ತಾಲಿಬಾನಿಗಳಿಂದ ಬೆದರಿಕೆ; ತನ್ನ ಪ್ರಜೆಗಳಿಗೆ ಕಾಬೂಲ್ ಏರ್ಪೋರ್ಟ್ ತೊರೆಯುವಂತೆ ಹೇಳಿದ ಅಮೆರಿಕ

ತಾಲಿಬಾನಿಗಳಿಂದ ಬೆದರಿಕೆ; ತನ್ನ ಪ್ರಜೆಗಳಿಗೆ ಕಾಬೂಲ್ ಏರ್ಪೋರ್ಟ್ ತೊರೆಯುವಂತೆ ಹೇಳಿದ ಅಮೆರಿಕ

ಕಾಬೂಲ್​: ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ವಿದೇಶಗಳು ತಮ್ಮ ದೇಶದ ಪ್ರಜೆಗಳನ್ನ ಕಾಬೂಲ್ ವಿಮಾನ ನಿಲ್ದಾಣದಿಂದ ವಾಪಸ ಕರೆಸಿಕೊಳ್ಳುತ್ತಿವೆ. ಆದ್ರೆ ಇದೀಗ ಈ ಪ್ರಕ್ರಿಯೆಗೂ ಸಂಚಕಾರ ಎದುರಾಗಿದೆ.

ಇದನ್ನೂ ಓದಿ: ಅಫ್ಘಾನ್ ಬೆಳವಣಿಗೆ ಬೆನ್ನಲ್ಲೇ ಪಾಕ್​ ತೆಹರಿಕ್ ಇ ತಾಲಿಬಾನ್​ಗೆ ಮತ್ತೆ ರೆಕ್ಕೆ ಪುಕ್ಕ..!

ಕಾಬೂಲ್ ವಿಮಾನ ನಿಲ್ದಾಣದತ್ತ ಬರಬೇಡಿ ಎಂದು ಅಮೆರಿಕ ಸರ್ಕಾರ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ. ಇದಕ್ಕೆ ಅಮೆರಿಕ ಭದ್ರತಾ ದೃಷ್ಟಿಯಿಂದ ಈ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದೆ. ಯುಎಸ್ ಪ್ರಜೆಗಳು ಯಾರೂ ಕಾಬೂಲ್ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಬಂದು ಕಾಯಬೇಡಿ.. ಯಾವಾಗ US ಎಂಬಸ್ಸಿಯವರು ವೈಯಕ್ತಿಕವಾಗಿ ಕರೆ ಮಾಡುತ್ತಾರೋ ಆಗ ಮಾತ್ರ ವಿಮಾನ ನಿಲ್ದಾಣದ ಬಳಿ ಬನ್ನಿ ಎಂದು ಅಮೆರಿಕದ ರಾಯಭಾರಿ ಕಚೇರಿ ಹೇಳಿದೆ.

ಇದನ್ನೂ ಓದಿ: ತಾಲಿಬಾನಿಗಳಿಗೆ ಮರ್ಮಾಘಾತ; ಹಣಕಾಸಿನ ನೆರವು ತಡೆಹಿಡಿದ ವಿಶ್ವಬ್ಯಾಂಕ್

ಕಾಬೂಲ್ ವಿಮಾನ ನಿಲ್ದಾಣದ ಬಳಿ ತಾಲಿಬಾನಿಗಳು ಇದ್ದು ಹಿಂಸಾಚಾರ ಹೆಚ್ಚಿರುವ ಹಿನ್ನೆಲೆ ಯುಎಸ್ ತನ್ನ ದೇಶದ ಪ್ರಜೆಗಳ ಹಿತಾಸಕ್ತಿ ಕಾಯಲು ಈ ಆದೇಶ ಹೊರಡಿಸಿದೆ ಎನ್ನಲಾಗಿದೆ.

Source: newsfirstlive.com Source link