ಸ್ಕೋರ್​​ ಎಷ್ಟು? ಅಂತ ಕಾಲೆಳೆಯಲು ಹೋದ ಇಂಗ್ಲೆಡ್​ ಫ್ಯಾನ್ಸ್​ಗೆ ಮೊಹಮ್ಮದ್‌ ಸಿರಾಜ್‌ ಸಖತ್​​ ಟಾಂಗ್

ಸ್ಕೋರ್​​ ಎಷ್ಟು? ಅಂತ ಕಾಲೆಳೆಯಲು ಹೋದ ಇಂಗ್ಲೆಡ್​ ಫ್ಯಾನ್ಸ್​ಗೆ ಮೊಹಮ್ಮದ್‌ ಸಿರಾಜ್‌ ಸಖತ್​​ ಟಾಂಗ್

ಮೂರನೇ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ಹೀನಾಯ ಪ್ರದರ್ಶನ ನೀಡಿದೆ. ಇಂಗ್ಲೆಂಡ್ ಬೌಲರ್​​​ಗಳ ಅಬ್ಬರಕ್ಕೆ ಕೇವಲ 78 ರನ್‍ಗಳಿಗೆ ಆಲೌಟ್ ಆಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ಮೊದಲ ಓವರ್​​ 5ನೇ ಎಸೆತಕ್ಕೆ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ಬಳಿಕ ರೋಹಿತ್ ಶರ್ಮಾ 19 ರನ್(105 ಎಸೆತ, 1 ಬೌಂಡರಿ), ಅಜಿಂಕ್ಯಾ ರಹಾನೆ 18 ರನ್(54 ಎಸೆತ, 3 ಬೌಂಡರಿ) ಹೊಡೆದರು. ಇದಾದ ನಂತರ ಉಳಿದ ಎಂಟು ಮಂದಿಯೂ ಸಿಂಗಲ್ ಡಿಜಿಟ್ ರನ್ ಹೊಡೆದು ಔಟಾದರು.

ಜೇಮ್ಸ್ ಆಂಡರ್ಸನ್ ಮತ್ತು ಕ್ರೇಗ್ ಓವರ್ಟನ್ ತಲಾ ಉತ್ತಮ ಬೌಲಿಂಗ್​​ ಮಾಡುವ ಮೂಲಕ ತಲಾ ಮೂರು ವಿಕೆಟ್ ಪಡೆದರು. ಒಲಿ ರಾಬಿನ್‍ಸನ್ ಮತ್ತು ಸ್ಯಾಮ್ ಕರ್ರನ್ ತಲಾ 2 ವಿಕೆಟ್ ಪಡೆದರು. ಇದರ ಪರಿಣಾಮ ಭಾರತ ಮೊದಲ ಇನ್ನಿಂಗ್ಸ್​​ನಲ್ಲಿ 78 ರನ್ ಗಳಿಸಿತು.

ಇನ್ನು, ನಂತರ ಬ್ಯಾಟ್​​ ಮಾಡಿದ ಇಂಗ್ಲೆಡ್​​ ಯಾವುದೇ ವಿಕೆಟ್​​ ಇಲ್ಲದೆ ಮೊದಲ ದಿನ 42 ಓವರ್​​ಗಳಲ್ಲಿ 120 ರನ್​​ ಗಳಿಸಿತು. ಹೀಗಿರುವಾಗ ಪಂದ್ಯದ ಮಧ್ಯದಲ್ಲೇ ಭಾರತೀಯ ವೇಗಿ ಮೊಹಮ್ಮದ್‌ ಸಿರಾಜ್‌ ಕಾಲೆಳೆಯಲು ಹೋಗಿ ಅವಮಾನಕ್ಕೀಡಾಗಿದ್ದಾರೆ.

ಹೌದು, ಮೊದಲ ದಿನದ ಇನ್ನಿಂಗ್ಸ್​ ನಡೆಯುತ್ತಿರುವಾಗಲೇ ಭಾರತದ ಸ್ಕೋರ್​​ ಎಷ್ಟು ಎಂದು ಫೀಲ್ಡಿಂಗ್​​​ ಮಾಡುತ್ತಿದ್ದ ಸಿರಾಜ್​​ಗೆ ಇಂಗ್ಲೆಂಡ್​​ ಫ್ಯಾನ್ಸ್​ ಬೇಕಂತಲೇ ಕೇಳಿದ್ದಾರೆ. ಈ ವೇಳೆ ಸಿರಾಜ್​​​​ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 1-0 ಮುನ್ನಡೆ ಪಡೆದುಕೊಂಡಿದೆ ಎಂದು ಕೈನಲ್ಲೇ ಸಿಂಬಲ್​​ ಮೂಲಕ ತೋರಿಸಿ ಖಡಕ್​​​​ ರಿಯಾಕ್ಷನ್​​​ ಕೊಟ್ಟಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ 151 ರನ್‍ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಮೂಲಕ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ.

ಇದನ್ನೂ ಓದಿ: ಲಾರ್ಡ್ಸ್​​​ನಲ್ಲಿ ಇಂಡೋ-ಇಂಗ್ಲೆಂಡ್​​ ಸ್ಲೆಡ್ಜಿಂಗ್​​ ವಾರ್​.. ಬೂಮ್ರಾ-ಆ್ಯಂಡರ್​ಸನ್​ ಮಧ್ಯೆ ಮಾತಿನ ಚಕಮಕಿ

ಮೊಹಮ್ಮದ್‌ ಸಿರಾಜ್‌ 2ನೇ ಟೆಸ್ಟ್​​ನ ಎರಡೂ ಇನ್ನಿಂಗ್ಸ್‌ಗಳಲ್ಲಿ (4/94 ಮತ್ತು 4/32) ನಾಲ್ಕು ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಸ್ಟಾರ್‌ ಎನಿಸಿಕೊಂಡಿದ್ದರು. ಮೂರನೇ ಟೆಸ್ಟ್​ ಮೊದಲ ಇನ್ನಿಂಗ್ಸ್​ನಲ್ಲಿ ಮೊದಲ ದಿನ ಉತ್ತಮ ಬೌಲಿಂಗ್​​​ ಮಾಡಿದ್ದರಾದರೂ ವಿಕೆಟ್​​​ ಪಡೆಯುವಲ್ಲಿ ವಿಫಲರಾದರು.

Source: newsfirstlive.com Source link