ಟಾಲಿವುಡ್​ಗೂ ತಟ್ಟಿದ ಡ್ರಗ್ಸ್ ಕಂಟಕ; ರಣಾ ದಗ್ಗುಬಾಟಿ, ರಕುಲ್ ಪ್ರೀತಿ ಸೇರಿ 10 ಮಂದಿಗೆ ಸಮನ್ಸ್

ಟಾಲಿವುಡ್​ಗೂ ತಟ್ಟಿದ ಡ್ರಗ್ಸ್ ಕಂಟಕ; ರಣಾ ದಗ್ಗುಬಾಟಿ, ರಕುಲ್ ಪ್ರೀತಿ ಸೇರಿ 10 ಮಂದಿಗೆ ಸಮನ್ಸ್

ಹೈದರಾಬಾದ್: ಸ್ಯಾಂಡಲ್​ವುಡ್​ ಬೆನ್ನಲ್ಲೇ ಟಾಲಿವುಡ್​ನ ಟಾಪ್​ ನಟ ನಟಿಯರಿಗೆ ಡ್ರಗ್ಸ್ ಕಂಟಕ ಎದುರಾಗಿದೆ. ನಟಿ ರಕುಲ್​ ಪ್ರೀತ್ ಸಿಂಗ್ ಹಾಗೂ ಬಾಹುಬಲಿಯ ಖ್ಯಾತಿಯ ರಾಣ ದಗ್ಗುಬಾಟಿ ಸೇರಿ ಒಟ್ಟು 10 ಮಂದಿಗೆ ವಿಚಾರಣೆಗೆ ಹಾಜರಾಗುವಂತೆ ಇ.ಡಿ ಸಮನ್ಸ್ ನೀಡಿದೆ.

blank
ಡ್ರಗ್ಸ್​ ಪ್ರಕರಣದಲ್ಲಿ ಮನಿ ಲ್ಯಾಂಡರಿಂಗ್​ನಲ್ಲಿ ಭಾಗಿಯಾಗಿದ್ದ ಶಂಕೆ ಹಿನ್ನೆಲೆ ಟಾಪ್​ ನಟಿಯರಾದ ರಕುಲ್​ ಪ್ರೀತ್​ ಸಿಂಗ್​, ಚಾರ್ಮಿ ಕೌರ್​, ಹಾಗೂ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿಗೆ ಸಮನ್ಸ್​ ನೀಡಲಾಗಿದೆ. ಅಲ್ಲದೆ ವಿಕ್ರಮಾರ್ಕುಡು ಖ್ಯಾತಿಯ ನಟ ರವಿ ತೇಜ ಹಾಗೂ ತೆಲುಗಿನ ಟಾಪ್​ ನಿರ್ದೇಶಕ ಪುರಿ ಜಗನ್ನಾಥ್​ಗೂ ಸಮನ್ಸ್ ನೀಡಲಾಗಿದೆ.

 

Source: newsfirstlive.com Source link