ಶಾಲೆ ಆರಂಭದ ಬೆನ್ನಲ್ಲೇ ಶಾಕಿಂಗ್ ನ್ಯೂಸ್.. ಅಕ್ಟೋಬರ್​ನಲ್ಲಿ ಉತ್ತುಂಗಕ್ಕೇರುತ್ತಂತೆ ಕೊರೊನಾ ಸೋಂಕು

ಶಾಲೆ ಆರಂಭದ ಬೆನ್ನಲ್ಲೇ ಶಾಕಿಂಗ್ ನ್ಯೂಸ್.. ಅಕ್ಟೋಬರ್​ನಲ್ಲಿ ಉತ್ತುಂಗಕ್ಕೇರುತ್ತಂತೆ ಕೊರೊನಾ ಸೋಂಕು

ಬೆಂಗಳೂರು: ಅಕ್ಟೋಬರ್ ಕೊನೇ ವಾರದಲ್ಲಿ 3 ನೇ ಅಲೆ ಉತ್ತುಂಗಕ್ಕೇರಲಿದೆ ಎಂದು ಪ್ರಧಾನಿ ಕಚೇರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವರದಿ ಸಲ್ಲಿಸಿದೆ. ರಾಜ್ಯ ಸರ್ಕಾರ ಶಾಲೆ, ಕಾಲೇಜು ಆರಂಭಿಸಿದ ಬೆನ್ನಲ್ಲೇ ಈ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ.

ದೇಶದಾದ್ಯಂತ ವ್ಯಾಪಕ ಸೋಂಕು ಹರಡಲಿದೆ.. ಮೂರನೇ ಅಲೆ ಬಗ್ಗೆ ಎಚ್ಚರಿಕೆಯಿಂದ ಇರಬೇಕು.. ಅಕ್ಟೋಬರ್​​ ಕೊನೆ ವಾರದಲ್ಲಿ 3ನೇ ಅಲೆ ಉತ್ತುಂಗಕ್ಕೇರಲಿದೆ. 3ನೇ ಅಲೆಯಲ್ಲಿ ವಯಸ್ಕರ ಜತೆ ಮಕ್ಕಳಿಗೂ ಸೋಂಕು ಹೆಚ್ಚುವ ಸಾಧ್ಯತೆ ಇದೆ. 3ನೇ ಅಲೆ ಎದುರಿಸುವಷ್ಟು ವೈದ್ಯರು, ಸಿಬ್ಬಂದಿ, ವೆಂಟಿಲೇಟರ್​​ ಆ್ಯಂಬುಲೆನ್ಸ್ ಇಲ್ಲ. ಮಕ್ಕಳಿಗೂ ತಕ್ಷಣವೇ ಕೋವಿಡ್​ ವ್ಯಾಕ್ಸಿನ್ ನೀಡಬೇಕು. ಗಂಭೀರ ಕಾಯಿಲೆ ಇರೋ ಮಕ್ಕಳು, ಅಂಗವಿಕಲರಿಗೆ ಲಸಿಕೆ ನೀಡಬೇಕು ಎಂದ ಕೇಂದ್ರ ಸರ್ಕಾರಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ ವರದಿಯಲ್ಲಿ ಸಲಹೆ ನೀಡಿದೆ.

Source: newsfirstlive.com Source link