ಕೋಳಿ ಫಾರಂ​ಗೆ ಅಕ್ರಮ ವಿದ್ಯುತ್ ಸಂಪರ್ಕ; ಅಪರಾಧಿಗೆ 1 ವರ್ಷ ಜೈಲು, ₹2.94 ಲಕ್ಷ ದಂಡ

ಕೋಳಿ ಫಾರಂ​ಗೆ ಅಕ್ರಮ ವಿದ್ಯುತ್ ಸಂಪರ್ಕ; ಅಪರಾಧಿಗೆ 1 ವರ್ಷ ಜೈಲು, ₹2.94 ಲಕ್ಷ ದಂಡ

ದಾವಣಗೆರೆ: ಕೋಳಿ ಫಾರಂ​ಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡ ಹಿನ್ನೆಲೆಯಲ್ಲಿ ಅಪರಾಧಿಗೆ ಕೋರ್ಟ್​ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಿದೆ. ದಾವಣಗೆರೆಯ 1ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​, ಕೋಳಿ ಫಾರಂ ಮಾಲೀಕ ನಿಜಾಮುದ್ದೀನ್​​ಗೆ 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

2018ರಲ್ಲಿ ಜಗಳೂರು ತಾಲೂಕಿನ ಗೋಗುದ್ದ ಗ್ರಾಮ ಗ್ರಾಮದಲ್ಲಿ ನಿಜಾಮುದ್ದೀನ್​​ ಕೋಳಿ ಫಾರಂನ 4 ಶೆಡ್​​ಗಳಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಮಾಡಿಕೊಂಡಿದ್ದ. 1 ವರ್ಷ ಕಾಲ 96,000 ವ್ಯಾಟ್​ ವಿದ್ಯುತ್ ಬಳಸಿಕೊಂಡಿದ್ದ. ಈ ಅಕ್ರಮವನ್ನು ಬೆಸ್ಕಾಂ ಎಇಇ ಜಿ.ಎಂ. ನಾಯ್ಕ್ ದಾಳಿ ನಡೆಸಿ ಪತ್ತೆ ಹಚ್ಚಿದ್ದರು.

ಬಳಿಕ ನಿಜಾಮುದ್ದೀನ್​​ ವಿರುದ್ಧ ಜಿ.ಎಂ. ನಾಯ್ಕ್ ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಬುಧವಾರ ತೀರ್ಪು ನೀಡಿರುವ ನ್ಯಾಯಾಧೀಶ ಜೆ.ವಿ ವಿಜಯಾನಂದ ಅಪರಾಧಿಗೆ 1 ವರ್ಷ ಜೈಲು, 2.94 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.

ಇದನ್ನೂ ಓದಿ: ಸ್ವಂತ ಪತಿಗೆ ಬರೋಬ್ಬರಿ ₹4 ಕೋಟಿ ಹಣ ಪಂಗನಾಮ ಹಾಕಿ ಎಸ್ಕೇಪ್ ಆದ ಪತ್ನಿ

Source: newsfirstlive.com Source link