಆಕ್ಸ್​ಫರ್ಡ್​ ಪದವೀಧರನಿಗೆ ಎಂಥಾ ಸ್ಥಿತಿ

ದೈತ್ಯಾಕಾರದ ಹಾವು ಯಾರಿಗೂ ಯಾವುದೇ ಹಾನಿ ಮಾಡದೆ ರಸ್ತೆ ದಾಟಿದೆ. ಇದಕ್ಕೆ ವಾಹನ ಸವಾರರು ಕೂಡ ಅನುವು ಮಾಡಿಕೊಟ್ಟಿದ್ದಾರೆ. ಹಾವು ರಸ್ತೆ ದಾಟುವತನಕ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸಿದ್ದಾರೆ. ಈಗ ಪ್ರಯಾಣಿಕರ ನಡೆಗೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Source: newsfirstlive.com Source link