ಸ್ಟ್ರಾಂಗ್​​ ಕಮ್​​ಬ್ಯಾಕ್​​ಗೆ ಎಂ​​.ಎಸ್​. ಧೋನಿ ಸಜ್ಜು.. ಎದುರಾಳಿಗಳಿಗೆ ಸ್ಟ್ರಾಂಗ್​ ಮೆಸೇಜ್​ ರವಾನೆ

ಸ್ಟ್ರಾಂಗ್​​ ಕಮ್​​ಬ್ಯಾಕ್​​ಗೆ ಎಂ​​.ಎಸ್​. ಧೋನಿ ಸಜ್ಜು.. ಎದುರಾಳಿಗಳಿಗೆ ಸ್ಟ್ರಾಂಗ್​ ಮೆಸೇಜ್​ ರವಾನೆ

14ನೇ ಆವೃತ್ತಿಯ ಐಪಿಎಲ್​ನ​ ದ್ವಿತೀಯಾರ್ಧದ ಪಂದ್ಯಗಳಿಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ದುಬೈ ತಲುಪಿರುವ ಚೆನ್ನೈ ಸೂಪರ್​ ಕಿಂಗ್ಸ್​​​ ಭರ್ಜರಿ ಅಭ್ಯಾಸ ನಡೆಸ್ತಾ ಇದೆ. ಅದರಲ್ಲೂ ನಾಯಕ ಎಮ್​ಎಸ್.​​ ಧೋನಿ ನೆಟ್ಸ್​ನಿಂದಲೇ ಎದುರಾಳಿಗಳಿಗೆ ಸ್ಟ್ರಾಂಗ್​ ಮೆಸೇಜ್​ ರವಾನಿಸಿದ್ದಾರೆ.

ಅಸಲಿ ಪಿಕ್ಚರ್​​ ಅಬಿ ಬಾಕಿ ಹೇ..! ಇದು ಐಪಿಎಲ್​ ಜಾಹೀರಾತಿನಲ್ಲಿ ಎಮ್​​.ಎಸ್​. ಧೋನಿ ಹೇಳಿರೋ ಮಾತು. ಜಾಹೀರಾತಿನಲ್ಲಿ ಆಡಿದ ಮಾತಿನಂತೆ ರಸದೌತಣ ಬಡಿಸೋಕೆ ಮಾಹಿ ಸನ್ನದ್ಧರಾಗಿದ್ದಾರೆ.. ಈ ಬಾರಿ ಯುಎಇನಲ್ಲಿ ಹೆಲಿಕಾಫ್ಟರ್ ಟೇಕಾಫ್ ಆಗೋದು ಪಕ್ಕಾ..!
ಹೌದು..! ಐಪಿಎಲ್ ದ್ವಿತೀಯಾರ್ಧಕ್ಕಾಗಿ ಉಳಿದೆಲ್ಲಾ ತಂಡಗಳಿಗಿಂತ ಮುಂಚೆ ಯುಎಇನಲ್ಲಿ ಸಿಎಸ್​​ಕೆ ಭರ್ಜರಿ ಸಮರಾಭ್ಯಾಸ ನಡೆಸ್ತಿದೆ. ಮಿಸ್ಟರ್​ ಕೂಲ್ ಧೋನಿ ಕೂಡ ಅಭ್ಯಾಸದಲ್ಲಿ ನಿರತರಾಗಿದ್ದು, ಐಪಿಎಲ್​ಗೆ ಭರ್ಜರಿ ತಯಾರಿ ನಡೆಸ್ತಿದ್ದಾರೆ. ನೆಟ್ಸ್​ನಲ್ಲಿ ಅಬ್ಬರಿಸಿರುವ ಮಿಸ್ಟರ್​ ಕೂಲ್, ಎದುರಾಳಿ ​ ತಂಡಗಳಿಗೆ ಸ್ಟ್ರಾಂಗ್ ಮೇಸೆಜ್​ ರವಾನಿಸಿದ್ದಾರೆ..!

ನೆಟ್ಸ್​​ನಲ್ಲಿ ಮಾಹಿಯಿಂದ ಸಿಕ್ಸರ್​ಗಳ ಸುರಿಮಳೆ..!
ಐಪಿಎಲ್​​ ಸೆಕೆಂಡ್ ಫೇಸ್​​ಗಾಗಿ ಕಠಿಣಾಭ್ಯಾಸದಲ್ಲಿ ತೊಡಗಿರುವ ತಲಾ ಧೋನಿ, ನೆಟ್ಸ್​ನಿಂದಲೇ ಸ್ಟ್ರಾಂಗ್ ಕಮ್​​ಬ್ಯಾಕ್​ನ ಸೂಚನೆ ನೀಡಿದ್ದಾರೆ. ಐಸಿಸಿ ಅಕಾಡೆಮಿಯಲ್ಲಿ ನಡೆದ ಪ್ರಾಕ್ಟೀಸ್ ಸೆಷನ್‌ನಲ್ಲಿ ಸಿಕ್ಸರ್​​ಗಳ ಸುರಿಮಳೆಯನ್ನೇ ಗೈದಿದ್ದಾರೆ. ಅಭ್ಯಾಸದ ವೇಳೆಯೇ ಔಟ್​ ಆಫ್​​ದ ಪಾರ್ಕ್​​ಗೆ ಚೆಂಡನ್ನ ಅಟ್ಟಿರುವ ಧೋನಿ ಈ ಬಾರಿ ಮ್ಯಾಚ್ ಫಿನಿಷರ್ ಬ್ಯಾಟ್​ನಿಂದ ಭರಪೂರ ಮನರಂಜನೆ ಇರುತ್ತೆ ಎಂಬ ಭರವಸೆ ಹುಟ್ಟಿಸಿದ್ದಾರೆ.

ಸ್ಟ್ರಾಂಗ್​​ ಕಮ್​​ಬ್ಯಾಕ್​​ಗೆ ಎಮ್​​.ಎಸ್​.ಧೋನಿ ಸಜ್ಜು.!
ಯೆಸ್​..! ದುಬೈನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಹಾಗೂ 14ನೇ ಆವೃತ್ತಿಯ ಮೊದಲಾರ್ಧದಲ್ಲಿ ಧೋನಿ ಕಳಪೆ ಪ್ರದರ್ಶನ ನೀಡಿದ್ದಾರೆ. ತಂಡವನ್ನೂ ಗೆಲುವಿನ ದಡ ಸೇರಿಸುವಲ್ಲಿ ಎಡವಿದ್ದಾರೆ. 13ನೇ ಆವೃತ್ತಿಯಲ್ಲಿ ಪ್ಲೇ ಆಫ್​​ಗೆ ಎಂಟ್ರಿಕೊಡದಿರೋದಕ್ಕೆ ಇದೂ ಒಂದು ಕಾರಣವಾಗಿತ್ತು. ಇತ್ತಿಚಿನ ದಿನಗಳಲ್ಲಿ ಧೋನಿಯಲ್ಲಿದ್ದ ಮ್ಯಾಚ್​ ಫಿನಿಷರ್ ಮಾಯವಾಗಿದ್ದಾನಾ..? ಬ್ಯಾಟಿಂಗ್​ ಖದರ್ ಎಲ್ಲಿ..? ಎಂಬಿತ್ಯಾದಿ ಪ್ರಶ್ನೆಗಳು ಮೂಡಿದ್ದವು. ಇದೀಗ ಧೋನಿ ನೆಟ್ಸ್​ನಲ್ಲಿ ಸಿಡಿಸುತ್ತಿರುವ ಸಿಕ್ಸರ್​​ಗಳು ಹೊಸ ಭರವಸೆ ಮೂಡಿಸಿದೆ.

ಕೇವಲ ತಂಡಕ್ಕೆ ಮಾತ್ರವಲ್ಲ.. ಸ್ವತಃ ಧೋನಿಗೂ 2ನೇ ಹಂತದ ಐಪಿಎಲ್​ ನಿರ್ಣಾಯಕವಾಗಿದೆ. ಉಳಿದ ಪಂದ್ಯಗಳಲ್ಲಿ ನೀಡೋ ಪ್ರದರ್ಶನ ಐಪಿಎಲ್​ ಭವಿಷ್ಯವನ್ನೇ ನಿರ್ಧರಿಸಲಿದೆ. ಯಾಕಂದ್ರೆ, ಈ ಪ್ರದರ್ಶನದ ಆಧಾರದಲ್ಲೇ ಧೋನಿಯನ್ನ ಮುಂದಿನ ಅವೃತ್ತಿಗೆ ರಿಟೈನ್​​ ಮಾಡಿಕೊಳ್ಳಬೇಕಾ..? ಬೇಡವಾ..? ಅನ್ನೋ ಪ್ರಶ್ನೆಗೆ ಮ್ಯಾನೇಜ್​ಮೆಂಟ್​ ಉತ್ತರ ಕಂಡುಕೊಳ್ಳೋ ಪ್ರಯತ್ನದಲ್ಲಿದೆ.

Source: newsfirstlive.com Source link