ಕಾಬೂಲ್​ ಏರ್​ಪೋರ್ಟ್​ ಹೊರಗೆ ಲೀ.ನೀರಿನ ಬೆಲೆ ₹3 ಸಾವಿರ, ಪ್ಲೇಟ್ ಅನ್ನಕ್ಕೆ ₹7 ಸಾವಿರ

ಕಾಬೂಲ್​ ಏರ್​ಪೋರ್ಟ್​ ಹೊರಗೆ ಲೀ.ನೀರಿನ ಬೆಲೆ ₹3 ಸಾವಿರ, ಪ್ಲೇಟ್ ಅನ್ನಕ್ಕೆ ₹7 ಸಾವಿರ

ಕಾಬೂಲ್​: ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಇಡೀ ದೇಶದ ಪರಿಸ್ಥಿತಿ ಅಯೋಮಯವಾಗಿದೆ. ಅದ್ರಲ್ಲೂ ಕಾಬೂಲ್ ಎರ್​ಪೋರ್ಟ್​ ಬಳಿ ಎಲ್ಲೆಲ್ಲೂ ಅಲ್ಲಿನ ನಾಗರಿಕರು ನಮ್ಮನ್ನು ದಯವಿಟ್ಟು ಇಲ್ಲಿಂದ ಬೇರೆ ಯಾವುದಾದರೂ ದೇಶಕ್ಕೆ ಕರೆದೊಯ್ಯಿರಿ ಎಂದು ಅಂಗಲಾಚುತ್ತಿದ್ದಾರೆ. ಏರ್ಪೋರ್ಟ್​ನ ಹೊರಗೆ ತಾಲಿಬಾನಿಗಳು ಸುತ್ತುವರಿದಿರುವ ಬಗ್ಗೆಯೂ ವರದಿಗಳಾಗಿವೆ.

ಇದನ್ನೂ ಓದಿ: ತಾಲಿಬಾನಿಗಳಿಂದ ಬೆದರಿಕೆ; ತನ್ನ ಪ್ರಜೆಗಳಿಗೆ ಕಾಬೂಲ್ ಏರ್ಪೋರ್ಟ್ ತೊರೆಯುವಂತೆ ಹೇಳಿದ ಅಮೆರಿಕ

ಈ ಮಧ್ಯೆ ಕಾಬೂಲ್ ಏರ್​ಪೋರ್ಟ್​​​ನ ಹೊರಗೆ ನೀರು ಮತ್ತು ಆಹಾರದ ಬೆಲೆ ಗಗನಕ್ಕೇರಿದೆ. ಸಾಮಾನ್ಯ ಜನರು ನೀರು ಮತ್ತು ಅನ್ನ ಖರೀದಿಸಿ ತಿನ್ನಲಾಗದಂಥ ಪರಿಸ್ಥಿತಿ ಎದುರಾಗಿದೆ ಎಂಬ ಮಾಹಿತಿ ಇದೆ. ಮಾಧ್ಯಮವೊಂದರ ವರದಿಯ ಪ್ರಕಾರ ಕಾಬೂಲ್​ ಏರ್​ಪೋರ್ಟ್​ನ ಹೊರಗೆ ಲೀಟರ್ ನೀರಿನ ಬೆಲೆ ₹3,000 ಇದ್ರೆ ಒಂದು ಪ್ಲೇಟ್ ಅನ್ನದ ಬೆಲೆ ₹7,000.

ಇದನ್ನೂ ಓದಿ: ತಾಲಿಬಾನಿಗಳಿಗೆ ಮರ್ಮಾಘಾತ; ಹಣಕಾಸಿನ ನೆರವು ತಡೆಹಿಡಿದ ವಿಶ್ವಬ್ಯಾಂಕ್

ಒಂದು ವರದಿಯ ಪ್ರಕಾರ ಕಾಬೂಲ್ ಏರ್​ಪೋರ್ಟ್​ನ ಹೊರಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ಬೇರೆ ದೇಶಗಳಿಗೆ ತೆರಳಲು ತಯಾರಾಗಿ ಒಂದೆಡೆ ಸೇರಿದ್ದಾರೆ. ಹಗಲು ಮತ್ತು ರಾತ್ರಿ ಪೂರ ಏರ್​ಪೋರ್ಟ್​ನಲ್ಲಿ ಜನರನ್ನು ವಿದೇಶಗಳಿಗೆ ಕರೆದೊಯ್ಯುವ ಕೆಲಸ ನಡೆಯುತ್ತಿದೆ ಎಂದು ಹೇಳಲಾಗಿದೆ.

Source: newsfirstlive.com Source link