ಕೇರಳ ಮಾಡೆಲ್ ಕೊಟ್ಟ ಪೆಟ್ಟು; ದೇಶದಲ್ಲಿ ಒಂದೇ ದಿನ ಮತ್ತೆ 46 ಸಾವಿರ ಕೊರೊನಾ ದಾಖಲು

ಕೇರಳ ಮಾಡೆಲ್ ಕೊಟ್ಟ ಪೆಟ್ಟು; ದೇಶದಲ್ಲಿ ಒಂದೇ ದಿನ ಮತ್ತೆ 46 ಸಾವಿರ ಕೊರೊನಾ ದಾಖಲು

ನವದೆಹಲಿ: ದೇಶಾದ್ಯಂತ ಕೊರೋನಾ ಆರ್ಭಟ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ ಸುಮಾರು 46,164 ಹೊಸ ಕೊರೋನಾ ಕೇಸುಗಳು ದಾಖಲಾಗಿವೆ. ಅಲ್ಲದೇ ಒಂದೇ ದಿನದ ಮಾರಕ ಕೊರೋನಾಗೆ 607 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್​​ ಬುಲೆಟಿನ್​​ನಿಂದ ತಿಳಿದು ಬಂದಿದೆ.

ಇನ್ನು, ಕೇವಲ ಕೇರಳದಲ್ಲೇ ಒಂದೇ ದಿನದಲ್ಲಿ 31,445 ಕೇಸ್​​ ದಾಖಲಾಗಿದೆ. ಜತೆಗೆ 215 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು, ಕೇರಳ ಮಾಡೆಲ್​​​ ತಲೆಕೆಳಗಾಗಿದೆ. ಇದರಿಂದ ಇಡೀ ಭಾರತದಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆಗಳಿವೆ.

ದೇಶದಲ್ಲಿ ಇದವರೆಗೂ 3,25,58,530 ಕೇಸ್​​ ಪತ್ತೆಯಾಗಿವೆ. 3,17,88,440 ಮಂದಿ ಕೊರೋನಾದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಅಲ್ಲದೇ 3,33,725 ಸಕ್ರಿಯ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 436365ಕ್ಕೆ ಏರಿಕೆಯಾಗಿದೆ. ಒಟ್ಟು ಭಾರತದಲ್ಲಿ ಇಲ್ಲಿಯತನಕ 60,38,46,475 ಮಂದಿಗೆ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ಮೂರನೇ ಅಲೆ ಬಂದೇ ಬಿಡ್ತಾ?; ಇಡೀ ದೇಶಕ್ಕೆ ಶಾಕ್​​ ಕೊಟ್ಟ ಕೇರಳ; ಏನಿದು ಕಥೆ?

Source: newsfirstlive.com Source link