ಭವಿಷ್ಯದ ಮೈತ್ರಿಗೆ ಮುನ್ನುಡಿ ಬರೀತಾ ದಳ-ಕಮಲ ?

ಭವಿಷ್ಯದ ಮೈತ್ರಿಗೆ ಮುನ್ನುಡಿ ಬರೀತಾ ದಳ-ಕಮಲ ?

ಬೆಂಗಳೂರು: ನಿನ್ನೆ ನಡೆದ ಮೈಸೂರು ಮೇಯರ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅಭ್ಯರ್ಥಿಯೋರ್ವರಿಗೆ ಮೇಯರ್ ಪಟ್ಟ ಲಭಿಸಿದೆ. ಇನ್ನು ಬಿಜೆಪಿ ಅಭ್ಯರ್ಥಿ ಗೆಲ್ಲಲು ಕಾರಣವಾಗಿದ್ದು ಜೆಡಿಎಸ್​ನ ಬಾಹ್ಯ ಬೆಂಬಲ ಎನ್ನಲಾಗಿದೆ.

ಹೀಗಾಗಿ ಈ ಮೇಯರ್ ಚುನಾವಣೆಯ ಫಲಿತಾಂಶ ಭವಿಷ್ಯದ ಬಿಜೆಪಿ-ಜೆಡಿಎಸ್​ ಮೈತ್ರಿಗೆ ಮುನ್ನುಡಿ ಬರೆಯುತ್ತಾ ಎಂಬ ಲೆಕ್ಕಾಚಾರ ಶುರುವಾಗಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲ್ಲುವ ಅತ್ಯುತ್ಸಾಹದಲ್ಲಿದೆ. ಕಾಂಗ್ರೆಸ್‌‌ಗೆ ಬ್ರೇಕ್ ಹಾಕಲು ಬಿಜೆಪಿ ಜೊತೆ ದಳಪತಿಗಳು ಕೈ ಜೋಡಿಸಿದ್ರಾ..? ಹೌದು ಎನ್ನುತ್ತವೆ ಜೆಡಿಎಸ್‌ ನಾಯಕರ ಇತ್ತೀಚಿನ ನಡೆ.

blank

ಕಾಂಗ್ರೆಸ್ ಕರೆದ ಬಿಜೆಪಿ ವಿರೋಧಿ‌ ಪಕ್ಷಗಳ ಸಭೆಗೆ ಜೆಡಿಎಸ್ ಗೈರಾಗಿತ್ತು.. ತಾಲಿಬಾನ್ ದುಷ್ಕೃತ್ಯ ಸಂಬಂಧ ನಾಳೆ ಪ್ರಧಾನಿ ಕರೆದಿರುವ ಸಭೆಯಲ್ಲಿ ಹೆಚ್.ಡಿ.ದೇವೆಗೌಡ ಭಾಗಿಯಾಗಲಿದ್ದಾರೆ. ಪ್ರತಿಷ್ಟಿತ ಮೈಸೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡಿರುವ ಜೆಡಿಎಸ್​ ನಡೆ ಭವಿಷ್ಯದ ಮೈತ್ರಿಗೆ ಪುಷ್ಟಿ ನೀಡಿದೆ ಎಂಬ ಮಾತುಗಳು ಕೇಳಿಬರ್ತಿವೆ.

Source: newsfirstlive.com Source link