ಲಾರ್ಡ್ಸ್​​​ನಲ್ಲಿ ಇಂಡೋ-ಇಂಗ್ಲೆಂಡ್​​ ಸ್ಲೆಡ್ಜಿಂಗ್​​ ವಾರ್​.. ಬೂಮ್ರಾ-ಆ್ಯಂಡರ್​ಸನ್​ ಮಧ್ಯೆ ಮಾತಿನ ಚಕಮಕಿ

ಲಾರ್ಡ್ಸ್​​​ನಲ್ಲಿ ಇಂಡೋ-ಇಂಗ್ಲೆಂಡ್​​ ಸ್ಲೆಡ್ಜಿಂಗ್​​ ವಾರ್​.. ಬೂಮ್ರಾ-ಆ್ಯಂಡರ್​ಸನ್​ ಮಧ್ಯೆ ಮಾತಿನ ಚಕಮಕಿ

ಭಾರತ – ಇಂಗ್ಲೆಂಡ್​​​ ನಡುವಿನ 2ನೇ ಟೆಸ್ಟ್​ ಪಂದ್ಯ ಹೆಚ್ಚು ಸುದ್ದಿಯಾಗಿದ್ದೇ ಸ್ಲೆಡ್ಜಿಂಗ್​​ನಿಂದ…! ಇದೀಗ ಆ ಪಂದ್ಯ ಮುಗಿದು 10 ದಿನಗಳೇ ಉರುಳಿವೆ. ಆದ್ರೂ ಆ ಘಟನೆಗಳ ಕಾವು ಇನ್ನೂ ಇಳಿದಿಲ್ಲ.. ಅಂದು ಆಟಗಾರರ ನಡುವಿನ ಮಾತಿನ ಚಕಮಕಿಗೆ ಮೈದಾನ ಮಾತ್ರವಲ್ಲ… ಐತಿಹಾಸಿಕ ಲಾರ್ಡ್ಸ್​​ ಸ್ಟೇಡಿಯಂನ ಲಾಂಗ್​ ರೂಮ್​ ಕೂಡ ಸಾಕ್ಷಿಯಾಗಿತ್ತಂತೆ.

ಭಾರತ – ಇಂಗ್ಲೆಂಡ್​​​ ನಡುವೆ ಕ್ರಿಕೆಟ್​ ಕಾಶಿ ಲಾರ್ಡ್ಸ್​​ನಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯ ಹೆಚ್ಚು ಸುದ್ದಿಯಾಗಿದ್ದೇ ಸ್ಲೆಡ್ಜಿಂಗ್​​ನಿಂದ..! ಪಂದ್ಯದ ಮೊದಲ ದಿನದಾಟದಿಂದಲೂ ಸೌಮ್ಯ ಸ್ವರೂಪದಲ್ಲಿದ್ದ ತಿಕ್ಕಾಟ, 5ನೇ ದಿನದಾಟದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದು ನಿಮಗೂ ಗೊತ್ತಿದೆ. ಆದ್ರೆ, ಟಾಕ್​ ವಾರ್​​​ ತೀವ್ರ ಸ್ವರೂಪಕ್ಕೆ ಏರೋದಕ್ಕೆ 3ನೇ ದಿನದಾಟದ ಅಂತ್ಯದ ವೇಳೆ ನಡೆದ ಘಟನೆ ಕಾರಣ ಅನ್ನೋದು ಇದೀಗ ರಿವೀಲ್​ ಆಗಿದೆ.

ಜಸ್​​​​​ಪ್ರಿತ್​​ ಬೂಮ್ರಾ- ಜೇಮ್ಸ್ ಆ್ಯಂಡರ್​​ಸನ್​​ ನಡುವೆ ಆರಂಭವಾದ ಮಾತಿನ ಚಕಮಕಿ ಇಡೀ ಪಂದ್ಯದುದ್ದಕ್ಕೂ ನಡೆದಿತ್ತು. 3ನೇ ದಿನದಾಟದ ಅಂತಿಮ ಹಂತದಲ್ಲಿ ಬೂಮ್ರಾ, ಆ್ಯಂಡರ್ಸನ್​ ಮೇಲೆ ಬೌನ್ಸರ್​ಗಳ ಸುರಿಮಳೆಗೈದಿದ್ರು. ಇದರಿಂದ ರೊಚ್ಚಿಗೆದ್ದಿದ್ದ ಆ್ಯಂಡರ್ಸನ್​ ಔಟಾದ ಬಳಿಕ ಬೂಮ್ರಾ ಜೊತೆ ಟಾಕ್​ವಾರ್ ನಡೆಸಿದ್ರು. ಈ ಟಾಕ್​ವಾರ್​​ ಮೈದಾನದಲ್ಲೇ ಅಂತ್ಯ ಕಾಣ್ತು ಎಂದು ನೀವು ಅಂದುಕೊಂಡಿರಬಹುದು. ಆದ್ರೆ, ಅದು ಅಲ್ಪ ವಿರಾಮವಷ್ಟೇ..!

ಲಾರ್ಡ್ಸ್​​ ಲಾಂಗ್​ ರೂಮ್​​​ನಲ್ಲಿ ನಡೆದಿತ್ತಂತೆ ಜೋರು ಗಲಾಟೆ..!
ಕೂಲ್​ ರೂಟ್​​ VS ಅಗ್ರೆಸ್ಸಿವ್​ ವಿರಾಟ್​ ನಡುವೆ ಟಾಕ್​ವಾರ್​..!

ಯೆಸ್​​..! ಮೈದಾನದಿಂದ ಡ್ರೆಸ್ಸಿಂಗ್​ ರೂಮ್​ನಡೆಗೆ ಹೆಜ್ಜೆ ಹಾಕುವಾಗ ಈ ಟಾಕ್​ ವಾರ್​ ತೀವ್ರ ಸ್ವರೂಪ ಪಡೆದುಕೊಂಡಿತ್ತಂತೆ. ಇನ್​ಫ್ಯಾಕ್ಟ್​ ಲಾರ್ಡ್ಸ್​​ ಸ್ಟೇಡಿಯಂನ ವಿಶೇಷ ಸ್ಥಳ ಎಂದೇ ಗುರುತಿಸಲಾಗಿರೋ ಲಾಂಗ್​ ರೂಮ್​ ಈ ಟಾಕ್​ವಾರ್​ಗೆ ಸಾಕ್ಷಿಯಾಗಿತ್ತಂತೆ. ಉಭಯ ತಂಡಗಳ ನಾಯಕರುಗಳಾದ ಜೋ ರೂಟ್​, ವಿರಾಟ್​ ಕೊಹ್ಲಿ ಇಲ್ಲಿ ಕಿತ್ತಾಡಿಕೊಂಡಿದ್ರು ಅನ್ನೋ ಸುದ್ದಿ ಈಗ ಹೊರ ಬಿದ್ದಿದೆ.

ಲಾರ್ಡ್ಸ್​​​​​​​​ನ ಲಾಂಗ್ ರೂಮ್ ಸಾಮಾನ್ಯವಾಗಿ MCC ಸದಸ್ಯರಿಂದ ತುಂಬಿರುತ್ತದೆ. ಹಾಗಾಗಿ ಎರಡು ತಂಡಗಳು ಬೇರೆ ಬೇರೆ ಮೆಟ್ಟಿಲುಗಳ ಮೂಲಕ ತಮ್ಮ ಡ್ರೆಸ್ಸಿಂಗ್ ರೂಮ್‌ಗಳಿಗೆ ಪ್ರತ್ಯೇಕವಾಗಿ ಹೋಗಬೇಕಾಗುತ್ತವೆ. ಆದರೆ ಕೋವಿಡ್ -19 ನಿರ್ಬಂಧಗಳಿಂದಾಗಿ ಸದಸ್ಯರಿಗೆ ಈ ಪಂದ್ಯದ ವೇಳೆ ಲಾಂಗ್ ರೂಮ್ ಪ್ರವೇಶವನ್ನ ನಿಷೇಧಿಸಲಾಗಿತ್ತು. ಈ ವೇಳೆಯೇ ಗಲಾಟೆ ನಡೆದಿದೆ ಎನ್ನಲಾಗ್ತಿದೆ. ಕೊನೆಯ ಎರಡು ದಿನಗಳಲ್ಲಿ ಟೀಮ್​ ಇಂಡಿಯಾ ಆಟಗಾರರು ಅಗ್ರೆಸ್ಸೀವ್​ ಮೂಡ್​ಗೆ ಟ್ಯೂನ್​ ಆಗೋಕೆ ಇದೇ ಕಾರಣ ಎಂದು ಇದೀಗ ವಿಶ್ಲೇಷಿಸಲಾಗ್ತಿದೆ.

Source: newsfirstlive.com Source link