ಸ್ವಂತ ಪತಿಗೆ ಬರೋಬ್ಬರಿ ₹4 ಕೋಟಿ ಹಣ ಪಂಗನಾಮ ಹಾಕಿ ಎಸ್ಕೇಪ್ ಆದ ಪತ್ನಿ

ಸ್ವಂತ ಪತಿಗೆ ಬರೋಬ್ಬರಿ ₹4 ಕೋಟಿ ಹಣ ಪಂಗನಾಮ ಹಾಕಿ ಎಸ್ಕೇಪ್ ಆದ ಪತ್ನಿ

ಬೆಂಗಳೂರು: ಪತ್ನಿಯೊಬ್ಬಳು ಸ್ವಂತ ಪತಿಗೆ ಬರೋಬ್ಬರಿ 4 ಕೋಟಿ ರೂ ಪಂಗನಾಮ ಹಾಕಿ ಎಸ್ಕೇಪ್ ಆಗಿರುವ ಘಟನೆ ನಗರದಲ್ಲಿ ನಡೆದಿದೆ. ಬೆಂಗಳೂರಿನ ಉದ್ಯಮಿ ಕೃಷ್ಣಾ ಎಂಬುವರಿಗೆ ಪತ್ನಿ ವಂಚಿಸಿದ್ದಾರೆ. 60 ವರ್ಷದ ಪತ್ನಿ ವಿರುದ್ಧ ಇದೀಗ ಪತಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಕಳೆದ ಮೂರು ವರ್ಷಗಳಿಂದ ದಂಪತಿ ಪ್ರತ್ಯೇಕವಾಗಿ ವಾಸವಿದ್ದರು. ಈ ನಡುವೆ ವಿಚ್ಚೇದನಕ್ಕಾಗಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಜೊತೆಗೆ ಗಂಡನ ವಿರುದ್ಧ ಕೋರ್ಟ್ ನಲ್ಲಿ ಪತ್ನಿ ಗಂಡ ನನಗೆ ಟಾರ್ಚರ್ ಕೊಡ್ತಾನೆ ಅಂತ ಕೇಸ್ ಕೂಡ ಹಾಕಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಪ್ರೀತಿ ನಿರಾಕರಣೆ; ಯುವತಿಯನ್ನು ಅಡ್ಡಗಟ್ಟಿ ತೊಡೆ, ಕುತ್ತಿಗೆಗೆ ಚಾಕುವಿನಿಂದ ಇರಿದ ಪಾಗಲ್​​ ಪ್ರೇಮಿ

ಈ ವೇಳೆ ಕೇಸ್ ವಾಪಸ್ ತೆಗೆದುಕೊಂಡು ಡೈವೋರ್ಸ್ ಕೊಡು ಅಂತ ಪತಿ ಹೇಳಿದ್ದರಂತೆ. 4 ಕೋಟಿ ರೂ ಕೊಟ್ರೆ ಎಲ್ಲವನ್ನ ಕ್ಲೀಯರ್ ಮಾಡ್ತೀನಿ ಅಂತ ಪತ್ನಿ ಹೇಳಿದ್ದರಂತೆ. ಅದರಂತೆ ಡಿಡಿ ಮೂಲಕ ಪತಿ 4 ಕೋಟಿ ಕೊಟ್ಟಿದ್ದರಂತೆ ಇದೀಗ ಕೇಸ್ ವಾಪಸ್ ಪಡೆದುಕೊಳ್ಳದೇ ಪತ್ನಿ ಎಸ್ಕೇಪ್ ಆಗಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.

ಇನ್ನು ಕೋರ್ಟ್ ವಿಚಾರಣೆಗೂ ಸಹ ಮಹಿಳೆ ಹಾಜರಾಗಿಲ್ಲ. ಸದ್ಯ ಬೆಂಗಳೂರು ಬಿಟ್ಟು ಮಹಿಳೆ ಬೇರೆಡೆ ಹೋಗಿದ್ದು ಆಕೆಯನ್ನ ಕರೆತಂದು ಹಣ ಕೊಡಿಸುವಂತೆ ಪತಿ ಕೃಷ್ಣಾ ಬಸವನಗುಡಿ ಠಾಣೆಗೆ ದೂರು ನೀಡಿದ್ದಾರೆ.

Source: newsfirstlive.com Source link