ಮೈಸೂರು ಗ್ಯಾಂಗ್ ರೇಪ್ ಕೇಸ್: ಮೂವರು ಶಂಕಿತರನ್ನ ಬಂಧಿಸಿದ ಪೊಲೀಸ್

ಮೈಸೂರು ಗ್ಯಾಂಗ್ ರೇಪ್ ಕೇಸ್: ಮೂವರು ಶಂಕಿತರನ್ನ ಬಂಧಿಸಿದ ಪೊಲೀಸ್

ಮೈಸೂರು: ಮೈಸೂರಿನಲ್ಲಿ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಶಂಕಿತರನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಕೃತ್ಯವೆಸಗಿದ ಸ್ಥಳದಲ್ಲಿ ದುಷ್ಕರ್ಮಿಗಳು ಮದ್ಯ ಸೇವನೆ ಮಾಡಿದ್ದರು.. ಹೀಗಾಗಿ ಪೊಲೀಸರು ವೈನ್ಸ್ ಶಾಪ್​ಗಳ ಜಾಡುಹಿಡಿದಿದ್ದಾರಂತೆ. ಆಲನಹಳ್ಳಿಯ ವೈನ್ಸ್ ಶಾಪ್​ನಲ್ಲಿ ಮದ್ಯ ಖರೀದಿಸಿದ್ದ ದೃಶ್ಯದ ಆಧಾರದ ಮೇಲೆ ಪೊಲೀಸರು ಸದ್ಯ ಮೂವರು ಶಂಕಿತರನ್ನ ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತರು ಹತ್ತಕ್ಕೂ ಹೆಚ್ಚು ತನಿಖಾ ತಂಡಗಳನ್ನ ರಚಿಸಿದ್ದಾರೆ ಎನ್ನಲಾಗಿದೆ.
ಇನ್ನು ಇಂದು ಗೃಹ ಸಚಿವರು ಹಾಗೂ ಮಹಿಳಾ ಆಯೋಗದ ಅಧಿಕಾರಿಗಳು ಮೈಸೂರಿಗೆ ಭೇಟಿ ನೀಡಲಿದ್ದಾರಂತೆ.

Source: newsfirstlive.com Source link